ಕನ್ನಡಪ್ರಭ ವಾರ್ತೆ ಮೈಸೂರು
ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಅಭಿನಂದನಾ ಸಮಿತಿ ಮತ್ತು ದಲಿತ ಸಂಘಟನೆಗಳ ಒಕ್ಕೂಟವು ಮಂಗಳವಾರ ಏರ್ಪಡಿಸಿದ್ದ ನೂತನ ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಅಭಿನಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮುಖ್ಯಭಾಷಣ ಮಾಡಿದರು.
ವಿಧಾನ ಪರಿಷತ್ ಸದಸ್ಯರಾಗಿ ಶಿವಕುಮಾರ್ ಹೆಸರು ಘೋಷಣೆಯಾದಾಗ ಕೆಲವು ಪತ್ರಕರ್ತರಿಗೆ ಸಂತೋಷವಾಗಿದೆ. ಉಳಿದ ಅನೇಕರಿಗೆ ಬೇಸರವಾಗಿದೆ. ಏಕೆಂದರೆ ಭಾರತದ ಪತ್ರಿಕೋದ್ಯಮದಲ್ಲಿ ಶೇ.90 ರಷ್ಟು ಮೇಲ್ವರ್ಗದವರ ಹಿಡಿತದಲ್ಲಿದೆ. ಉಳಿದದ್ದರಲ್ಲಿ ಇತರೆ ಜಾತಿಗಳಿವ. ಆದ್ದರಿಂದ ಕೆಲವರಿಗೆ ಬೇಸರವಾಗಿರುವುದು ಸಹಜ ಎಂದರು.ಅಹಿಂದ ಎಂಬ ಪದ ಕೇವಲ ಸ್ಲೋಗನ್ ಅಲ್ಲ. ಅಂಬೇಡ್ಕರ್ ಅವರ ಕನಸು ಕೂಡ. ಶಿವಕುಮಾರ್ ಅವರೊಬ್ಬ ಸಜ್ಜನ ಮನುಷ್ಯ. ಬೇಗನೆ ಸ್ನೇಹ ಬಯಸುತ್ತಾರೆ. ಅವರು ಎಂದಿಗೂ ತಮ್ಮ ಹಳ್ಳಿಯ ಬೇರುಗಳನ್ನು ಮರೆತಿಲ್ಲ. ಮೈಸೂರಿನಲ್ಲಿ ಸೈಕಲ್‌ನಲ್ಲಿ ತಿರುಗಾಡಿದ ದಿನಗಳನ್ನೂ ಅವರು ಮರೆತಿಲ್ಲ ಎಂದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ಯಾರು ಏನು ಬೇಕಾದರು ಆಗಬಹುದು ಎಂಬ ಸಂವಿಧಾನದ ಆಶಯಕ್ಕೆ ಕೆ. ಶಿವಕುಮಾರ್ ಸಾಕ್ಷಿಯಾಗಿದ್ದಾರೆ. ಪ್ರಶ್ನೆ ಕೇಳುವ ಸ್ಥಾನದಿಂದ ಉತ್ತರ ಕೊಡುವ ಸ್ಥಾನಕ್ಕೆ ಬಂದಿದ್ದಾರೆ. ಪತ್ರಕರ್ತರಾಗಿಯೇ ಹಿರಿಯರ ಆಶೀರ್ವಾದಗಳನ್ನು ಪಡೆದರು. ಬಸವಲಿಂಗಪ್ಪ ಸಲಹೆಯ ಮೇರೆಗೆ ಪತ್ರಕರ್ತರಾದರು. ಅವರ ವೃತ್ತಿಯನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಿದ್ದಾರೆ. ಇವರನ್ನು ವಿಧಾನ ಪರಿಷತ್ ಗೆ ಆಯ್ಕೆ ಮಾಡಿಕೊಂಡಿದ್ದು, ನಮ್ಮ ಸೌಭಾಗ್ಯ ಎಂದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ನಾನು ಕೂಡ ಪತ್ರಿಕೋದ್ಯಮ ಓದಿದ ವಿದ್ಯಾರ್ಥಿ. ಒಂದು ವೋಟಿನ ಮಹತ್ವ ಏನು ಎಂಬುದು ಇಡೀ ದೇಶಕ್ಕೆ ನನ್ನಿಂದ ತಿಳಿಯಿತು. ಅನೇಕ ಸಂದರ್ಭದಲ್ಲಿ ಮಾಧ್ಯಮ ಕ್ಷೇತ್ರದಲ್ಲಿನ ಹಿರಿಯರು ಸಲಹೆ ನೀಡಿದ್ದಾರೆ. ನನ್ನ ರಾಜಕೀಯ ಜೀವನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮರುಜನ್ಮ ನೀಡಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕರಾದ ದರ್ಶನ್ ಧ್ರುವನಾರಾಯಣ್, ಕೆ. ಹರೀಶ್ ಗೌಡ, ಡಿ. ರವಿಶಂಕರ್, ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಜಂಟಿ ಕಾರ್ಯದರ್ಶಿ ಎಂ. ರಾಮಯ್ಯ ಮೊದಲಾದವರು ಇದ್ದರು.