ಅರ್ಧಕ್ಕೆ ನಿಂತ ದೇಗುಲ ನಿರ್ಮಾಣಕ್ಕೆಹಣ ನೀಡಿದ 850 ‘ಗೃಹಲಕ್ಷ್ಮೀ’ಯರು

KannadaprabhaNewsNetwork |  
Published : Mar 01, 2026, 02:30 AM IST
ದೇಣಿಗೆ | Kannada Prabha

ಸಾರಾಂಶ

ತಮ್ಮ ಊರಿನಲ್ಲಿ ಅರ್ಧಕ್ಕೆ ನಿಂತ ಯಲ್ಲಮ್ಮ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ 850 ಮಹಿಳೆಯರು ತಮಗೆ ಸರ್ಕಾರ ನೀಡಿದ್ದ ಗೃಹಲಕ್ಷ್ಮಿ ಹಣವನ್ನು ಸಮರ್ಪಿಸಿರುವ ಪ್ರಸಂಗ ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.

ಗದಗ: ತಮ್ಮ ಊರಿನಲ್ಲಿ ಅರ್ಧಕ್ಕೆ ನಿಂತ ಯಲ್ಲಮ್ಮ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ 850 ಮಹಿಳೆಯರು ತಮಗೆ ಸರ್ಕಾರ ನೀಡಿದ್ದ ಗೃಹಲಕ್ಷ್ಮಿ ಹಣವನ್ನು ಸಮರ್ಪಿಸಿರುವ ಪ್ರಸಂಗ ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.

ತಿಮ್ಮಾಪೂರದಲ್ಲಿ ಕಳೆದ 4 ವರ್ಷದಿಂದ ಯಲ್ಲಮ್ಮ ದೇವಸ್ಥಾನ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈಗಾಗಲೇ ಗ್ರಾಮಸ್ಥರು ₹50 ಲಕ್ಷ ವೆಚ್ಚ ಮಾಡಿದ್ದಾರೆ. ಹಣದ ಕೊರತೆಯಿಂದಾಗಿ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ಮಂದಿರ ಪೂರ್ಣಗೊಳ್ಳಲು ಲಕ್ಷಾಂತರ ಅಗತ್ಯವಿದ್ದು, ಗ್ರಾಮದ 850 ಮಹಿಳೆಯರು ತಮ್ಮ ಖಾತೆಗೆ ಜಮೆಯಾಗುವ ಗೃಹಲಕ್ಷ್ಮಿ ಹಣವನ್ನು ನೀಡುವ ಮೂಲಕ ರಾಜ್ಯದ ಗಮಸ ಸೆಳೆದಿದ್ದಾರೆ. 850 ಗೃಹಲಕ್ಷ್ಮಿ ಫಲಾನುಭವಿಗಳು ತಮಗೆ ಬರುವ ಹಣವನ್ನು ಸಂಗ್ರಹಿಸಿ ಈಗಾಗಲೇ ₹2.50 ಲಕ್ಷ ದೇಣಿಗೆ ನೀಡಿದ್ದು, ಒಟ್ಟು ₹16 ಲಕ್ಷ ನೀಡಲಿದ್ದಾರೆ. ಈ ನಿರ್ಧಾರಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸಂಸತ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುಭವದ ಮೂಲಕ ವಿಜ್ಞಾನ ಕಲಿಯಿರಿ: ಕುಲಪತಿ ಖಾನ್‌
ಮಾರ್ಚ್ 5ರಂದು ರಾಮನಗರದಲ್ಲಿ ಉದ್ಯೋಗ ಮೇಳ