ಕನ್ನಡಪ್ರಭ ವಾರ್ತೆ ಬೆಂಗಳೂರು
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಕಳೆದ ಅಕ್ಟೋಬರ್ 27ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಯಲ್ಲಿ 97.90 ಲಕ್ಷ ಮತದಾರರಿದ್ದರು. ನಂತರ ಹೆಚ್ಚುವರಿಯಾಗಿ 53 ಸಾವಿರ ಮತದಾರರು ಸೇರ್ಪಡೆಗೊಂಡಿದ್ದು, ಅಂತಿಮವಾಗಿ ನಗರ ಜಿಲ್ಲೆ ವ್ಯಾಪ್ತಿಯಲ್ಲಿ 98.43 ಲಕ್ಷ ಮತದಾರರಿದ್ದಾರೆ. ಒಟ್ಟು ಮತದಾರರ ಪೈಕಿ 50.78 ಲಕ್ಷ ಪುರುಷ, 47.63 ಲಕ್ಷ ಮಹಿಳೆ ಹಾಗೂ 1,784 ಇತರ ಮತದಾರರಿದ್ದಾರೆ ಎಂದು ತಿಳಿಸಿದರು.
1.33 ಲಕ್ಷ ಮತದಾರರು ಪಟ್ಟಿಯಿಂದ ಹೊರಕ್ಕೆ:ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರದಿಂದ ಹೆಸರು ಬದಲಾವಣೆ, ಮತದಾರರ ಪಟ್ಟಿಯಿಂದ ಹೆಸರು ತೆಗೆಸುವುದು ಸೇರಿದಂತೆ ಇನ್ನಿತರ ಬದಲಾವಣೆಗಾಗಿ 1.86 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ 47,960 ಅರ್ಜಿಗಳು ವಿವಿಧ ರೀತಿಯ ಬದಲಾವಣೆಗಾಗಿ ಸಲ್ಲಿಕೆಯಾಗಿದ್ದರೆ, 1.33 ಲಕ್ಷ ಹೆಸರು ತೆಗೆದು ಹಾಕಲು ಸಲ್ಲಿಕೆಯಾದ ಅರ್ಜಿಗಳಾಗಿವೆ. ಅಕ್ಟೋಬರ್ 27ರಿಂದ ಜ.22ರವರೆಗೆ ಒಟ್ಟು 53,078 ಮತದಾರರನ್ನು ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ತುಷಾರ್ ಗಿರಿನಾಥ್ ಹೇಳಿದರು.
ಕರಡು ಮತದಾರರ ಪಟ್ಟಿ ಪ್ರಕಟಗೊಂಡಾಗ ಲಿಂಗಾನುಪಾತ 1000 ಪುರುಷರಿಗೆ 934 ಇತ್ತು. ಅದೇ ಅಂತಿಮ ಪಟ್ಟಿಯಲ್ಲಿ ಈ ಸಂಖ್ಯೆ 938ಕ್ಕೆ ಏರಿಕೆಯಾಗಿದೆ. ಅದೇ ರೀತಿ ಇದೇ ಮೊದಲ ಬಾರಿಗೆ ಮತ ಚಲಾಯಿಸುವ 1.12 ಲಕ್ಷ ಯುವ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ ಎಂದು ತುಷಾರ್ ಗಿರಿನಾಥ್ ವಿವರಿಸಿದರು.
---
ಅಂತಿಮ ಮತದಾರರ ಪಟ್ಟಿ ಪ್ರಕಾರ ಬೆಂಗಳೂರು ಜಿಲ್ಲೆ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅತಿಹೆಚ್ಚು 7.17 ಲಕ್ಷ ಮತದಾರರಿದ್ದಾರೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ 1.95 ಲಕ್ಷ ಮತದಾರರಿದ್ದಾರೆ.
* ಅತಿ ಹೆಚ್ಚು ಮತದಾರರಿರುವ 5 ಕ್ಷೇತ್ರಗಳು
ಮಹದೇವಪುರ: 6.27 ಲಕ್ಷ
ಕೆ.ಆರ್.ಪುರ: 5.24 ಲಕ್ಷ
ಬ್ಯಾಟರಾಯನಪುರ: 5.17 ಲಕ್ಷ* ಅತಿ ಕಡಿಮೆ ಮತದಾರರಿರುವ 5 ಕ್ಷೇತ್ರಗಳುಚಿಕ್ಕಪೇಟೆ: 1.95 ಲಕ್ಷ
ಗಾಂಧಿನಗರ: 2.06 ಲಕ್ಷಜಯನಗರ: 2.10 ಲಕ್ಷ
ಶಿವಾಜಿನಗರ: 2.25 ಲಕ್ಷಮಲ್ಲೇಶ್ವರ: 2.26 ಲಕ್ಷ