ರಾಯರಪಾಳ್ಯದಲ್ಲಿ 8 ಅಡಿ ಉದ್ದ ಹೆಬ್ಬಾವು ಪ್ರತ್ಯಕ್ಷ

KannadaprabhaNewsNetwork | Published : Jan 14, 2024 1:32 AM

ಸಾರಾಂಶ

ದಾಬಸ್‌ಪೇಟೆ : ಸೋಂಪುರ ಹೋಬಳಿಯ ರಾಯರಪಾಳ್ಯ ಗ್ರಾಮದ, ಎಸ್.ಆರ್.ಎಸ್.ಇಟ್ಟಿಗೆ ಕಾರ್ಖಾನೆಯಲ್ಲಿ ಹೆಬ್ಬಾವು ಪ್ರತ್ಯಕ್ಷವಾಗಿದೆ.

ದಾಬಸ್‌ಪೇಟೆ : ಸೋಂಪುರ ಹೋಬಳಿಯ ರಾಯರಪಾಳ್ಯ ಗ್ರಾಮದ, ಎಸ್.ಆರ್.ಎಸ್.ಇಟ್ಟಿಗೆ ಕಾರ್ಖಾನೆಯಲ್ಲಿ ಹೆಬ್ಬಾವು ಪ್ರತ್ಯಕ್ಷವಾಗಿದೆ.

ಆಹಾರ ಹುಡುಕಿಕೊಂಡು ರಾಯರಪಾಳ್ಯ ಪ್ರತಾಪ್ ಎಂಬುವವರಿಗೆ ಸೇರಿದ ಇಟ್ಟಿಗೆ ಕಾರ್ಖಾನೆಯಲ್ಲಿದ್ದ, 8 ಅಡಿ ಉದ್ದದ ಹೆಬ್ಬಾವುನ್ನು ಉರಗ ರಕ್ಷಕ ತುಮಕೂರಿನ ಶ್ಯಾಂ ಮತ್ತು ತಂಡದವರು ರಕ್ಷಿಸಿ ತುಮಕೂರಿನ ದೇವರಾಯನದುರ್ಗ ಬೆಟ್ಟಕ್ಕೆ ಹೆಬ್ಬಾವು ಬಿಟ್ಟು ಸಂರಕ್ಷಿಸಿದ್ದಾರೆ, ಇಟ್ಟಿಗೆ ಕಾರ್ಖಾನೆಯಲ್ಲಿ ನಾಯಿ ಮರಿ ತಿನ್ನಲು ಹೆಬ್ಬಾವು ಬಂದಿದೆ ಎನ್ನಲಾಗಿದೆ.

ಇಟ್ಟಿಗೆ ಕಾರ್ಖಾನೆ ಮಾಲೀಕ ಪ್ರತಾಪ್ ಮಾತನಾಡಿ, ಕಳೆದ ವರ್ಷವು ಇಟ್ಟಿಗೆ ಕಾರ್ಖಾನೆ ಪಕ್ಕದ ರಾಮದೇವರ ಬೆಟ್ಟದಲ್ಲಿ ಹೆಬ್ಬಾವು ಕಂಡಿತ್ತು, ಇದೀಗ ಕಾರ್ಖಾನೆಯಲ್ಲಿದ್ದ ನಾಯಿ ಮರಿಹಾಕಿದ್ದು, ಮರಿ ತಿನ್ನಲು ಆಗಮಿಸಿದೆ, ಅಪರೂಪದ ಹೆಬ್ಬಾವು ಕಂಡು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದು, ಹೆಬ್ಬಾವು ಬಯಲು ಸೀಮೆಯಲ್ಲಿ ಕಂಡಿದ್ದು ಅಪರೂಪವಾಗಿದೆ ಎಂದರು.

ಉರಗ ರಕ್ಷಕ ಸ್ನೇಕ್ ಶ್ಯಾಮ್ ಮಾತನಾಡಿ, ಬಯಲು ಸೀಮೆ ಪ್ರಾಂತ್ಯದಲ್ಲಿ ಹೆಬ್ಬಾವು ಕಾಣಿಸುವುದು ಅಪರೂಪ, ಕಾರ್ಖಾನೆ ಪಕ್ಕದ ರಾಮದೇವರ ಬೆಟ್ಟದಲ್ಲಿ ಈ ಹಾವು ವಾಸವಾಗಿರಬಹುದು, ಕಳೆದ 10 ವರ್ಷಗಳಿಂದ ಉರಗ ರಕ್ಷಣೆ ಮಾಡುತ್ತಿದ್ದೇವೆ, ನಮ್ಮ ತಂಡದಿಂದ 20ಕ್ಕೂ ಅಧಿಕ ಹೆಬ್ಬಾವು ರಕ್ಷಿಸಿದ್ದೇವೆ, ವರ್ಕಾಂ ಎಂಬ ಎನ್.ಜಿ.ಓ ಅಡಿ, ಉರಗ ರಕ್ಷಣೆ ಮಾಡುತ್ತಿದ್ದೇವೆ, ಉರಗಗಳಿಗೆ ಆತಂಕ ಪಡದೇ ಎಚ್ಚರಿಕೆಯಿಂದ ಇದ್ದರೇ, ಹಾವುಗಳನ್ನು ಸಂರಕ್ಷಿಸಬಹುದು ಎಂದರು. ಈ ವೇಳೆ ಉರಗ ತಜ್ಞರಾದ ಮನು ಅಗ್ನಿ, ಚೇತನ್ ಅಗ್ನಿ ಸೇರಿದಂತೆ ಗ್ರಾಮಸ್ಥರಿದ್ದರು.

ಫೋಟೋ 5 :

ಸೋಂಪುರ ಹೋಬಳಿಯ ರಾಯರಪಾಳ್ಯದಲ್ಲಿ ೮ ಅಡಿ ಹೆಬ್ಬಾವು ಅನ್ನು ತುಮಕೂರಿನ ಶ್ಯಾಮ್ ಮತ್ತು ತಂಡದವರು ರಕ್ಷಿಸಿರುವುದು.

ಪೋಟೋ 6 :

ಇಟ್ಟಿಗೆ ಕಾರ್ಖಾನೆಯಲ್ಲಿದ್ದ ಹೆಬ್ಬಾವು

Share this article