ಕುಂದಗೋಳ: ಹಡಪದ ಅಪ್ಪಣ್ಣನವರು ಕೇವಲ ಒಬ್ಬ ವಚನಕಾರರಷ್ಟೇ ಅಲ್ಲ. ಶರಣ ಸಂಕುಲದ ಸೇವೆಯನ್ನು ನಿಷ್ಠೆಯಿಂದ ಮಾಡಿದ ಶ್ರೇಷ್ಠ ಶಿವಶರಣರು ಎಂದು ಹಡಪದ ಅಪ್ಪಣ್ಣ ಸಮಾಜದ ರಾಜ್ಯಾಧ್ಯಕ್ಷ ದೇವು ಹಡಪದ ಹೇಳಿದರು.
ಶಿರಹಟ್ಟಿ ಹಡಪದ ಅಪ್ಪಣ್ಣ ಸಮಾಜದ ತಾಲೂಕು ಅಧ್ಯಕ್ಷ ಶರಣಪ್ಪ ಹಡಪದ ಮಾತನಾಡಿ, ಸರ್ಕಾರದಿಂದ ದೊರೆಯುವ ಸೌಲಭ್ಯ ಪಡೆಯಬೇಕಾದರೆ ಮೊದಲು ನಾವೆಲ್ಲರೂ ಸಂಘಟಿತರಾಗಬೇಕು ಎಂದು ಹೇಳಿದರು.
ತಾಲೂಕು ಸಮಾಜ ಘಟಕದ ಅಧ್ಯಕ್ಷ ಫಕೀರಪ್ಪ ಮೂಲಿಮನಿ ಮಾತನಾಡಿ, ಎಲ್ಲ ಸಮುದಾಯಗಳ ಜತೆಗೆ ಉತ್ತಮ ಬಾಂಧವ್ಯ ಹೊಂದಿ ಸಮಾಜವನ್ನು ಸಂಘಟಿಸಬೇಕೆಂದು ಯುವಕರಿಗೆ ಕರೆ ನೀಡಿದರು.ಹಿರಿಯ ಮುಖಂಡ ವಿ.ವಿ. ರಂಗನಗೌಡ್ರ ಮಾತನಾಡಿದರು. ಜಯಂತಿ ಅಂಗವಾಗಿ ಬಡವರಿಗೆ ಆಹಾರ ಕಿಟ್ ವಿತರಿಸಲಾಯಿತು. ಸಮಾಜದ ಮುಖಂಡ ಗುರುಸಿದ್ದಪ್ಪ ನಾವಿ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನ ಹಡಪದ, ಸಂಪತಗೌಡ ತಿಮ್ಮನಗೌಡ, ಗುರುನಗೌಡ ಹಿರೇಗೌಡ, ನಾಗಣ್ಣ ರಾಯರ, ನಾಗನಗೌಡ ಹಿರೇಗೌಡ, ಬಸಪ್ಪ ನಾವಿ, ಕೃಷ್ಣಚಾರ್ಯ ಸುತಾರ, ಸಂಜು ತಿಮ್ಮನಗೌಡ, ಬಸನಗೌಡ ಮಸಿದ್ದನವರ, ನಿಂಗಪ್ಪ ನಾವಿ, ಬಸವರಾಜ ಹಡಪದ ಉಪಸ್ಥಿತರಿದ್ದರು.