- ಅತಿ ಹಿರಿಯ ಶಾಸಕರಿದ್ದ ಕ್ಷೇತ್ರಕ್ಕೆ ಈಗ ಕಿರಿಯ ಶಾಸಕನಾಗಿ ಮೊಮ್ಮಗ । - ಬಿಜೆಪಿಯ ಶ್ರೀನಿವಾಸ ದಾಸಕರಿಯಪ್ಪ ವಿರುದ್ಧ 5,708 ಮತದ ಗೆಲುವು
ಕನ್ನಡಪ್ರಭ ವಾರ್ತೆ ದಾವಣಗೆರೆ
ದಿವಂಗತ ಶಾಮನೂರು ಶಿವಶಂಕರಪ್ಪ ಅಗಲಿಕೆಯಿಂದ ತೆರವಾಗಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಕಾಂಗ್ರೆಸ್ ಪಕ್ಷದ ಸಮರ್ಥ ಎಂ. ಶಾಮನೂರು ತಮ್ಮ ಎದುರಾಳಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ ವಿರುದ್ಧ 5708 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ.ದೇಶದಲ್ಲೇ ಅತಿ ಹಿರಿಯ ವಯಸ್ಸಿನ ಶಾಸಕರೆಂಬ ಹೆಗ್ಗಳಿಕೆ ಹೊಂದಿದ್ದ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಏ.9ಕ್ಕೆ ಉಪ ಚುನಾವಣೆ ನಡೆದಿತ್ತು. ಕಾಂಗ್ರೆಸ್ ಪಕ್ಷವು ಶಾಮನೂರು ಮೊಮ್ಮಗ ಸಮರ್ಥ ಎಂ. ಶಾಮನೂರುಗೆ ಕಣಕ್ಕಿಳಿಸಿದ್ದು, ಅಜ್ಜ ಅತಿ ಹಿರಿಯ ಶಾಸಕರೆಂಬ ಹೆಗ್ಗಳಿಕೆ ಪಡೆದಿದ್ದರು. ಇದೀಗ ರಾಜ್ಯದಲ್ಲೇ ಅತಿ ಕಿರಿಯ ಶಾಸಕ ಎಂಬ ಕೀರ್ತಿಗೆ ಸಮರ್ಥ ಪಾತ್ರರಾಗಿರುವುದು ವಿಶೇಷ.
ಕ್ಷೇತ್ರದಲ್ಲಿ ಒಟ್ಟು 2,31,072 ಮತದಾರರ ಪೈಕಿ 1,58,131 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದರು. ಮೊದಲ 7 ಸುತ್ತಿನ ಮತ ಎಣಿಕೆಯಲ್ಲಿ ಎಂದಿನಂತೆ ಬಿಜೆಪಿ ಮುನ್ನಡೆ ಸಾಧಿಸಿತ್ತು. ಅಂಚೆ ಮತ ಎಣಿಕೆ ನಂತರ ಶುರುವಾದ ಇವಿಎಂ ಮತಗಳ ಎಣಿಕೆಯು ಶುರುವಾಗುತ್ತಿದ್ದಂತೆ ಮೊದಲ 8539 ಮತಗಳ ಅಂತರದ ಮುನ್ನಡೆ ಸಾಧಿಸಿತ್ತು. ಇದು ಸಹಜವಾಗಿಯೇ ಬಿಜೆಪಿ ಪಾಳೆಯದಲ್ಲಿ ಹೊಸ ಆಸೆ ಚಿಗುರೊಡಿಸಿತ್ತು. ಆದರೆ, 8ನೇ ಸುತ್ತಿನ ಮತ ಎಣಿಕೆ ಶುರು ಆಗುತ್ತಿದ್ದಂತೆಯೇ ಇಡೀ ಚಿತ್ರಣವೇ ಬದಲಾಯಿತು.
ಯಾರ್ಯಾರಿಗೆ ಎಷ್ಟೆಷ್ಟು ಮತ:
ತಮ್ಮ ತಂದೆ ಪ್ರತಿನಿಧಿಸುತ್ತಿದ್ದ, ಕಾಂಗ್ರೆಸ್ಸಿನ ಭದ್ರಕೋಟೆಯಾಗಿ ಕಾಯ್ದುಕೊಂಡು ಬಂದಿದ್ದ ದಕ್ಷಿಣ ಕ್ಷೇತ್ರದಲ್ಲಿ ತಮ್ಮ ಪುತ್ರ ಸಮರ್ಥ ಎಂ. ಶಾಮನೂರು ಜಯ ಸಾಧಿಸಿದ ಖುಷಿಯಲ್ಲಿದ್ದರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಹ ತಮ್ಮ ಪುತ್ರನ ಗೆಲುವಿಗೆ ಸಂಭ್ರಮ ಹಂಚಿಕೊಂಡರಲ್ಲದೇ, ತಮ್ಮ ಮಾವ ಶಾಮನೂರು ಶಿವಶಂಕರಪ್ಪನವರ ಕೆಲಸ, ಕಾರ್ಯದರ್ಶಿಗಳನ್ನು ಮುಂದುವರಿಸಿಕೊಂಡು ಹೋಗುವ ವಿಶ್ವಾಸ ವ್ಯಕ್ತಪಡಿಸಿದರು.
