ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಮಂಡ್ಯ ಮೂಲದ ಅರೋಪಿ ವೆಂಕಟೇಶ್‌ಗೌಡ ಬಿನ್ ಉಮೇಶ್ (೨೭) ಎಂಬಾತ ಪಟ್ಟಣದ ಸಿ. ಎನ್. ಮಂಜುನಾಥ ನಗರದ ಸಾಯಿಬಾಬ ದೇವಸ್ಥಾನದ ಹತ್ತಿರ ವಾಸದ ಮನೆಯಲ್ಲಿ ಬಾಡಿಗೆ ಇದ್ದುಕೊಂಡು, ಒಣ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಮನೆಯಲ್ಲಿ ಅಕ್ರಮವಾಗಿ ಗಾಂಜಾವನ್ನು ಇಟ್ಟಿದ್ದು ಖಚಿತ ಮಾಹಿತಿ ಮೇರೆಗೆ ಮನೆಯ ಮೇಲೆ ದಾಳಿ ಮಾಡಿದ ಅಬಕಾರಿ ಇಲಾಖೆ ಸಿಬ್ಬಂದಿ ಆರೋಪಿತನನ್ನು ದಸ್ತಗಿರಿ ಮಾಡಿ ದೊರೆತ ಮಾಲನ್ನು ಇಲಾಖೆ ವಶಕ್ಕೆ ಪಡೆದುಕೊಂಡು ಪ್ರಕರಣವನ್ನು ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.ಈ ಕಾರ್ಯಾಚರಣೆಯಲ್ಲಿ ಚನ್ನರಾಯಪಟ್ಟಣ ವಲಯದ ಅಬಕಾರಿ ನಿರೀಕ್ಷಕರಾದ ನೂರ್‌ಜಹರಾ ಎನ್.ಐ., ಅಬಕಾರಿ ಉಪ ನಿರೀಕ್ಷಕರಾದ ರೂಪ ವಿ.ಕೆ, ಮತ್ತು ಅಬ್ದುಲ್ ನಿಸಾರ್ ಎಚ್.ಎ. ಹಾಗೂ ಸಿಬ್ಬಂದಿ ಅಬಕಾರಿ ಮುಖ್ಯ ಪೇದೆ ವೀರಭದ್ರ ಕೆ., ಅಬಕಾರಿ ಮುಖ್ಯ ಪೇದೆ ಅಭಿಲಾಷ ಕೆ., ಅಬಕಾರಿ ಪೇದೆ ಪ್ರದೀಪ ಜಿ.ಎಂ, ಅಬಕಾರಿ ಪೇದೆ ಶಿವಕುಮಾರ್ ಬಿ.ಆರ್. ಮತ್ತು ವಾಹನ ಚಾಲಕರಾದ ರಾಜೇಶ್ ಕೆ.ಜೆ ಹಾಜರಿದ್ದರು.