ಶಿಗ್ಗಾಂವಿ: ತಾಲೂಕಿನಲ್ಲಿ ಜೂನ್ ತಿಂಗಳಲ್ಲಿ ಸರಾಸರಿ ೧೦೬.೧ ಮಿಮೀ ಮಳೆ ಪೈಕಿ ೧೨೯.೭ ಮಿಮೀ ಮಳೆಯಾಗಿದೆ. ಶೇ. ೨೨ರಷ್ಟು ಮಳೆಪ್ರಮಾಣ ಹೆಚ್ಚಾಗಿದ್ದು, ರೈತರು ಹೊಲಗಳಲ್ಲಿ ನಿಂತಿರುವ ನೀರನ್ನು ಬಸಿಕಾಲುವೆಗಳ ಮುಖಾಂತರ ಬಸಿದು ಹೋಗುವಂತೆ ಕ್ರಮ ವಹಿಸಬೇಕು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಕೊಟ್ರೇಶ ಗೆಜ್ಲಿ ತಿಳಿಸಿದರು.ತಾಲೂಕು ಕೃಷಿಕ ಸಮಾಜ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ಶೇ. ೯೩ರಷ್ಟು ಬಿತ್ತನೆ ಕಾರ್ಯವಾಗಿದ್ದು, ಮಳೆಯ ಪ್ರಮಾಣ ಕಡಿಮೆಯಾದ ನಂತರ ಅಂತರ ಬೇಸಾಯ ಮತ್ತು ಕಳೆ ತೆಗೆಯುವ ಕೆಲಸವನ್ನು ಕೈಗೊಂಡು ಮೇಲುಗೊಬ್ಬರವಾಗಿ ಶಿಫಾರಸ್ಸಿನಂತೆ ಯೂರಿಯಾ ರಸಗೊಬ್ಬರವನ್ನು ಮಿತವಾಗಿ ಬಳಕೆ ಮಾಡಬೇಕು ಎಂದರು.
ಕೃಷಿಕ ಸಮಾಜದ ಪದಾಧಿಕಾರಿಗಳಾದ ಚಂದ್ರಶೇಖರ ಮಾನೋಜಿ, ಯಲ್ಲಪ್ಪ ಬಾರಕೇರ, ಟಾಕನಗೌಡ ಪಾಟೀಲ, ನಿರ್ದೇಶಕರು ಹಾಗೂ ಕೃಷಿ ಇಲಾಖೆಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕಳವು
ರಾಣಿಬೆನ್ನೂರು: ಹಾಡಹಗಲೇ ಮನೆಯಲ್ಲಿದ್ದ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣವನ್ನು ಕಳ್ಳರು ದೋಚಿ ಪರಾರಿಯಾದ ಘಟನೆ ಗುರುವಾರ ತಾಲೂಕಿನ ಗಂಗಾಪುರ ಗ್ರಾಮದಲ್ಲಿ ಜರುಗಿದೆ.ಗ್ರಾಮದ ಕರ್ಣ ಗಂಗಣ್ಣನವರ ಮನೆಗೆ ನುಗ್ಗಿದ ಕಳ್ಳರು ಮನೆಯ ತಿಜೋರಿಯಲ್ಲಿಟ್ಟಿದ್ದ ₹1.20 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಕಳುವು ಮಾಡಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.