80 ಕೋಟಿ ವೆಚ್ಚದ ಕುಡಿವ ನೀರಿನ ಕಾಮಗಾರಿ ಪ್ರಗತಿ: ಆನಂದ್‌

KannadaprabhaNewsNetwork | Published : Feb 25, 2024 1:46 AM

ಸಾರಾಂಶ

ಜಲ ಜೀವನ್ ಮಿಷನ್ ಯೋಜನೆಯಲ್ಲಿ 80 ಕೋಟಿ ರು. ವೆಚ್ಚದ ಕಡೂರು ವಿಧಾನಸಭಾ ಕ್ಷೇತ್ರದ ಕುಡಿವ ನೀರಿನ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.

ಕನ್ನಡಪ್ರಭ ವಾರ್ತೆ,ಕಡೂರು

ಜಲ ಜೀವನ್ ಮಿಷನ್ ಯೋಜನೆಯಲ್ಲಿ 80 ಕೋಟಿ ರು. ವೆಚ್ಚದ ಕಡೂರು ವಿಧಾನಸಭಾ ಕ್ಷೇತ್ರದ ಕುಡಿವ ನೀರಿನ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.

ಶನಿವಾರ ಕಡೂರು ಕ್ಷೇತ್ರದ ಹಿರೇನಲ್ಲೂರು ಮತ್ತು ಉಡುಗೆರೆ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಪ್ರತಿ ಗ್ರಾಮಗಳಿಗೂ ಭದ್ರಾ ನದಿಯಿಂದ ಕುಡಿಯುವ ನೀರು ನೀಡುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹೊಂದಾಣಿಕೆ ಅನುದಾನದಿಂದ ಜಲ ಜೀವನ ಮಿಷನ್ ಯೋಜನೆ ಕಾಮಗಾರಿ ಪ್ರಗತಿಯಲ್ಲಿರುವ ಮೂಲಕ ಭದ್ರಾ ನದಿ ನೀರನ್ನು ನೀಡಲು ಹೊಸ ಪೈಪ್ ಲೈನ್ ಅಳವಡಿಸಿ ನೀರು ನೀಡಲು ಕೈಗೊಳ್ಳಲಾಗುತ್ತಿದೆ. ಇದರ ಪ್ರಮುಖ ಉದ್ದೇಶ ಕಲುಷಿತ ನೀರಿನಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದ ಘಟನೆ ಮರುಕಳಿಸದಂತೆ ನೀರು ಕಲುಷಿತ ವಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.ಅಲ್ಲದೆ ಬಹು ಗ್ರಾಮ ಯೋಜನೆಯಲ್ಲಿ ಜಲಜೀವನ್ ಮಿಷನ್ ಯೋಜನೆ ಸೇರಿಸಿ ಕೈಗೊಳ್ಳಲಾಗುತ್ತಿರುವ ಈ ಯೋಜನೆಯಲ್ಲಿ ಪ್ರತಿ ಮನೆಗೂ ಶುದ್ಧ ನೀರು ತಲುಪಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ-ರಾಜ್ಯ ಸರ್ಕಾರದ ಯೋಜನೆ ಕಳೆದ ಒಂದೂವರೆ ವರ್ಷ ದಿಂದ ನೆನೆಗುದಿಗೆ ಬಿದ್ದಿತ್ತು. ಸದರಿ ಯೋಜನೆಗೆ ಟೆಂಡರ್ ಕರೆದು ನಮ್ಮ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಂದ ಮೇಲೆ ಈ ಕಾಮಗಾರಿಗೆ ವೇಗ ನೀಡಿದೆ. ಈ ನಿಟ್ಟಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕಾ ಖರ್ಗೆ ರವರು ಪ್ರತಿ ಜಿಲ್ಲೆ ಅಧಿಕಾರಿಗಳ ಸಭೆ ನಡೆಸಿ ಜೆಜೆಎಂ ಕಾಮಗಾರಿಗೆ ವೇಗ ಸಿಕ್ಕಿದೆ ಸದರಿ ಕಾಮಗಾರಿ ನಡೆಯುವಾಗ ಗ್ರಾಪಂ ಸದಸ್ಯರು ಗುಣಮಟ್ಟದ ಕಾಮಗಾರಿ ಆಗುವಂತೆ ನೋಡಿಕೊಳ್ಳಬೇಕು ಎಂದರು.

ಹಿರೇನಲ್ಲೂರು ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಮಳೆಗಾಲದಲ್ಲಿ ಸೋರುತ್ತಿರುವ ಕುರಿತು ಪ್ರಾಚ್ಯ ವಸ್ತು ಇಲಾಖೆ ಗಮನಕ್ಕೆ ತಂದಿದ್ದು ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಿದೆ. ಗ್ರಾಮದ ಆಂಜನೇಯ ಸ್ವಾಮಿ ದೇವಾಲಯಕ್ಕೆ 3 ಲಕ್ಷ ರು. ಹಾಕಿದ್ದು, ನೂತನ ದೇವಾಲಯ ಮಾಡುವುದಾದರೆ ರಾಜ್ಯ ಸರ್ಕಾರದಿಂದ 25 ಲಕ್ಷ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಬೀರಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ 5 ಲಕ್ಷ ರು, ಮಂಕಾಳಮ್ಮ ದೇವಸ್ಥಾನಕ್ಕೆ 3 ಲಕ್ಷ ರು. ಕೊಟ್ಟಿದ್ದೇನೆ. ಇನ್ನು ಬಳಗಸ್ಥರ ದೇವಸ್ಥಾನಕ್ಕೆನೀಡುವ ಜೊತೆಗೆ ಗ್ರಾಮದ ತೇರಿನ ಮನೆ ರಸ್ತೆ ನಿರ್ಮಾಣಕ್ಕೆ10 ಲಕ್ಷ ರು. ಕೊಡುತ್ತೇನೆ. ಈ ಗ್ರಾಮದ ಅಭಿವೃದ್ಧಿಗೆ ಸದಾ ಸಿದ್ಧ ಎಂದು ನುಡಿದರು.

ಗ್ರಾಪಂ ಮಾಜಿ ಉಪಾಧ್ಯಕ್ಷ ನಿಜಗುಣ, ಮುಖಂಡರಾ ದ ಮಿಲಿಟರಿ ಪುಟ್ಟಪ್ಪ, ಎಚ್. ಕೃಷ್ಣಮೂರ್ತಿ, ಕುಮಾರಯ್ಯ, ಎಚ್.ಎಸ್ . ಕುಮಾರಪ್ಪ, ನಟರಾಜ್, ಕಾಶಪ್ಪ, ಕಲ್ಪನಾ ಗಿರೀಶ್, ರಾಜಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇಸ್ಮಾಯಿಲ್ ಹಾಗು ಗ್ರಾಮದವರು ಇದ್ದರು.

24ಕೆಕೆಡಿಯು1.

ಕಡೂರು ವಿಧಾನಸಭಾ ಕ್ಷೇತ್ರದ ಹಿರೇನಲ್ಲೂರು ಗ್ರಾಮದಲ್ಲಿ ಜೆಜೆಎಂ ಯೋಜನೆ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಭೂಮಿ ಪೂಜೆ ಮಾಡಿದರು. ಗ್ರಾಮಸ್ಥರು ಇದ್ದರು.

Share this article