ಕನ್ನಡಪ್ರಭ ವಾರ್ತೆ ಕೊಲ್ಹಾರ ಬದುಕು ಎಂಬುದು ಬಂಗಾರವಿದ್ದಂತೆ, ಆ ಬಂಗಾರದ ಬದುಕನ್ನು ರಕ್ಷಣೆ ಮಾಡಿಕೊಳ್ಳಲು ಶಿಕ್ಷಣ ಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಕ್ಕಳ ಸಾಹಿತಿ ಪ.ಗು.ಸಿದ್ದಾಪುರ ಅಭಿಪ್ರಾಯ ಪಟ್ಟರು.
ರೋಣಿಹಾಳ ಗ್ರಾಪಂ ಉಪಾಧ್ಯಕ್ಷ ಗುರುನಗೌಡ ಬಿರಾದಾರ ಮಾತನಾಡಿ, ಮಗುವಿಗೆ ಮೊದಲ ಪಾಠ ಶಾಲೆ ಮನೆ. ಅಲ್ಲಿ ತಾಯಿ ಗುರುವಾಗಿದ್ದರೆ,ನಂತರ ಮಗುವಿಗೆ ಎರಡನೇ ಪಾಠ ಶಾಲೆಯೇ ಆತ ಕಲಿಯುವ ಶಾಲೆ. ಅಲ್ಲಿ ಶಿಕ್ಷಕರು ಇರುತ್ತಾರೆ ಎಂದರು. ಕಾರ್ಯಕ್ರಮದಲ್ಲಿ ಪ.ಗು.ಸಿದ್ದಾಪುರ ಹಾಗೂ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಸಿದ್ದಪ್ಪ ಬಾಲಗೊಂಡ ಅವರನ್ನು ಸನ್ಮಾನಿಸಲಾಯಿತು. 8ನೇ ತರಗತಿ ಮಕ್ಕಳಿಗೆ ಬಿಳ್ಕೋಡಲಾಯಿತು.
ಬಬಲಾದಿ ಮಠದ ಅಡಿವಯ್ಯ ಹಿರೇಮಠ, ಮುಕ್ಕಣ್ಣ ಹಿರೇಮಠ ಸಾನಿಧ್ಯ ವಹಿಸಿದ್ದರು. ಮುರಗೇಶ ಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕುಮಾರಗೌಡ ಪಾಟೀಲ, ಸಂಗನಗೌಡ ಬಿರಾದಾರ, ಗುರುನಗೌಡ ಬಿರಾದಾರ, ಉದಯಕುಮಾರ ಹಳ್ಳಿ, ಈಶ್ವರ ಕೊಲ್ಹಾರ, ರಾವುಸಾಬ ಬೀಳಗಿ, ಐ.ಡಿ.ಹಳ್ಳಿ, ಪ್ರಕಾಶ ಉಗ್ರಾಣ, ಸಂಗಮೇಶ ಉಗ್ರಾಣ, ಶಿವಾನಂದ ಬಿರಾದಾರ, ಶ್ರೀಮಂತ ಇಂಡಿ, ದುಂಡಪ್ಪ ಕೊಣ್ಣುರ, ಸಂಗಪ್ಪ ಕೊರ್ತಿ, ಸಿದ್ದನಗೌಡ ಬಿರಾದಾರ, ಶಿವಾನಂದ ಹಾರಿನವರ, ಸಂಗಮೇಶ ಉಗ್ರಾಣ, ಮುಖ್ಯ ಶಿಕ್ಷಕ ಸಿದ್ದು ಕೊಟ್ಯಾಳ, ಎಸ್.ಗಣಿಯವರ, ಶಿವಾನಂದ ಮಡಿಕೇಶ್ವರ, ಜಿ.ಐ.ಗೊಡ್ಯಾಳ, ಎಸ್.ಜಿ.ಪಾರಗೊಂಡ, ಜಗದೀಶ ಸಾಲಳ್ಳಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.