- ಅಗರಬನ್ನಿಹಟ್ಟಿ ತಸ್ಮೀಯ ಖಾನಂ, ಶಿವಮೊಗ್ಗ ಮೂಲದ ಮುಜೀಬುಲ್ಲಾ ಶೇಖ್ ಬಂಧಿತರು
- ಆರೋಪಿಗಳಿಂದ ₹10.77 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವಶ- - - ಕನ್ನಡಪ್ರಭ ವಾರ್ತೆ ದಾವಣಗೆರೆ ಪರಿಚಯಸ್ಥನೊಂದಿಗೆ ಸೇರಿ ತನ್ನದೇ ಮನೆಯಲ್ಲಿ ಕಳವು ಕೃತ್ಯ ನಡೆಸಿದ್ದ ಯುವತಿ ಹಾಗೂ ಸಹಚರನನ್ನು ಬಂಧಿಸಿರುವ ಪೊಲೀಸರು, ಸುಮಾರು ₹10.77 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯ ಚನ್ನಗಿರಿ ತಾಲೂಕು ಅಗರಬನ್ನಿಹಟ್ಟಿ ಗ್ರಾಮದ ತಸ್ಮೀಯ ಖಾನಂ (26), ಶಿವಮೊಗ್ಗ ಇಲಿಯಾಜ್ ನಗರ ಮೂಲದ ಹಾಲಿ ಬೆಂಗಳೂರು ರಾಜಾಜಿನಗರ ನಿವಾಸಿ ಮುಜೀಬುಲ್ಲಾ ಶೇಖ್ (42) ಬಂಧಿತರು.ಚನ್ನಗಿರಿ ಪೊಲೀಸರಿಗೆ ದೂರು:
ತಸ್ಮೀಯ ಖಾನಂ ಹಣ, ಆಭರಣ ಲಪಟಾಯಿಸಲು ತಮ್ಮ ಕುಟುಂಬಕ್ಕೆ ನಿಕಟವರ್ತಿಯಾಗಿದ್ದ ಮುಜೀಬುಲ್ಲಾ ಶೇಖ್ ಜೊತೆ ಸೇರಿ ಕುತಂತ್ರ ನಡೆಸಿದ್ದಳು. ಮನೆಯಲ್ಲಿ ಚಿನ್ನಾಭರಣ-ನಗದು ಕಳ್ಳರು ಕಳವು ಮಾಡಿದ್ದಾರೆಂಬ ಸುಳ್ಳುಕಥೆ ಯಾರಿಗೂ ಗೊತ್ತಾಗಬಾರದು ಎಂದು ನಾಟಕವಾಡಿರುವುದು ವಿಚಾರಣೆ ವೇಳೆ ಪೊಲೀಸರಿಗೆ ತಿಳಿದುಬಂದಿದೆ.
ಆರೋಪಿ ತಸ್ಮೀಯ ಖಾನಂ ಈ ಬಗ್ಗೆ ತಪ್ಪೊಪ್ಪಿಕೊಂಡಿದ್ದಾಳೆ. ಆಕೆ ನೀಡಿದ ಮಾಹಿತಿ ಮೇರೆಗೆ ಪ್ರಕರಣದಲ್ಲಿ ಕಳವು ಮಾಡಿದ್ದ ₹9.5 ಲಕ್ಷ ಬೆಲೆ ಬಾಳುವ 155 ಗ್ರಾಂ ಚಿನ್ನಾಭರಣ ಹಾಗೂ ₹1,27,000 ಹಣವನ್ನು ಮತ್ತೊಬ್ಬ ಆರೋಪಿ ಮುಜೀಬುಲ್ಲಾ ಶೇಖ್‌ನ ಶಿವಮೊಗ್ಗ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ. ಸಧ್ಯಕ್ಕೆ ಈ ಇಬ್ಬರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.ಪ್ರಕರಣದ ಪತ್ತೆಗಾಗಿ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್, ಎಎಸ್‌ಪಿಗಳಾದ ವಿಜಯಕುಮಾರ್ ಎಂ.ಸಂತೋಷ್, ಜಿ.ಮಂಜುನಾಥ್, ಚನ್ನಗಿರಿ ಡಿವೈಎಸ್‌ಪಿ ಸ್ಯಾಮ್ ವರ್ಗಿಸ್ ಮಾರ್ಗದರ್ಶನದಲ್ಲಿ ಪಿಐ ಬಾಲಚಂದ್ರ ನಾಯ್ಕ ನೇತೃತ್ವದಲ್ಲಿ ಪಿಎಸ್‌ಐಗಳಾದ ಸುರೇಶ್, ಜಗದೀಶ್, ಸಿಬ್ಬಂದಿ ಒಳಗೊಂಡ ತಂಡ ರಚಿಸಲಾಗಿತ್ತು.
- - - (- ಸಾಂದರ್ಭಿಕ ಫೋಟೋ:)