)
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಶುತೋಷ್ ನಿಗಮ್ 2020 ಫೆಬ್ರವರಿ 1 ರಿಂದ ಅಮೆಡಿಯಸ್ ಸಾಫ್ಟ್‌ವೇರ್ ಲ್ಯಾಬ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಟ್ ಎಂಬ ಖಾಸಗಿ ಕಂಪನಿಯಲ್ಲಿ ಹಿರಿಯ ವ್ಯವಸ್ಥಾಪಕ ಸಂಶೋಧನಾ ವಿಜ್ಞಾನಿಯಾಗಿ ಉದ್ಯೋಗದಲ್ಲಿದ್ದರು.ಅಶುತೋಷ್ ನಿಗಮ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ 2025 ರ ಅಕ್ಟೋಬರ್ 11 ರಂದು ಕಂಪನಿಯ ಒಪ್ಪಿಗೆ ಅಥವಾ ಅನುಮೋದನೆಗಳಿಲ್ಲದೆ ತಮ್ಮ ವೈಯಕ್ತಿಕ ಇ-ಮೇಲ್ ಖಾತೆಯಿಂದ ಸೋರ್ಸ್ ಕೋಡ್ ಜತೆಗೆ ಇತರೆ ಗೌಪ್ಯ ಡೇಟಾವನ್ನು ವರ್ಗಾಯಿಸುವ ಮೂಲಕ ಕಂಪನಿಗೆ ಸೇರಿದ ಸಾಫ್ಟ್‌ವೇರ್‌ನೊಂದಿಗೆ ಅನಧಿಕೃತವಾಗಿ ಸೋರ್ಸ್ ಕೋಡ್ ಅನ್ನು ಪ್ರವೇಶಿಸಿ ಎಕ್ಸ್-ಫಿಲ್ಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಆಂತರಿಕ ತನಿಖೆ, ದಾಖಲೆಗಳು ಮತ್ತು ವರದಿಗಳೊಂದಿಗೆ ನಿಗಮ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ಮೂಲ ಕೋಡ್ ಅನ್ನು ಅಳಿಸಲು ಒಪ್ಪಿಕೊಂಡರು. ಕಂಪನಿಯು ಅದರ ವೀಡಿಯೊದಲ್ಲಿ ರೆಕಾರ್ಡ್ ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದಾದ ನಂತರ 2025 ಡಿ.3 ರಂದು ಅವರನ್ನು ಉದ್ಯೋಗದಿಂದ ತೆಗೆದು ಹಾಕಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋರ್ಸ್ ಕೋಡ್ ಸೇರಿದಂತೆ ಸಾಫ್ಟ್‌ವೇರ್‌ನ ಅಂದಾಜು ಮೌಲ್ಯ 8,000,000 ಯುರೋಗಳು ಆಗಿದ್ದು, ಅಶುತೋಷ್ ನಿಗಮ್ ಅವರ ಈ ಕೋಡ್ ಅನ್ನು ಕಳ್ಳತನ ಮಾಡಿರುವುದರಿಂದ ಕಂಪನಿಗೆ ತೀವ್ರ ನಷ್ಟ ಉಂಟಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 65, 66 ಮತ್ತು 66 (ಸಿ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.