- - -
* ದಾವಣಗೆರೆ ದಕ್ಷಿಣ ಕ್ಷೇತ್ರದ ಫಲಿತಾಂಶ ವಿವರ. * ಗೆಲುವು- (ಪಕ್ಷ)- ಸಮರ್ಥ ಶಾಮನೂರು (ಕಾಂಗ್ರೆಸ್) ಪಡೆದ ಮತಗಳು- 69,578 - - - * ಸಮೀಪದ ಪ್ರತಿಸ್ಪರ್ಧಿ (ಪಕ್ಷ) - ಶ್ರೀನಿವಾಸ ದಾಸಕರಿಯಪ್ಪ (ಬಿಜೆಪಿ) ಪಡೆದ ಮತಗಳು- 63870 - - - ಗೆಲುವಿನ ಅಂತರ- 5,708 ಮತಗಳು.- - - - - - - - - - - - - - - - - - - - - - - - - - * ಉಳಿದ ಅಭ್ಯರ್ಥಿಗಳು ಪಡೆದ ಮತಗಳ ವಿವರ: ಅಭ್ಯರ್ಥಿ - ಪಡೆದ ಮತಗಳು - ಅಫ್ಸರ್ ಕೊಡ್ಲಿಪೇಟೆ (ಎಸ್‌ಡಿಪಿಐ) 18,975 - ಸೈಯದ್ ರಿಯಾಜ್ (ಪಕ್ಷೇತರ) 1186 - ಖಾದರ್ ಆದಿಲ್ ಬಾಷಾ 1082 - ಮನ್ಸೂರ್ ಆಲಿ- 477 - ಕೆ.ಎಸ್. ಶಿವಕುಮಾರಪ್ಪ (ಎಎಪಿ)- 453 - ಜಬೀನಾ ಆಪಾ - 335- ಅಖಂಡ ಮಂಜುನಾಥ ಸ್ವಾಮಿ- 292- ಈರಣ್ಣ- 234 - ಕೆ.ಎಚ್.ಮೆಹಬೂಬ್- 225 - ಈಶ್ವರ ಶೇಂಗಾ- 157 - ಬಿ.ರಾಜಶೇಖರ- 106 - ಗೌತಮ್ ಜೈನ್- 102 - ಶಾಬಾಜ್ ಖಾನ್ 95 - ಸಾಜಿದ್- 94 - ಸೈಯದ್ ಇಮ್ತಿಯಾಜ್- 87 - ಸೈಯದ್ ಚಾಂದಪೀರ್- 77 - ಎಂ.ಜಿ.ಶ್ರೀಕಾಂತ- 72 - ಸುಭಾನ್ ಖಾನ್- 70 - ಖಾಜಾಮುದ್ದೀನ್ ಗುಡಿಗೇರಿ- 50 - ದಾದಾ ಕಲಂದರ್- 50 - ಸಾದಿಕ್ ಪೈಲ್ವಾನ್- 47 - ಜೆ.ಎನ್. ಪ್ರಶಾಂತಕುಮಾರ- 46 - ದಲಿತ ಶ್ರೀನಿವಾಸ- 42 - - - - - - - - - - - - - - - - - - - - - - * 14 ಮುಸ್ಲಿಂ ಅಭ್ಯರ್ಥಿಗಳು ಪಡೆದ ಒಟ್ಟು ಮತಗಳು- 22,849. - - - - - - - - - - - - - - - - - - - - - - ಇವಿಎಂ ಮತಗಳು-158131ಅಂಚೆ ಮತಗಳು- 227ಚಲಾವಣೆಗೊಂಡ ಒಟ್ಟು ಮತಗಳು- 1,58,358, ಅಸಿಂಧುಗೊಂಡ ಅಂಚೆ ಮತಗಳು- 40ನೋಟಾ- 511 ಒಟ್ಟು ಪುರಸ್ಕೃತ ಮತಗಳು- 157807 - - - - - - - - - - - - - - - - - - - - - -- - -