ಬೀದರ್: ನಗರದ ನೌಬಾದನ ಡಾ.ಬಾಬು ಜಗಜೀವರಾಮ್ ಸಮುದಾಯ ಭವನ ಆವರಣದಲ್ಲಿ ಕರ್ನಾಟಕ ಮಾದಿಗ ವೇಲ್‌ಫೇರ್ ಅಸೋಸಿಯೇಷನ್ ವತಿಯಿಂದ ವಚನಕಾರ, ಕಾಯಕ ಯೋಗಿ ಶಿವಶರಣ ಮಾದಾರ ಚನ್ನಯ್ಯ ಅವರ 973ನೇ ಜಯಂತೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿ, ಅಪ್ಪನು ಮಾದಾರ ಚನ್ನಯ್ಯ, ಮಾನವ ಕುಲದ ತಿಲಕ ಮಾದಾರ ಚನ್ನಯ್ಯ ಎಂದು ನುಡಿದ ಅಣ್ಣ ಬಸವಣ್ಣನವರು ಈ ಸಮಾಜಕ್ಕೆ ಒಂದು ಸಂದೇಶವನ್ನು ನೀಡಿ, ಮಾನವ ಕುಲದಲ್ಲಿ ಒಳ್ಳೆಯದು ಮತ್ತು ಕೆಟ್ಟದು ಇವೆರಡೇ ಜಾತಿಗಳಾಗಿವೆ. ಮನುಕುಲದಲ್ಲಿ ಎಲ್ಲರೂ ಸಮಾನರು ಎಂದು ನುಡಿದರು.
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ಪೂಜ್ಯ ಕಾಂತಸ್ವಾಮಿ, ಮಾದಾರ ಚನ್ನಯ್ಯ ಅರಿವು ಪೀಠ ಬಸವಕಲ್ಯಾಣ, ಪೂಜ್ಯ ಸದ್ಗುರು ಸತ್ಯದೇವಿ ಅನುಭವ ಮಂಟಪ ಬೀದರ್, ಶರಣೆ ತಾಯಿ ಚಿತ್ರಮ್ಮಾ, ಸ್ವಾಮಿದಾಸ ಕೆಂಪೇನೋರ್ ಭಾಗವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸುಭಾಷ ಕಲ್ಲೂರ್, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಯುವ ಉದ್ಯಮಿ ಮಲ್ಲಿಕನಾಥ ಮಡಿಗೆ, ಭಾಸ್ಕರ ಅಗಷ್ಠಿನ್, ಸಂಜುಕುಮಾರ ನಂಜವಾಡ್, ಅಭಿ ಕಾಳೆ ಉಪತ್ಥಿತರಿದ್ದರು.