ಡಿ.7ರಂದು 7ನೇ ತ್ರೈವಾರ್ಷಿಕ ರಾಜ್ಯ ಸಮ್ಮೇಳನ: ಎಸ್.ಎನ್.ವಾಸುದೇವ್

KannadaprabhaNewsNetwork |  
Published : Dec 05, 2025, 12:30 AM IST
4ಕೆಎಂಎನ್ ಡಿ19 | Kannada Prabha

ಸಾರಾಂಶ

ಬೆಳಗ್ಗೆ 11.30ಕ್ಕೆ ಶ್ರೀರಂಗಪಟ್ಟಣದ ಶ್ರೀಅಯ್ಯಪ್ಪಸ್ವಾಮಿ ಕಲ್ಯಾಣ ಕಲ್ಯಾಣ ಮಂಟಪದಿಂದ ಪೂರ್ಣಯ್ಯನವರ ಬೀದಿ ಹಾಗೂ ಮುಖ್ಯರಸ್ತೆ ಮೂಲಕ ಕಾರ್ಮಿಕರ ಬೃಹತ್ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ ಊಟದ ನಂತರ ಸಂಜೆ 5.30ರವರೆಗೆ ಅಧಿವೇಶನ ಮುಂದುವರಿಯಲಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣದ ಶ್ರೀಅಯ್ಯಪ್ಪಸ್ವಾಮಿ ಕಲ್ಯಾಣ ಮಂಟಪದಲ್ಲಿ ಡಿ.7ರಂದು ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ 7ನೇ ತ್ರೈವಾರ್ಷಿಕ ರಾಜ್ಯ ಸಮ್ಮೇಳನ ನಡೆಯಲಿದೆ ಎಂದು ಗೌರವಾಧ್ಯಕ್ಷ ಎಸ್.ಎನ್ ವಾಸುದೇವ್ ತಿಳಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 9.30ಕ್ಕೆ ಸಮ್ಮೇಳನದಲ್ಲಿ ರಾಜ್ಯ ಹಾಗೂ ದೇಶದ ಪ್ರಮುಖ ಬಿಎಂಎಸ್ ನಾಯಕರು ಭಾಗವಹಿಸಲಿದ್ದಾರೆ. ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಉದ್ಘಾಟಿಸುವರು. ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಯುವ ಮುಖಂಡ ಎಸ್.ಸಚ್ಚಿದಾನಂದ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಬೆಳಗ್ಗೆ 11.30ಕ್ಕೆ ಕಲ್ಯಾಣ ಮಂಟಪದಿಂದ ಪೂರ್ಣಯ್ಯನವರ ಬೀದಿ ಹಾಗೂ ಮುಖ್ಯರಸ್ತೆ ಮೂಲಕ ಕಾರ್ಮಿಕರ ಬೃಹತ್ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ ಊಟದ ನಂತರ ಸಂಜೆ 5.30ರವರೆಗೆ ಅಧಿವೇಶನ ಮುಂದುವರಿಯಲಿದೆ. ಕಟ್ಟಡ ಕಾರ್ಮಿಕರ ಹಲವು ಸಮಸ್ಯೆಗಳಾದ ಸ್ಕಾಲರ್ ಶಿಪ್ ಬರೆದಿರುವುದು, ಕಾರ್ಡ್‌ನ ನವೀಕರಣ. ಈ ಹಿಂದೆ ಇದ್ದಂತೆ ಮೂರು ವರ್ಷಗಳಿಗೆ ಏರಿಸುವುದು, ಮನೆ ಮಾಲೀಕರ ಲೈಸನ್ಸ್ ಕೇಳುವುದನ್ನು ರದ್ದು ಪಡಿಸುವುದು, ಮನೆ ಕಟ್ಟಲು ಸಾಲ ನೀಡುವುದು, ಕಡಿತಗೊಂಡಿರುವ ಸೌಲಭ್ಯಗಳನ್ನು ಈ ಹಿಂದಿನಂತೆ ಹೆಚ್ಚಿಸಲು ಒತ್ತಾಯ ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ಚರ್ಚಿಸಿ, ನಮ್ಮ ಬೇಡಿಕೆಗಳನ್ನು ಗೊತ್ತುವಳಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಆರ್.ಕೆಂಚೇಗೌಡ, ಉಪಾಧ್ಯಕ್ಷ ಸುರೇಶ್, ಪ್ರಧಾನ ಕಾರ್ಯದರ್ಶಿ ಎಸ್.ರಾಜು, ಎನ್.ರಾಮಚಂದ್ರ ಇದ್ದರು.

