ಸಮಾಜದಲ್ಲಿ ಶೇ. 80ರಷ್ಟು ಭ್ರಷ್ಟಾಚಾರಿಗಳು

KannadaprabhaNewsNetwork |  
Published : Oct 11, 2025, 12:02 AM IST
ದದದದ | Kannada Prabha

ಸಾರಾಂಶ

ಇಂದು ಸಮಾಜದಲ್ಲಿ ಕಂಟಕಗಳು ಹೆಚ್ಚುತ್ತಿವೆ.ಶೇ 20 ರಷ್ಟು ಜನ ಪ್ರಾಮಾಣಿಕರಿದ್ದರೆ, ಶೇ 80 ರಷ್ಟು ಜನ ಭ್ರಷ್ಟಾಚಾರಿಗಳು, ಸ್ವಜನ ಪಕ್ಷಪಾತಿಗಳು, ಮೋಸಗಾರರೇ ತುಂಬಿ ತುಳುಕುತಿದ್ದಾರೆ

ಕನ್ನಡಪ್ರಭ ವಾರ್ತೆ ತುಮಕೂರುಇಂದು ಸಮಾಜದಲ್ಲಿ ಕಂಟಕಗಳು ಹೆಚ್ಚುತ್ತಿವೆ.ಶೇ 20 ರಷ್ಟು ಜನ ಪ್ರಾಮಾಣಿಕರಿದ್ದರೆ, ಶೇ 80 ರಷ್ಟು ಜನ ಭ್ರಷ್ಟಾಚಾರಿಗಳು, ಸ್ವಜನ ಪಕ್ಷಪಾತಿಗಳು, ಮೋಸಗಾರರೇ ತುಂಬಿ ತುಳುಕುತಿದ್ದಾರೆ. ಇದೇ ರೀತಿಯಲ್ಲಿ ಮುಂದುವರೆದರೆ ನಮ್ಮದೇಶಕ್ಕೆ ಹಿರಿಯರು ಹಾಕಿಕೊಟ್ಟ ಭದ್ರ ಬುನಾದಿ ಮುರಿದು ಬೀಳಲಿದೆ ಎಂದು ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರು ಹಾಗೂ ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಎಚ್ಚರಿಕೆ ನೀಡಿದ್ದಾರೆ.

ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ನಡೆದ ವಾರ್ಷಿಕ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಸ್ವಾತಂತ್ರ ಪೂರ್ವದಲ್ಲಿ ಮತ್ತು ಸ್ವಾತಂತ್ರ ನಂತರದಲ್ಲಿ ಈ ದೇಶವನ್ನು ಕಟ್ಟಿದವರು ವಕೀಲರು, ಗಾಂಧಿ, ನೆಹರು, ಸರದಾರ್ ವಲ್ಲಭಾಯಿ ಪಟೇಲ್ ಇವರು ದೇಶದ ಆಗು, ಹೋಗುಗಳನ್ನು ಅರ್ಥ ಮಾಡಿಕೊಂಡು, ಎಲ್ಲರನ್ನು ಒಳಗೊಂಡ ಸ್ವಾತಂತ್ರ ನಂತರದ ಭಾರತಕ್ಕೆ ಭದ್ರ ಬುನಾದಿ ಹಾಕಿದರು. ಇಂದಿಗೂ ಜನಪ್ರತಿನಿಧಿಗಳಲ್ಲಿ ಹೆಚ್ಚಿನವರು ವಕೀಲರೇ ಆಗಿದ್ದಾರೆ. ಶೇ 20ರಷ್ಟು ಪ್ರಾಮಾಣಿಕರು, ಶೇ 80 ರಷ್ಟು ಜನರ ಮನಸ್ಸನ್ನು ಪರಿವರ್ತಿಸುವ ಕೆಲಸ ಮಾಡಬೇಕೆಂದರು.

