ಬೇಲೂರು ಅಯ್ಯಪ್ಪ ಸ್ವಾಮಿ ದೇವಸ್ಥಾನದ 9ನೇ ವಾರ್ಷಿಕೋತ್ಸವ

KannadaprabhaNewsNetwork |  
Published : Nov 23, 2026, 02:00 AM IST
19ಎಚ್ಎಸ್ಎನ್16 :  | Kannada Prabha

ಸಾರಾಂಶ

ಜನವರಿ 4ರಂದು ಚನ್ನಕೇಶವ ಸ್ವಾಮಿ ದೇವಸ್ಥಾನದಿಂದ ಅಯ್ಯಪ್ಪ ಸ್ವಾಮಿ ಆಭರಣ ಮೆರವಣಿಗೆಯಲ್ಲಿ ತಂದು ಸ್ವಾಮಿಗೆ ಅರ್ಪಿಸಲಾಗುವುದು. ​ಜನವರಿ 5 , 6 ರಂದು ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ.

ಕನ್ನಡಪ್ರಭ ವಾರ್ತೆ ಬೇಲೂರು

ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದ 9ನೇ ವರ್ಷದ ವಾರ್ಷಿಕೋತ್ಸವವನ್ನು ಜನವರಿ 4, 5 ಮತ್ತು 6ರಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ವೈ. ಎನ್‌. ಕೃಷ್ಣೇಗೌಡ ತಿಳಿಸಿದ್ದಾರೆ.

ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ, ಒಂಬತ್ತು ವರ್ಷ ಹಿಂದೆ ನಿರ್ಮಾಣವಾಗಿರುವ ಈ ದೇವಸ್ಥಾನದ ವಾರ್ಷಿಕೋತ್ಸವ ಅತ್ಯಂತ ಯಶಸ್ವಿಯಾಗಿ ನಡೆಸಲು ಸಮಿತಿ ಹಾಗೂ ಕಾರ್ಯಕರ್ತರು ಸಿದ್ಧತೆ ನಡೆಸಿದ್ದಾರೆ. ನಾಡಿಗೆ ಉತ್ತಮ ಮಳೆ-ಬೆಳೆ ಹಾಗೂ ಜನರಿಗೆ ಆರೋಗ್ಯ, ಐಶ್ವರ್ಯ ಕರುಣಿಸುವಂತೆ ಸ್ವಾಮಿಯಲ್ಲಿ ಪ್ರಾರ್ಥಿಸಲಾಗುವುದು ಎಂದರು.

ಅಯ್ಯಪ್ಪ ಸ್ವಾಮಿ ದೇವಸ್ಥಾನದ ಟ್ರಸ್ಟ್ ಕಾರ್ಯದರ್ಶಿ ಯಮಸಂದಿ ಪಾಪಣ್ಣ ಮಾತನಾಡಿ, ​ಜನವರಿ 4ರಂದು ಚನ್ನಕೇಶವ ಸ್ವಾಮಿ ದೇವಸ್ಥಾನದಿಂದ ಅಯ್ಯಪ್ಪ ಸ್ವಾಮಿ ಆಭರಣ ಮೆರವಣಿಗೆಯಲ್ಲಿ ತಂದು ಸ್ವಾಮಿಗೆ ಅರ್ಪಿಸಲಾಗುವುದು. ​ಜನವರಿ 5 , 6 ರಂದು ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ನವೆಂಬರ್‌ 16ರಿಂದ ಅಯ್ಯಪ್ಪನ ಮಂಡಲ ಪೂಜೆ ಮತ್ತು ವ್ರತಾಚರಣೆ ಆರಂಭವಾಗಿದ್ದು, ಈಗಾಗಲೇ 50ಕ್ಕೂ ಹೆಚ್ಚು ಸ್ವಾಮಿಗಳು ಮಾಲೆ ಧರಿಸಿದ್ದಾರೆ. ಮಾಲೆ ಧರಿಸುವ ಸ್ವಾಮಿಗಳಿಗೆ ಹಾಗೂ ಹೊರಗಿನಿಂದ ಬರುವ ಭಕ್ತರಿಗೆ ದೇವಸ್ಥಾನದ ವತಿಯಿಂದ ಸ್ನಾನ, ವಸತಿ, ಶೌಚಾಲಯ ಮತ್ತು ಮೂರು ಹೊತ್ತು ಉಚಿತ ಅನ್ನದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಗೌರವಾಧ್ಯಕ್ಷ ಬಿ. ಎಮ್ ಸಂತೋಷ್, ​ಉಪಾಧ್ಯಕ್ಷ ಬಳ್ಳೂರು ಉಮೇಶ್‌, ದೇವಸ್ಥಾನದ ಗುರುಸ್ವಾಮಿಗಳಾದ ದೇವಿ ಸ್ವಾಮಿ, ಟ್ರಸ್ಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಾರಾಷ್ಟ್ರೀಯ ಸಮ್ಮೇಳನ ಯಶಸ್ವಿ
ಸರ್ಕಾರದ ಅನುದಾನದ ಜೊತೆಗೆ ದಾನಿಗಳ ನೆರವು ಪಡೆಯಿರಿ: ವಿಜಯ ಮಾನೆ