ಡಿ.6 ರಂದು ಸಾರ್ವಜನಿಕರ ಸಭೆ: ಕೆ.ಎಂ.ಉದಯ್

ಮದ್ದೂರು: ನಗರದ ಪ್ರವಾಸಿ ಮಂದಿರದ ವೃತ್ತದಿಂದ ಕೊಲ್ಲಿ ವೃತ್ತದವರೆಗಿನ ರಸ್ತೆ ಅಗಲೀಕರಣ ಕಾಮಗಾರಿ ವಿಷಯವಾಗಿ ಚರ್ಚಿಸಲು ಶಾಸಕ ಕೆ.ಎಂ.ಉದಯ್ ಅಧ್ಯಕ್ಷತೆಯಲ್ಲಿ ಡಿ.6ರಂದು ಪ್ರವಾಸಿ ಮಂದಿರ ಆವರಣದಲ್ಲಿ ಸಾರ್ವಜನಿಕರ ಸಭೆ ನಡೆಯಲಿದೆ. ರಸ್ತೆ ಅಗಲೀಕರಮ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ಬೆಂಗಳೂರಿನಲ್ಲಿ ಶಾಸಕ ಕೆ.ಎಂ.ಉದಯ್ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ನಡೆದ ಸಭೆ ನಂತರ ಸಂಪುಟ ಸಭೆಗೆ ಪ್ರಸ್ತಾವನೆ ಸಲ್ಲಿಸುವಂತೆ ಸಿಎಂ ಸೂಚನೆ ಬೆನ್ನಲ್ಲೆ ಶಾಸಕರು ಆಯೋಜಿಸಿದ್ದಾರೆ.

ಮಧ್ಯಾಹ್ನ 3.30 ಗಂಟೆಗೆ ನಡೆಯುವ ಸಭೆಗೆ ಮದ್ದೂರು ಪೇಟೆಬೀದಿಯ ವರ್ತಕರು, ಬೀದಿ ಬದಿ ವ್ಯಾಪಾರಿಗಳು, ಕಟ್ಟಡಗಳ ಮಾಲೀಕರು, ನಗರದ ನಾಗರೀಕರು, ಜನಪ್ರತಿನಿಧಿಗಳು ಹಾಗೂ ಮದ್ದೂರು ವಿಧಾನಸಭಾ ಕ್ಷೇತ್ರದ ಆಸಕ್ತ ಸಾರ್ವಜನಿಕರು ಭಾಗವಹಿಸಿ ಸಲಹೆ ಸೂಚನೆ ನೀಡುವಂತೆ ಶಾಸಕರು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿತ ಬಿಟ್ಟು ನವ ಜೀವನಕ್ಕೆ ಕಾಲಿಟ್ಟ ಸಮೂಹ; ಹೆಗ್ಗಡೆಯವರ ಸಂಕಲ್ಪ ಸಾರ್ಥಕ
ಮಕ್ಕಳಲ್ಲಿ ಪತ್ರಿಕೆಗಳು, ಸಾಹಿತ್ಯ ಪುಸ್ತಕ ಓದುವ ಹವ್ಯಾಸ ಬೆಳೆಸಿ: ಟಿ.ಸತೀಶ್ ಜವರೇಗೌಡ