ಕಾನೂನು ಪದವಿ ಓದಿದವರು ವಕೀಲರಾಗಲೇಬೇಕು ಎಂದೇನಿಲ್ಲ. ನೀವು ಯಾವುದೇ ವೃತ್ತಿ ಕೈಗೊಳ್ಳಿ, ಅದರಲ್ಲಿ ಪ್ರಾಮಾಣಿಕತೆ, ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡರೆ ನೀವು ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ. ಜೀವನದ ಪ್ರತಿ ಹಂತದಲ್ಲಿಯೂ ಸಮಾಜ ನಮಗೆ ಪಾಠ ಕಲಿಸುತ್ತದೆ. ಒಳ್ಳೆಯದನ್ನು ನಮ್ಮೊಳಗೆ ತೆಗೆದುಕೊಂಡು ಮುನ್ನಡೆದಾಗ ಮಾತ್ರ ಎಲ್ಲರಿಂದಲು ಮಾನ್ಯತೆಗೆ ಒಳಗಾಗಲು ಸಾಧ್ಯ. ವಕೀಲರು ಮೊದಲು ಎಲ್ಲವನ್ನು ಗ್ರಹಿಸುವ ಮತ್ತು ಅದನ್ನು ಅರ್ಥೈಸಿ ಕೊಳ್ಳುವುದನ್ನು ಕಲಿಯಬೇಕು. ಆಗ ಮಾತ್ರ ಸಮಾಜವನ್ನು ಸಮರ್ಥವಾಗಿ ಎದುರಿಸಲು ಸಾಧ್ಯವೆಂದು ನುಡಿದರು. ಕಲೆ, ಸಾಹಿತ್ಯ, ಸಂಗೀತ ಇವುಗಳು ಮನುಷ್ಯನ ಮಾನಸಿಕ ಮತ್ತು ಶಾರೀರಿಕ ಬೆಳವಣಿಗೆಗೆ ಸಹಕಾರಿಯಾಗಿವೆ. ಕಾಲೇಜು ದಿನಗಳಲ್ಲಿ, ವೃತ್ತಿ ಜೀವನದಲ್ಲಿ ದೊರೆಯುವ ಪ್ರತಿಯೊಂದು ಅವಕಾಶಗಳನ್ನು ತಪ್ಪಿಸಿಕೊಳ್ಳಬಾರದು. ಜಾತಿ, ಧರ್ಮ,ಲಿಂಗ, ವರ್ಣ, ವರ್ಗ ಮೀರಿ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಬೆಳೆಸಿಕೊಂಡಾಗ ಮಾತ್ರ, ನಾವು ಬೆಳೆಯುವುದರ ಜೊತೆಗೆ, ಇತರರು ಬೆಳೆಯಲು ಸಾಧ್ಯವಾಗುತ್ತದೆ.ಜಾತಿ, ಪೂಜೆ, ಪುನಸ್ಕಾರ ಇವೆಲ್ಲರೂ ನಮ್ಮ ಮನೆಯೊಳಗೆ ಇರಬೇಕೆ ಹೊರತು, ಸಮಾಜದ ನಡುವೆ ಅಲ್ಲ.ಶಾಲಾ ಶಿಕ್ಷಕಿಯಾಗಿದ್ದ ನಮ್ಮ ತಾಯಿ ನನಗೆ ಶಾಲಾ ದಿನಗಳಲ್ಲಿ ಜಾತಿ ಭೇಧ ಮಾಡದಂತೆ ಬುದ್ದಿವಾದ ಹೇಳಿದ್ದರು, ಇದುವರೆಗೂ ಅದನ್ನು ಅನುಸರಿಸಿಕೊಂಡು ಬಂದಿದ್ದೇನೆ ಎಂದು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಕೆ.ವಿ. ಮಾತನಾಡಿ,ಭ್ರಷ್ಟಾಚಾರ ನಿಮೂರ್ಲನೆಗೆ ಕರ್ನಾಟಕ ಲೋಕಾಯುಕ್ತದಂತಹ ಸಂಸ್ಥೆ ಇಡೀ ವಿಶ್ವದಲ್ಲಿಯೇ ಮತ್ತೊಂದು ಇಲ್ಲ. ಹಾಗಾಗಿಯೇ ಕರ್ನಾಟಕದ ಬಗ್ಗೆ ಜನರಿಗೆ ನಂಬಿಕೆ ಹೆಚ್ಚು.