ಜೂನ್‌ 15ರಂದು 7ನೇ ವರ್ಷದ ಪ್ರತಿಭಾ ಪುರಸ್ಕಾರ: ರಾಜಗೋಪಾಲ

KannadaprabhaNewsNetwork |  
Published : Jun 13, 2025, 04:20 AM IST
ರಾಜಗೋಪಾಲ ಇ.ಕಡ್ಲಿಕೊಪ್ಪ | Kannada Prabha

ಸಾರಾಂಶ

ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಂಗ ಸಂಸ್ಥೆಗಳ ಸಹಯೋಗದಲ್ಲಿ 7ನೇ ವರ್ಷದ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಕಲಿಕಾ ಸಾಮಗ್ರಿಗಳ ವಿತರಣೆ, ವಿಶ್ವಕರ್ಮ ನೌಕರಶ್ರೀ, ವಿಶ್ವಕರ್ಮ ಸಾಧಕಶ್ರೀ ಪ್ರಶಸ್ತಿ ಕಾರ್ಯಕ್ರಮ ಜೂ.15ರಂದು ಬೆಳಗ್ಗೆ 9.30ಕ್ಕೆ ನಗರದ ವಿಶ್ವಕರ್ಮ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಇ.ಕಡ್ಲಿಕೊಪ್ಪ ಹೇಳಿದರು.

