ರಂಗಕಲೆ ಬೆಳಗುತ್ತಿರುವ 30 ಕಲಾ ಸಾಧಕರಿಗೆ ಗೌರವಾರ್ಪಣೆ

KannadaprabhaNewsNetwork |  
Published : Oct 11, 2025, 12:02 AM IST
9999999 | Kannada Prabha

ಸಾರಾಂಶ

ಈ ವೇಳೆ ಜಿಲ್ಲೆಯ 30 ಮಂದಿ ಕಲಾಸಾಧಕರಿಗೆ ಮಂಜುನಾಥ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕಲಾ ಸಂಘದ ಅಧ್ಯಕ್ಷ ಟಿ.ವೈ.ಯೋಗಾನಂದಕುಮಾರ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುಶ್ರೀ ಮಂಜುನಾಥ ಕಲಾ ಸಂಘದಿಂದ ನಗರದ ಡಾ.ಗುಬ್ಬಿ ವೀರಣ್ಣರಂಗ ಮಂದಿರದಲ್ಲಿ ಈ ತಿಂಗಳ 12ರಂದು ಬೆಳಿಗ್ಗೆ 10 ಗಂಟೆಗೆದಾನವೀರ ಶೂರಕರ್ಣ ಎಂಬ ಪೌರಾಣಿಕ ನಾಟಕ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಜಿಲ್ಲೆಯ 30 ಮಂದಿ ಕಲಾಸಾಧಕರಿಗೆ ಮಂಜುನಾಥ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕಲಾ ಸಂಘದ ಅಧ್ಯಕ್ಷ ಟಿ.ವೈ.ಯೋಗಾನಂದಕುಮಾರ್ ಹೇಳಿದ್ದಾರೆ.ನಗರದಲ್ಲಿ ಶುಕ್ರವಾರ ನಾಟಕದ ಪ್ರಚಾರ ಪತ್ರಗಳನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ರಂಗಭೂಮಿ ಕಲೆಯ ತವರೂರಾದ ತುಮಕೂರು ಜಿಲ್ಲೆಯ ಅನೇಕ ಹಿರಿಯ ಕಲಾವಿದರು ನಾಡಿನ ಕಲಾ ರಂಗಕ್ಕೆ ಕಲಾವಿದರ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ನಾಟಕ ಕ್ಷೇತ್ರದ ವೈಭವ ಮೆರೆಸಿದ್ದಾರೆ. ಡಾ.ಗುಬ್ಬಿ ವೀರಣ್ಣ, ಹಿರಣ್ಣಯ್ಯರಂತಹ ಮಹಾನ್‌ ಕಲಾವಿದರ ಜನ್ಮಭೂಮಿ ತುಮಕೂರು.ಈ ಮಣ್ಣಿನ ರಂಗಕಲೆ ಪರಂಪರೆಯನ್ನು ಮುಂದುವರೆಸಿ ಮೆರೆಸಬೇಕು. ಹೊಸತಲೆಮಾರಿನವರೂ ರಂಗಕಲೆ ಬಗ್ಗೆ ಆಸಕ್ತಿ ಬೆಳೆಸಿಕೊಂಡು ರಂಗಭೂಮಿಯನ್ನು ಸಮೃದ್ಧಗೊಳಿಸಬೇಕು ಎಂದು ತಿಳಿಸಿದ್ದಾರೆ. ರಂಗಕಲೆಯನ್ನು ಉಳಿಸಿ ಬೆಳೆಸಲು ಅನೇಕ ಕಲಾ ಸಂಘಗಳು ಸಕ್ರಿಯಾಗಿ ನಾಟಕಗಳ ಪ್ರದರ್ಶನ ಮಾಡುತ್ತಿವೆ. ರಂಗಭೂಮಿಕಲೆಯನ್ನು, ಕಲಾವಿದರನ್ನು ಪ್ರೋತ್ಸಾಹಿಸುವವರು ಹೆಚ್ಚಾಗಬೇಕು. ಆಗ ನಮ್ಮ ನಾಟಕ ಕಲೆ ಶ್ರೀಮಂತವಾಗಿ ಬೆಳೆಯುತ್ತದೆ ಎಂದು ಯೋಗಾನಂದಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.12 ರಂದು ನಡೆಯುವ ನಾಟಕವನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಉದ್ಘಾಟಿಸುವರು. ಮಾಜಿ ಶಾಸಕರಾದ ಎಚ್.ನಿಂಗಪ್ಪ, ತಿಮ್ಮರಾಯಪ್ಪ, ಪಿ.ಆರ್.ಸುಧಾಕರಲಾಲ್, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಮುಖಂಡಗುಬ್ಬಿ ನಾಗರಾಜು, ಜಿಲ್ಲಾಕಲಾವಿದರ ಸಂಘದ ಅಧ್ಯಕ್ಷ ವೈ.ಹೆಚ್.ಶಿವಣ್ಣ, ಹಿರಿಯಕಲಾವಿದರಾದಡಾ.ಲಕ್ಷ್ಮಣದಾಸ್, ಎಂ.ವಿ.ನಾಗಣ್ಣ ಮೊದಲಾದವರು ಭಾಗವಹಿಸುವರು.ನಾಟಕಕಲೆಯನ್ನು ಪೋಷಿಸುತ್ತಾ ಬಂದಿರುವ ಜಿಲ್ಲೆಯ 30 ಮಂದಿ ಹಿರಿಯ ಕಲಾಸಾಧಕರಿಗೆ ಮಂಜುನಾಥ್ ಕಲಾಶ್ರೀ ಪ್ರಶಸ್ತಿ ನೀಡಿಅವರ ಕಲಾ ಸೇವೆಯನ್ನು ಗೌರವಿಸಲಾಗುವುದು ಎಂದು ಹೇಳಿದ್ದಾರೆ.ಹತ್ತಾರು ವರ್ಷಗಳಿಂದ ವಿಶೇಷ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಮಂಜುನಾಥ ಕಲಾ ಸಂಘ ಹೆಸರಾಗಿದೆ. ಈ ಬಾರಿ ಅನುಭವಿ ಕಲಾವಿದರು ಒಳಗೊಂಡ ದಾನವೀರ ಶೂರಕರ್ಣ ಎಂಬ ಪೌರಾಣಿಕ ನಾಟಕ ಪ್ರದರ್ಶನವಾಗಲಿದೆ. ಕಲಾಪೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಯೋಗಾನಂದಕುಮಾರ್‌ ಕೋರಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾಗತಿಕ ಸವಾಲಿಗೆ ನವೋದ್ಯಮ ಉತ್ತರ : ರಾಧಾಕೃಷ್ಣನ್‌
ಕಾಮಿಡಿ ಕಿಲಾಡಿಗಳು ಶೋನಲ್ಲಿ ಹಿಂದು ದೇವತೆಗಳ ಬಗ್ಗೆ ಅವಹೇಳನಕ್ಕೆ ‘ಹೈ’ ಕಿಡಿ