ರಾ.ಹೆ. 66 ರಲ್ಲಿ 10 ತಿಂಗಳಲ್ಲಿ 94 ಮಂದಿ ಅಪಘಾತಕ್ಕೆ ಬಲಿ !

KannadaprabhaNewsNetwork |  
Published : Nov 09, 2026, 02:45 AM IST
ರಾಹೆ ಪ್ರಾದೇಶಿಕ ಅಧಿಕಾರಿಗಳೊಂದಿಗೆ ಸಂಸದ ಕೋಟ ಸಭ ೆನಡೆಸಿದರು | Kannada Prabha

ಸಾರಾಂಶ

ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿಆತಂಕಕಾರಿಯಾಗಿ ಹೆಚ್ಚುತ್ತಿರುವ ವಾಹನ ಅಪಘಾತ ಮತ್ತು ಸಾವಿನ ಪ್ರಮಾಣಗಳ ಬಗ್ಗೆ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ ಪ್ರಾದೇಶಿಕ ಅಧಿಕಾರಿ ವಿಲಾಸ್ ಬ್ರಾಹ್ಮಣ್‌ಕರ್ ಅವರ ಕಚೇರಿಯಲ್ಲಿ ತುರ್ತು ಸಭೆ ನಡೆಸಿದರು.

ಉಡುಪಿ: ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿಆತಂಕಕಾರಿಯಾಗಿ ಹೆಚ್ಚುತ್ತಿರುವ ವಾಹನ ಅಪಘಾತ ಮತ್ತು ಸಾವಿನ ಪ್ರಮಾಣಗಳ ಬಗ್ಗೆ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ ಪ್ರಾದೇಶಿಕ ಅಧಿಕಾರಿ ವಿಲಾಸ್ ಬ್ರಾಹ್ಮಣ್‌ಕರ್ ಅವರ ಕಚೇರಿಯಲ್ಲಿ ತುರ್ತು ಸಭೆ ನಡೆಸಿದರು.

ಅವರು, ಉಡುಪಿ ಜಿಲ್ಲೆಯ ಹೆಜಮಾಡಿಯಿಂದ ಬೈಂದೂರುವರೆಗಿನ ರಾಹೆ 66ರಲ್ಲಿ ಕೇವಲ 10 ತಿಂಗಳಲ್ಲಿ 94 ಮಂದಿ ಅಪಘಾತಕ್ಕೆ ಬಲಿಯಾಗಿ ಸಾವನಪ್ಪಿದ್ದಾರೆ. 14 ಸ್ಥಳ ಅಪಘಾತದ ಬ್ಲಾಕ್‌ಸ್ಪಾಟ್‌ಗಳೆಂದು ಗುರುತಿಸಲಾಗಿದ್ದರೂ ಇಲಾಖೆ ನಿರ್ವಹಣೆ ನಿರ್ಲಕ್ಷದಿಂದ ಸಮಸ್ಯೆ ಗಂಭೀರವಾಗುತ್ತಿದೆ. ಪ್ರಸ್ತಾಪಿತ ರಾಹೆ 66 ಸಮಗ್ರ ಡಿಪಿಆರ್ ಮಾಹಿತಿಯನ್ನು ಜನಪ್ರತಿನಿಧಿಗಳ ಗಮನಕ್ಕೆ ಮೊದಲಾಗಿ ತರಬೇಕು, ಹಾಗಿಲ್ಲದೆ ಹೋದರೆ ಮುಂದಾಗುವ ಸಮಸ್ಯೆಗಳಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಹೊಣೆಯಾಗುತ್ತದೆ ಎಂದರು.

ರಸ್ತೆ ನಿರ್ಮಾಣ ಅನುಮೋದನೆ: ಸಂಸದರಿಗೆ ಮಾಹಿತಿ ಒದಗಿಸಿದ ವಿಲಾಸ್ ಬ್ರಾಹ್ಮಣ್‌ಕರ್, ಹೆಜಮಾಡಿ - ಕುಂದಾಪುರದವರೆಗೆ ಸರ್ವಿಸ್ ರಸ್ತೆ ನಿರ್ಮಾಣ ಅನುಮೋದನೆ ನೀಡಲಾಗಿದೆ. ಕೋಟೇಶ್ವರ, ತೆಕ್ಕಟ್ಟೆ, ಕುಂಭಾಶಿ, ಬ್ರಹ್ಮಾವರ ಕಲ್ಯಾಣಪುರದ ಬಳಿ ಅಂಬಾಗಿಲು, ಎರ್ಮಾಳು ಸರ್ವಿಸ್ ರಸ್ತೆಗಳು ಪ್ರಗತಿಯಲ್ಲಿದ್ದು, ಕೋಟ, ಸಾಸ್ತಾನದ ಬಸ್ ನಿಲ್ದಾಣ ಮತ್ತು ಟೋಲ್ ಬಳಿ ಕಾಮಗಾರಿ ಶೀಘ್ರ ಆರಂಭಿಸಲಾಗುವುದು ಎಂದು ವಿವರಿಸಿದರು.

