ಎಂಸಿ.ಸಿ. ಬ್ಯಾಂಕಿನಲ್ಲಿ ೭೯ನೇ ಸ್ವಾತಂತ್ರ್ಯ ದಿನಾಚರಣೆ

KannadaprabhaNewsNetwork |  
Published : Aug 16, 2025, 12:02 AM IST
ಮಂಗಳೂರು ನಗರ ಸಂಚಾರಿ ವಾರ್ಡನ್‌ಗಳನ್ನು ಗೌರವಿಸುತ್ತಿರುವುದು  | Kannada Prabha

ಸಾರಾಂಶ

ಎಂಸಿಸಿ ಬ್ಯಾಂಕ್ ಮಂಗಳೂರು ಇದರ ಆಡಳಿತ ಕಚೇರಿಯಲ್ಲಿ ೭೯ ನೇ ಸ್ವಾತಂತ್ರ್ಯೋತ್ಸವವನ್ನು ಶುಕ್ರವಾರ ಆಚರಿಸಲಾಯಿತು. ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ, ಸಹಕಾರ ರತ್ನ ಅನಿಲ್ ಲೋಬೊ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಎಂಸಿಸಿ ಬ್ಯಾಂಕ್ ಮಂಗಳೂರು ಇದರ ಆಡಳಿತ ಕಚೇರಿಯಲ್ಲಿ ೭೯ ನೇ ಸ್ವಾತಂತ್ರ್ಯೋತ್ಸವವನ್ನು ಶುಕ್ರವಾರ ಆಚರಿಸಲಾಯಿತು. ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ, ಸಹಕಾರ ರತ್ನ ಅನಿಲ್ ಲೋಬೊ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಮತ್ತು ನೋಟರಿ ಪಬ್ಲಿಕ್, ಕುದ್ರೋಳಿ ದೇವಸ್ಥಾನ ಟ್ರಸ್ಟ್‌ನ ಖಜಾಂಚಿ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಹೋರಾಟದ ಫಲವಾಗಿ ಸ್ವಾತಂತ್ರ್ಯ ಲಭಿಸಿತು. ಇಂದಿನ ದಿನಗಳಲ್ಲಿ ವೈವಿಧ್ಯತೆಯಲ್ಲಿ ಏಕತೆಯನ್ನು ಅನುಸರಿಸುವಾಗ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವಂತೆ ಕರೆ ನೀಡಿದರು.

ನ್ಯಾಯವಾದಿ, ಪಾಲಿಕೆ ಮಾಜಿ ಸದಸ್ಯ ಎ.ಸಿ. ವಿನಯರಾಜ್, ಎಂ.ಸಿ.ಸಿ. ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಪ್ರೊ. ಎಡ್ಮಂಡ್ ಫ್ರಾಂಕ್ ಮತ್ತು ಮಾಜಿ ವೃತ್ತಿಪರ ನಿರ್ದೇಶಕ ಮೈಕೆಲ್ ಡಿಸೋಜಾ ಅತಿಥಿಗಳಾಗಿದ್ದರು.

ನಗರ ಸಂಚಾರ ನಿರ್ವಹಣೆಗೆ ನಿಸ್ವಾರ್ಥ ಕೊಡುಗೆ ನೀಡಿದ ಮಂಗಳೂರು ನಗರದ ಸಂಚಾರ ವಾರ್ಡನ್‌ಗಳಾದ ಫ್ರಾನ್ಸಿಸ್ ಮ್ಯಾಕ್ಸಿಮ್ ಮೊರಾಸ್, ಸುನಿಲ್ ಜಾನ್ ಡಿಸೋಜಾ, ಜಯಂತಿ ಮತ್ತು ಮಾರ್ಸೆಲ್ ಜಾನ್ ರೊಡ್ರಿಗಸ್ ಅವರನ್ನು ಸನ್ಮಾನಿಸಲಾಯಿತು.ಮಂಗಳೂರು ಡಯಾಸಿಸ್ ಕೊಂಕಣಿ ಕ್ಯಾಥೋಲಿಕ್ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಬ್ಯಾಂಕಿನ ನಿರ್ದೇಶಕ ಸುಶಾಂತ್‌ ಸಲ್ದಾನಾ ಅವರನ್ನು ಗೌರವಿಸಲಾಯಿತು. ಬ್ಯಾಂಕಿನ ನಿರ್ದೇಶಕ ರೋಶನ್ ಡಿಸೋಜಾ ಅವರನ್ನು ನ್ಯಾಯಾವಾದಿಗಳಾಗಿ ೨೫ ವರ್ಷ ಪೂರೈಸಿದ ಸಂದರ್ಭದಲ್ಲಿ ಗೌರವಿಸಲಾಯಿತು.ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ, ನಿರ್ದೇಶಕರಾದ ಅನಿಲ್ ಪತ್ರಾವೊ, ರೋಶನ್ ಡಿಸೋಜಾ, ಐರೀನ್ ರೆಬೆಲ್ಲೊ, ಡೇವಿಡ್ ಡಿಸೋಜಾ, ಹೆರಾಲ್ಡ್ ಮಾಂತೇರೊ, ಡಾ. ಜೆರಾಲ್ಡ್ ಪಿಂಟೊ, ಮೆಲ್ವಿನ್ ವಾಸ್, ಎಲ್ರಾಯ್ ಕ್ರಾಸ್ಟೊ, ಸಿ.ಜಿ. ಪಿಂಟೊ, ಸುಶಾಂತ್ ಸಲ್ಡಾನಾ, ಫೆಲಿಕ್ಸ್ ಡಿಕ್ರೂಜ್, ಶರ್ಮಿಳಾ ಮೆನೇಜಸ್, ಆಲ್ವಿನ್ ಪಿ. ಮೊಂತೇರೊ ಮತ್ತಿತರರಿದ್ದರು.

ಜೈಸನ್ ಶಿರ್ತಾಡಿ ನಿರೂಪಿಸಿ, ಜನರಲ್ ಮೆನೇಜರ್ ಸುನಿಲ್ ಮಿನೇಜಸ್ ವಂದಿಸಿದರು.

-----------------

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!