ಲೋಕಾಯುಕ್ತ ಎಸ್ಪಿಯಾಗಿ ಕೆಲಸ ಮಾಡಿದ ದಿನಗಳನ್ನು ಮರೆಯಲು ಸಾಧ್ಯವಿಲ್ಲ.ಪೊಲೀಸರು ಮತ್ತು ವಕೀಲರುಒಂದೇದೊಣಿಯ ಪಯಣಿಗರು, ಸಮಾಜವನ್ನುತಿದ್ದುವ ನಿಟ್ಟಿನಲ್ಲಿ ನಮ್ಮದೇಆದರೀತಿಯಲ್ಲಿ ಕೆಲಸ ಮಾಡುತ್ತೇವೆ.ಇಬ್ಬರುಕೂಡಿದರೆ ಒಳ್ಳೆಯ ಸಮಾಜಕಟ್ಟಲು ಸಾಧ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ವಿದ್ಯೋದಯ ಪೌಂಢೇಷನ್‌ನ ಅಧ್ಯಕ್ಷ ನಿವೃತ್ತ ನ್ಯಾಯಾಧೀಶರಾದ ಎಚ್.ಎಸ್.ಕೆಂಪಣ್ಣ ಮಾತನಾಡಿ, ನ್ಯಾಯವಾದಿಯಾಗಿದ್ದ ಕೆ.ವಿ.ಸುಬ್ರಮಣ್ಯಸ್ವಾಮಿ ಅವರು ಬಡ ಮಕ್ಕಳ ಅನುಕೂಲಕ್ಕಾಗಿ ಸ್ಥಾಪಿಸಿದ ವಿದ್ಯೋದಯ ಕಾನೂನು ಕಾಲೇಜು, ಸಾವಿರಾರು ಕಾನೂನು ಪದವಿಧರರನ್ನು ಈ ನಾಡಿಗೆ ಕೊಟ್ಟಿದೆ. ಅದರಲ್ಲಿ ನಾನು ಒಬ್ಬ.1975 ರಲ್ಲಿ ಕಾನೂನು ಪದವಿ ಮುಗಿಸಿ ಬೆಂಗಳೂರಿಗೆ ವಕೀಲ ವೃತ್ತಿಯ ಕೈಗೊಳ್ಳಲು ತೆರಳಿ, ನಿವೃತ್ತಿ ನಂತರ ಈ ಸಂಸ್ಥೆಯಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದೇನೆ. ಅಂದು ಸುಬ್ರಮಣ್ಯಸ್ವಾಮಿಅವರು ಬಡವರಿಗೆಎಂದು ಸ್ಥಾಪಿಸಿದ ಈ ಸಂಸ್ಥೆ ಅವರಿಗೆ ಹೆಚ್ಚು ಸಲ್ಲಬೇಕು ಎಂಬ ಕಾರಣಕ್ಕೆ, ಇಡೀ ರಾಜ್ಯದಲ್ಲಿಯೇ ಅತಿಕಡಿಮೆ ಶುಲ್ಕ ಪಡೆದು ಕಾನೂನು ಪದವಿ ಬೋಧಿಸುತಿದ್ದೇವೆ. ವಕೀಲ ವೃತ್ತಿ ಎಂಬುದು ಕತ್ತಿಯ ಮೇಲಿನ ನಡಿಗೆ, ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಬೇಕೆಂದು ಕಿವಿ ಮಾತು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾಗತಿಕ ಸವಾಲಿಗೆ ನವೋದ್ಯಮ ಉತ್ತರ : ರಾಧಾಕೃಷ್ಣನ್‌
ಕಾಮಿಡಿ ಕಿಲಾಡಿಗಳು ಶೋನಲ್ಲಿ ಹಿಂದು ದೇವತೆಗಳ ಬಗ್ಗೆ ಅವಹೇಳನಕ್ಕೆ ‘ಹೈ’ ಕಿಡಿ