ಅಲ್ಲದೇ ಸಾಲಿಗ್ರಾಮದ ಗುರುನರಸಿಂಹ ಮತ್ತು ಆಂಜನೇಯ ದೇವಳ ಬಳಿ ಭಕ್ತಾದಿಗಳು ರಾಹೆ ದಾಟುವುದಕ್ಕೆ ಅಂಡರ್‌ಪಾಸ್ ನಿರ್ಮಿಸಲು ತಾಂತ್ರಿಕ ಕಾರಣ, ನೀರು ಹರಿಯುವ ಸಮಸ್ಯೆ ಬಗ್ಗೆ ಪರಿಶೀಲಿಸುವಂತೆ ಗುತ್ತಿಗೆದಾರರಿಗೆ ಪ್ರಾದೇಶಿಕ ಅಧಿಕಾರಿಯವರು ಸೂಚಿಸಿದರು.

ಕಾಪು ವಿಧಾನಸಭಾ ಕ್ಷೇತ್ರದ ತೆಂಕ-ಎರ್ಮಾಳಿನ ಪಾದಚಾರಿ ಮೇಲ್ಸೇತುವೆ ಕಾಮಗಾರಿ ನಿಲ್ಲಿಸಿ, ಉಚ್ಚಿಲ ದೇವಸ್ಥಾನ ಬಳಿ ಮೇಲ್ಸೇತುವೆ ನಿರ್ಮಿಸಲು ತಾನು ಮತ್ತು ಶಾಸಕರು ಕಾಮಗಾರಿ ನಿಲ್ಲಿಸುವಂತೆ ಲಿಖಿತ ಪತ್ರ ಕೊಟ್ಟರೂ ಕಾಮಗಾರಿ ಮುಂದುವರೆಯುತ್ತಿದೆ ಎಂದು ಸಂಸದರ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ತಕ್ಷಣ ಕಾಮಗಾರಿ ನಿಲ್ಲಿಸಲು ಆರ್.ಓ. ಬ್ರಾಹ್ಮಣಕರ್ ರಾಹೆ ಅಧಿಕಾರಿಗಳಿಗೆ ಸೂಚಿಸಿದರು. ಹೆಜಮಾಡಿ, ಸಾಸ್ತಾನ ಟೋಲ್ ಪ್ಲಾಜಾಗಳಲ್ಲಿ 20ಕಿಮೀ ವ್ಯಾಪ್ತಿಯ ವಾಹನ ಮಾಲಕರಿಗೆ ರಿಯಾಯಿತಿ ನೀಡಲು ಸಂಸದರ ಸಲಹೆಗೆ, ಟೋಲ್ ಪ್ಲಾಜಾ ಮುಖ್ಯಸ್ಥ ತಿಮ್ಮಯ್ಯ ಅವರಿಗೆ ಕ್ರಮ ವಹಿಸಲು ಬ್ರಾಹ್ಮಣ್‌ಕರ್ ನಿರ್ದೇಶಿಸಿದರು.ರಾಹೆ 66 ಯೋಜನಾ ನಿರ್ದೇಶಕ ಜಾವೇದ್, ರಾ.ಹೆ ಪ್ರಾಧಿಕಾರ ವ್ಯವಸ್ಥಾಪಕ ನಿರ್ದೇಶಕ ನಿತೀನ್ ಜೋಸೆಫ್, ಡಿಜಿಎಂ ಡಾ.ವಾಣಿಶ್ರೀ ಮತ್ತಿತರ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟನ್ ಕಬ್ಬಿಗೆ ₹1,000 ಹೆಚ್ಚುವರಿ ದರ ನಿಗದಿಗೆ ಪಟ್ಟು
ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ತಕ್ಷಣ ಆರಂಭಿಸಿ