ಜಮಖಂಡಿ ನಗರದ ಕೊಳಚೆ ಪ್ರದೇಶದ ನಿವಾಸಿಗಳಿಗೆ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಹಕ್ಕುಪತ್ರ ವಿತರಣೆ ನಡೆಯುತ್ತಿದೆ. ಕಡುಬಡವರು ಈ ಪ್ರದೇಶದಲ್ಲಿ ವಾಸವಾಗಿದ್ದು ಹಕ್ಕುಪತ್ರಕ್ಕೆ ಪರಿಶಿಷ್ಟ ಜಾತಿ, ಜನಾಂಗದವರು ₹1000 ಸಾವಿರ ಹಾಗೂ ಇತರರು ₹2 ಸಾವಿರ ಭರಿಸಬೇಕಿದೆ. ಆದರೆ ಅವರಲ್ಲಿ ಆ ಹಣ ಭರಿಸುವ ಶಕ್ತಿ ಇಲ್ಲದ ಕಾರಣ ನಾನೇ 8 ಲಕ್ಷ ಸರ್ಕಾರಕ್ಕೆ ತುಂಬಿ ಹಕ್ಕುಪತ್ರ ವಿತರಿಸುತ್ತಿದ್ದೇನೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದ ಕೊಳಚೆ ಪ್ರದೇಶದ ನಿವಾಸಿಗಳಿಗೆ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಹಕ್ಕುಪತ್ರ ವಿತರಣೆ ನಡೆಯುತ್ತಿದೆ. ಕಡುಬಡವರು ಈ ಪ್ರದೇಶದಲ್ಲಿ ವಾಸವಾಗಿದ್ದು ಹಕ್ಕುಪತ್ರಕ್ಕೆ ಪರಿಶಿಷ್ಟ ಜಾತಿ, ಜನಾಂಗದವರು ₹1000 ಸಾವಿರ ಹಾಗೂ ಇತರರು ₹2 ಸಾವಿರ ಭರಿಸಬೇಕಿದೆ. ಆದರೆ ಅವರಲ್ಲಿ ಆ ಹಣ ಭರಿಸುವ ಶಕ್ತಿ ಇಲ್ಲದ ಕಾರಣ ನಾನೇ ₹8 ಲಕ್ಷ ಸರ್ಕಾರಕ್ಕೆ ತುಂಬಿ ಹಕ್ಕುಪತ್ರ ವಿತರಿಸುತ್ತಿದ್ದೇನೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.ಮಂಗಳವಾರ ಗೃಹ ಕಚೇರಿ ಸಾಕ್ಷಾತ್ಕಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು 1546 ಹಕ್ಕುಪತ್ರ ವಿತರಿಸಲಾಗುತ್ತಿದೆ. ಈಗಾಗಲೇ 753 ಹಕ್ಕುಪತ್ರಗಳ ವಿರತಣೆಯಾಗಿದೆ. ಬಾಕಿ ಇರುವ 793 ಹಕ್ಕುಪತ್ರಗಳಿಗೆ ತಲಾ ₹1 ಸಾವಿರದಂತೆ ₹8 ಲಕ್ಷ ಆರ್ಥಿಕ ಸಹಾಯ ಮಾಡುತ್ತಿರುವುದಾಗಿ ತಿಳಿಸಿದರು. ಅಭಿವೃದ್ಧಿ ಕಾಮಗಾರಿಗೆ ನಮ್ಮ ವಿರೋಧವಿಲ್ಲ, ಸಹಕಾರ ನೀಡುತ್ತೇವೆ ಸಿದ್ಧರಿದ್ದೇವೆ. ಪ್ರೊಟೋಕಾಲ್ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡಬಾರದು ಎಂದು ಹೇಳಿದರು.
ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಆಹಾರ ಸರಬ ರಾಜು ಮಾಡುವ ಗುತ್ತಿಗೆ ದಾರನ ₹1.5ಕೋಟಿ ಬಿಲ್ ಬಾಕಿ ಇದೆ. ಸದನದಲ್ಲಿ ವಿಷಯ ಪ್ರಸ್ತಾಪಿಸಿದಾಗ ಸದನವೇ ಮುಜುಗರಕ್ಕೀಡಾಯಿತು. ಬಾಕಿ ಹಣ ಬರುವುದಿಲ್ಲ ಎಂಬ ಭಯದಿಂದ ಗುತ್ತಿಗೆ ದಾರ ಸಾಲಸೋಲ ಮಾಡಿ, ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಮಾರಾಟ ಮಾಡಿ ಆಹಾರ ಸರಬರಾಜು ಮಾಡುತ್ತಿದ್ದಾನೆ ಎಂದು ತಿಳಿಸಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಮುತ್ತೂರಿನ ಶಾಲಾ ಕಟ್ಟಡಗಳ ಸಿದ್ದವಾಗಿದ್ದು, ಉದ್ಘಾಟನೆ ಆಗಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸಮಯ ನೀಡುತ್ತಿಲ್ಲ ಎಂದು ದೂರಿದರು. ನಗರ ಮಂಡಲ ಅಧ್ಯಕ್ಷ ಅಜಯ ಕಡಪಟ್ಟಿ, ಮುಖಂಡರಾದ ಈಶ್ವರ ಆದೆಪ್ಪನವರ, ಗಣೇಶ ಶಿರಗಣ್ಣವರ, ಆದರ್ಶ ರೂಗಿಮಠ, ಶ್ರೀಧರ ಕಂಬಿ, ಯಮನೂರು ಮುಲ್ಲಂಗಿ ಇದ್ದರು.
ಸರ್ಕಾರ ನಡೆಸಲು ಪಾಪದ ಕೆಲಸ: ಸರ್ಕಾರ ಎಲ್ಲೆಂದರಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದು ಪಾಪದ ಕೆಲಸ. ಇದರಿಂದ ಸಾರ್ವಜನಿಕರ ಆರೋಗ್ಯ ಹಾಳಾಗುತ್ತಿದೆ. ಸರ್ಕಾರ ನಡೆಸಲು ಪಾಪದ ಕೆಲಸಕ್ಕೆ ಕೈ ಹಾಕಲಾಗಿದೆ. ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದ್ದು ₹6 ಸಾವಿರ ಕೋಟಿ ಲಪಟಾಯಿಸಲಾಗಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಗಂಭೀರ ಆರೋಪ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.