ಅಕಾಲಿಕ ಮಳೆಗೆ ನೆಲಕ್ಕೆ ಬಿದ್ದ ಬಾಳೆ

KannadaprabhaNewsNetwork |  
Published : May 24, 2026, 03:00 AM IST
ತಾಳಿಕೋಟೆ  1 | Kannada Prabha

ಸಾರಾಂಶ

ತಾಳಿಕೋಟೆ: ಕಳೆದ ಎರಡು ದಿನಗಳ ಹಿಂದಷ್ಟೇ ಭೀಕರ ಬಿರುಗಾಳಿ ಸಹಿತ ಮಳೆ ಉಂಟಾದ ಪರಿಣಾಮ ಸಾಕಷ್ಟು ಬೆಳೆ ಹಾನಿಯಾಗಿದೆ. ತಾಲೂಕಿನ ಹೊಸಳ್ಳಿ ಗ್ರಾಮದ ರೈತ ಶಾಂತಗೌಡ ಬಿರಾದಾರ ಎಂಬುವರ ಜಮೀನಿನಲ್ಲಿ ಬೆಳೆದಿದ್ದ 5 ಎಕರೆ ಪ್ರದೇಶದಲ್ಲಿನ ಸಾವಿರಾರು ಬಾಳೆ ಗಿಡಗಳು, ಮುರಿದು ನೆಲಕ್ಕೆ ಬಿದ್ದಿವೆ.

ತಾಳಿಕೋಟೆ: ಕಳೆದ ಎರಡು ದಿನಗಳ ಹಿಂದಷ್ಟೇ ಭೀಕರ ಬಿರುಗಾಳಿ ಸಹಿತ ಮಳೆ ಉಂಟಾದ ಪರಿಣಾಮ ಸಾಕಷ್ಟು ಬೆಳೆ ಹಾನಿಯಾಗಿದೆ. ತಾಲೂಕಿನ ಹೊಸಳ್ಳಿ ಗ್ರಾಮದ ರೈತ ಶಾಂತಗೌಡ ಬಿರಾದಾರ ಎಂಬುವರ ಜಮೀನಿನಲ್ಲಿ ಬೆಳೆದಿದ್ದ 5 ಎಕರೆ ಪ್ರದೇಶದಲ್ಲಿನ ಸಾವಿರಾರು ಬಾಳೆ ಗಿಡಗಳು, ಮುರಿದು ನೆಲಕ್ಕೆ ಬಿದ್ದಿವೆ. ಇನ್ನೇನು ವಾರ ಕಳೆಯುವಷ್ಟರಲ್ಲಿ ಬಾಳೆ ಗೊನೆಗಳನ್ನು ಕಟಾವು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗೋದು ಬಾಕಿ ಇತ್ತು. ಅಷ್ಟರಲ್ಲಾಗಲೇ ವರ್ಷಗಟ್ಟಲೇ ಕಷ್ಟಪಟ್ಟು ದುಡಿದ ಬಾಳೆ ಬೆಳೆ ಸಂಪೂರ್ಣ ನಾಶವಾಗಿದೆ. ಒಟ್ಟು 5 ಎಕರೆಯಲ್ಲಿ ಸುಮಾರು 1200ಕ್ಕೂ ಅಧಿಕ ಬಾಳೆಗಿಡಗಳನ್ನು ಬೆಳೆದಿದ್ದರು. ಅಂದಾಜು ₹7 ಲಕ್ಷ ಖರ್ಚು ಮಾಡಿದ್ದ ಬೆಳೆ ಅಸಲಿಗೂ ಲೆಕ್ಕ ಇಲ್ಲದಂತಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸೂಕ್ತ ಪರಿಹಾರ ನೀಡಬೇಕೆಂದು ರೈತ ಶಾಂತಗೌಡ ಬಿರಾದಾರ ಒತ್ತಾಯಿಸಿದ್ದಾನೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೈಲಾದಷ್ಟು ಸಹಾಯ ಮಾಡಲು ಸಂಕಲ್ಪ ಮಾಡಿ: ಶಾಸಕ ಕಟಕಧೊಂಡ
ಸಾಲಹಳ್ಳಿಯಲ್ಲಿ ನಾಳೆ ಗುರ್ಲಾಪುರ ಮಾದರಿ ಹೋರಾಟ?