ಹೃದಯಾಘಾತಕ್ಕೆ 8ನೇ ತರಗತಿ ವಿದ್ಯಾರ್ಥಿ ಬಲಿ

KannadaprabhaNewsNetwork |  
Published : Sep 24, 2026, 02:00 AM IST
ವೈಷ್ಣವಿ ಮಾಗಡಿ | Kannada Prabha

ಸಾರಾಂಶ

8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟ ಘಟನೆ ನವಲಗುಂದ ಜಗದ್ಗುರು ಅಜಾತ ನಾಗಲಿಂಗಸ್ವಾಮಿ ವಿದ್ಯಾಪೀಠದಲ್ಲಿ ಬುಧವಾರ ನಡೆದಿದೆ.

ನವಲಗುಂದ:

8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟ ಘಟನೆ ಇಲ್ಲಿನ ಜಗದ್ಗುರು ಅಜಾತ ನಾಗಲಿಂಗಸ್ವಾಮಿ ವಿದ್ಯಾಪೀಠದಲ್ಲಿ ಬುಧವಾರ ನಡೆದಿದೆ.

ವೈಷ್ಣವಿ ಬಸವರಾಜ ಮಾಗಡಿ (14) ಮೃತ ವಿದ್ಯಾರ್ಥಿ.

ತರಗತಿಯಲ್ಲಿದ್ದಾಗ ವಿದ್ಯಾರ್ಥಿನಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ವಿದ್ಯಾರ್ಥಿಯನ್ನು ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋದರೂ ಚಿಕಿತ್ಸೆ ಫಲಿಕಾರಿಯಾಗದೆ ಮೃತಪಟ್ಟಿದ್ದಾಳೆಂದು ಶಾಲೆಯ ಮುಖ್ಯೋಪಾಧ್ಯಾಯ ಎಲ್‌.ಎಚ್‌. ಕಮ್ಮಾರ ತಿಳಿಸಿದ್ದಾರೆ.

ಮಗಳಿಗೆ ಹೃದಯಾಘಾತದ ಸುದ್ದಿ ತಿಳಿದು ತಂದೆ- ತಾಯಿ ರೋದಿಸುತ್ತಿದ್ದ ದೃಶ್ಯ ಎಲ್ಲರ ಮನ ಕರಗಿಸುವಂತಿತ್ತು. ಬದುಕಿ ಬಾಳಬೇಕಾದ ಮಗು ಹೃದಯಾಘಾತದಿಂದ ಮೃತಪಟ್ಟಿದ್ದು ನೆರೆದಿದ್ದ ಜನರಲ್ಲಿ ಕಣ್ಣೀರು ತರಿಸಿತು. ವಿದ್ಯಾರ್ಥಿನಿ ಮನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ ಭೋವಿ ಭೇಟಿ ನೀಡಿ ಪಾಲಕರಿಗೆ ಸಾಂತ್ವನ ಹೇಳಿದರು.

ಸಂತಾಪ:

ನವಲಗುಂದ ಅಜಾತ ನಾಗಲಿಂಗಸ್ವಾಮಿ ಮಠದ ವೀರೇಂದ್ರ ಸ್ವಾಮೀಜಿ, ಗವಿಮಠದ ಬಸಲಿಂಗಸ್ವಾಮೀಜಿ, ಹಿರೇಮಠದ ಇಮ್ಮಡಿ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಎನ್‌.ಎಚ್. ಕೋನರಡ್ಡಿ, ಮಾಜಿ ಸಚಿವರಾದ ಶಂಕರಪಾಟೀಲ ಮುನೇನಕೊಪ್ಪ, ಕೆ.ಎನ್. ಗಡ್ಡಿ, ಅಣ್ಣಪ್ಪ ಬಾಗಿ, ಚರಂತಯ್ಯ ಹಿರೇಮಠ, ಅಶೋಕ ಮಜ್ಜಿಗುಡ್ಡ, ಉಸ್ಮಾನ ಬಬರ್ಚಿ, ಮಹಾಂತೇಶ ಕಲಾಲ, ಮೃತುಂಜಯ ಜಾಬಿನ, ಕಿರಣ ಕಲಾಲ್, ಸತ್ಯಪ್ಪ ಬಾಗಲಕೋಟ, ಸಿದ್ದಲಿಂಗಯ್ಯ ಹಿರೇಮಠ, ಸಂಗಪ್ಪ ಹುಬ್ಬಳ್ಳಿ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸುರಕ್ಷತೆ ಶಿಕ್ಷಕರ ಮೂಲ ಕರ್ತವ್ಯ: ಸಿದ್ರಾಮೇಶ್ವರ
ಕೊಪ್ಪಳದಲ್ಲಿ ಆಧಾರ್ ತಿದ್ದುಪಡಿಗೆ ಬೆಳಗಿನ ಜಾವವೇ ಕ್ಯೂ