ಲಕ್ಷ್ಮೇಶ್ವರ: ಅಪೌಷ್ಟಿಕತೆ, ಸಮಾಜದ ಮೇಲೆ ಅದರ ಪ್ರಭಾವ ಮತ್ತು ಆರೋಗ್ಯಕರ ಮತ್ತು ಸಮತೋಲಿತ ಆಹಾರದ ಮೌಲ್ಯ ತಿಳಿಸಲು ವಿದ್ಯಾರ್ಥಿಗಳಿಗೆ ಚಟುವಟಿಕೆ ಆಯೋಜಿಸಲಾಗುತ್ತಿದೆ ಎಂದು ಸಿಆರ್‌ಪಿ ಸತೀಶ ಬೋಮಲೆ ಹೇಳಿದರು. ಗುರುವಾರ ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ನಡೆದ ಪೋಷಣ ಅಭಿಯಾನ ಕಾರ್ಯಕ್ರಮ ವೀಕ್ಷಣೆ ಮಾಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶದ ಆಹಾರಗಳು ಮತ್ತು ಅವುಗಳ ಪ್ರಯೋಜನಗಳು, ಆಹಾರಗಳ ವೈಜ್ಞಾನಿಕ ಹೆಸರು, ದೈನಂದಿನ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯ ಬಗ್ಗೆ ಹೆಚ್ಚು ಸಕ್ರಿಯ ಜಾಗೃತಿ ತರಲು ಗಮನಹರಿಸಲಾಗಿದೆ. ಮಕ್ಕಳು ಮತ್ತು ಸಮುದಾಯದ ಆರೋಗ್ಯ ಸುಧಾರಿಸಲು, ಪೋಷಣ ಅಭಿಯಾನವನ್ನು 2018ರಲ್ಲಿ ಭಾರತದಾದ್ಯಂತ ಪ್ರಾರಂಭಿಸಲಾಯಿತು ಎಂದು ಹೇಳಿದರು.
ಈ ವೇಳೆ ಸಹ ಶಿಕ್ಷಕ ಆರ್.ಎಂ. ಶಿರಹಟ್ಟಿ, ಎಚ್.ಡಿ. ನಿಂಗರೆಡ್ಡಿ, ಸ್ವಪ್ನಾ ಕಾಳೆ, ಅಕ್ಷತಾ ಕಾಟಿಗರ, ಲಕ್ಷ್ಮಿ ಹತ್ತಿಕಟ್ಟಿ, ಆರ್.ಕೆ. ಉಪನಾಳ ಹಾಗೂ ಶಾಲೆಯ ಅಡುಗೆ ಸಿಬ್ಬಂದಿ ರಜೀಯಾ ನದಾಫ್, ಶಶಿಕಲಾ ರಾಯಭಾಗಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.