ಗದಗ: ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಂಗ ಸಂಸ್ಥೆಗಳ ಸಹಯೋಗದಲ್ಲಿ 7ನೇ ವರ್ಷದ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಕಲಿಕಾ ಸಾಮಗ್ರಿಗಳ ವಿತರಣೆ, ವಿಶ್ವಕರ್ಮ ನೌಕರಶ್ರೀ, ವಿಶ್ವಕರ್ಮ ಸಾಧಕಶ್ರೀ ಪ್ರಶಸ್ತಿ ಕಾರ್ಯಕ್ರಮ ಜೂ.15ರಂದು ಬೆಳಗ್ಗೆ 9.30ಕ್ಕೆ ನಗರದ ವಿಶ್ವಕರ್ಮ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಇ.ಕಡ್ಲಿಕೊಪ್ಪ ಹೇಳಿದರು. ನಗರದ ವಿಶ್ವಕರ್ಮ ಸಮುದಾಯ ಭವನದಲ್ಲಿ ನಡೆದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರತಿ ವರ್ಷದಂತೆ ಈ ವರ್ಷ ಕೂಡಾ ವಿಶ್ವಕರ್ಮ ಸಮಾಜದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಗಣನೀಯ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದೊಂದಿಗೆ ಕಲಿಕಾ ಸಾಮಗ್ರಿಗಳ ವಿತರಣೆ ನಡೆಯಲಿದೆ. ಸಮಾರಂಭದ ಸಾನಿಧ್ಯವನ್ನು ಇಳಕಲ್-ಕೂಡಲಸಂಗಮ ಶ್ರೀಮತ್ ಆನೇಗುಂದಿ ಪಂಚ ಸಿಂಹಾಸನ ಸರಸ್ವತಿ ಪೀಠ, ವಿಶ್ವಕರ್ಮ ಬ್ರಹ್ಮಾಂಡಭೇರಿಮಠದ ಶ್ರೀ ವಿಶ್ವನಾಥ ಸಾಮೀಜಿ, ಶಿರೋಳ ಶ್ರೀಯಚ್ಚರಸ್ವಾಮಿ ಗವಿಮಠದ ಶ್ರೀಅಭಿನವ ಯಚ್ಚರ ಸ್ವಾಮೀಜಿ ಹಾಗೂ ಶಿರಗುಪ್ಪ ಕರಸ್ಥಳ ನಾಗಲಿಂಗಸ್ವಾಮಿ ಮಠ ಉಪ್ಪಾರಹಳ್ಳಿಯ ಶ್ರೀ ಸುರೇಂದ್ರಸ್ವಾಮೀಜಿ ವಹಿಸುವರು ಎಂದರು. ಶಾಸಕ ಸಿ.ಸಿ.ಪಾಟೀಲ ಸಮಾರಂಭ ಉದ್ಘಾಟಿಸುವರು. ಕಟ್ಟಡದ ಮಹಾದಾನಿಗಳ ಭಾವಚಿತ್ರ ಅನಾವರಣವನ್ನು ವಿಪ ಸದಸ್ಯ ಎಸ್.ವಿ. ಸಂಕನೂರ ನೆರವೇರಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಡಿ. ಕಡ್ಲಿಕೊಪ್ಪ ವಹಿಸುವರು. ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ, ಶಿರಹಟ್ಟಿ ತಹಸೀಲ್ದಾರ್ ಅನಿಲ ಬಡಿಗೇರ ಹಾಗೂ ಲಕ್ಷ್ಮೇಶ್ವರ ತಹಸೀಲ್ದಾರ್‌ ವಾಸುದೇವ ವಿ.ಸ್ವಾಮಿ ಆಗಮಿಸುವರು. ಶಿರಸಂಗಿ ವಿಶ್ವಕರ್ಮ ಪ್ರತಿಷ್ಠಾನ ಅಧ್ಯಕ್ಷ ಮೋಹನ ಎಸ್. ಸುಳ್ಳದ ಹಾಗೂ ಕಲಘಟಗಿ ಉದ್ಯಮಿದಾರ ಶ್ರೀಶೈಲ ಶ.ಸುತಾರ ಅವರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡುವರು ಎಂದು ತಿಳಿಸಿದರು. ನಿವೃತ್ತ ಪ್ರಾ. ಶಶಿಧರ ಗ. ಅರ್ಕಸಾಲಿ, ರಾಜ್ಯ ಉಗ್ರಾಣ ನಿಗಮದ ಬಸಪ್ಪ ಬಿ. ಬಡಿಗೇರ, ಕೆವಿಜಿ ಬ್ಯಾಂಕ್ ಸಿಬ್ಬಂದಿ ಎಂ.ವಿ. ಸೂಡಿ ಹಾಗೂ ಕೆಸಿಸಿ ಬ್ಯಾಂಕ್ ಸಿಬ್ಬಂದಿ ಸುಭಾಷ ವಿ. ಅಕ್ಕಸಾಲಿಗರ ಅವರಿಗೆ ವಿಶ್ವಕರ್ಮ ನೌಕರಶ್ರೀ ಪ್ರಶಸ್ತಿ ನೀಡಲಾಗುವುದು. ಮಾನಪ್ಪ ಮ. ಬಡಿಗೇರ, ತುಂಗಮ್ಮ ವಿ. ಪತ್ತಾರ, ರಾಘವೇಂದ್ರ ನಿ. ಬಡಿಗೇರ ಹಾಗೂ ಶಂಕ್ರಪ್ಪ ಕಾ. ಬಡಿಗೇರ ಅವರಿಗೆ ವಿಶ್ವಕರ್ಮ ಸಾಧಕಶ್ರೀ ಪ್ರಶಸ್ತಿ ನೀಡಲಾಗುವುದು. ಇದೇ ವೇಳೆ ನಿವೃತ್ತ ದಂಪತಿಗಳನ್ನು ಹಾಗೂ ವಿಶ್ವಕರ್ಮ ಭವನ ಹಾಗೂ ವಿದ್ಯಾರ್ಥಿ ವಸತಿ ನಿಲಯ ಕಟ್ಟಡಗಳ ದಾನಿಗಳನ್ನು ಸನ್ಮಾನಿಸಲಾಗುವುದು ಎಂದು ವಿವರಿಸಿದರು. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಡಾ. ಸಿ.ವಿ. ಬಡಿಗೇರ, ಪದಾಧಿಕಾರಿಗಳಾದ ಕೆ.ಎಸ್. ಬಡಿಗೇರ, ವಿ.ವಿ. ರಾಜನಾಳ, ಡಾ. ಗಿರೀಶ ಬಡಿಗೇರ, ಮಹೇಶ ಕ್ಮಮಾರ ಸೇರಿದಂತೆ ಗಣ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