ಮನಸ್ಥಿತಿ ಬದಲಾದರೆ ಮಾತ್ರ ಸ್ವಚ್ಛ ಸಿರುಗುಪ್ಪ ಸಾಧ್ಯ

KannadaprabhaNewsNetwork |  
Published : Feb 04, 2026, 02:15 AM IST
ಸ | Kannada Prabha

ಸಾರಾಂಶ

ಪೌರ ಕಾರ್ಮಿಕರಿಂದ ಹಿಡಿದು ಎಲ್ಲ ಅಧಿಕಾರಿಗಳು ಹಾಗೂ ಸಾರ್ವಜನಿಕರು, ಮೊದಲು ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು.

ಸಿರುಗುಪ್ಪ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ವಚ್ಛತೆಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ. ಹಣಕಾಸು ಹಾಗೂ ಮಾನವ ಸಂಪನ್ಮೂಲ ನೀಡುತ್ತಿದೆ. ಆದರೆ ಸ್ವಚ್ಛತೆ ಸಮರ್ಪಕವಾಗಿ ಆಗುತ್ತಿಲ್ಲ. ಪ್ರತಿಯೊಬ್ಬರ ಮನಸ್ಥಿತಿ ಬದಲಾದರೆ ಮಾತ್ರ ಸ್ವಚ್ಛ ಸಿರುಗುಪ್ಪ ಆಗಲು ಸಾಧ್ಯ ಎಂದು ನಗರಸಭೆ ಪೌರಾಯುಕ್ತ ಗಂಗಾಧರ ತಿಳಿಸಿದರು.ನಗರದ ಆಶ್ರಯ ಕಾಲೋನಿಯ ಪಕ್ಕದಲ್ಲಿನ ಉದ್ಯಾನವದಲ್ಲಿ ನಗರಸಭೆ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಲ್ಪವೃಕ್ಷ ಸೇವಾ ಸಂಘ, ಮದರಸ ಹಾಗೂ ಸ್ಥಳೀಯ ನಾಗರಿಕರ ಸಹಯೋಗದಲ್ಲಿ ಭಾನುವಾರ ನಡೆದ ಸಮುದಾಯ ಸಹಭಾಗಿತ್ವದಲ್ಲಿ ಸ್ವಚ್ಛತೆಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.ಪೌರ ಕಾರ್ಮಿಕರಿಂದ ಹಿಡಿದು ಎಲ್ಲ ಅಧಿಕಾರಿಗಳು ಹಾಗೂ ಸಾರ್ವಜನಿಕರು, ಮೊದಲು ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸ್ವಚ್ಛತೆಯ ಅರಿವು ಮೈಗೂಡಿಸಿಕೊಂಡರೆ ಪರಿಸರ ಸ್ವಚ್ಛವಾಗುತ್ತದೆ. ಇದರಿಂದ ನಗರ ಬದಲಾಗುತ್ತದೆ. ಸಮುದಾಯ ಸಹಭಾಗಿತ್ವದಲ್ಲಿ ಸ್ವಚ್ಛತೆ ಕಾರ್ಯ ನಡೆಸುವುದರಿಂದ ಸಮುದಾಯದ ಸಕ್ರಿಯ ಭಾಗವಹಿಸುವಿಕೆಯು ಸ್ವಚ್ಛತಾ ಆಂದೋಲನದ ಯಶಸ್ಸಿಗೆ ಅಡಿಪಾಯವಾಗಿದೆ. ಸಾರ್ವಜನಿಕರು ಮತ್ತು ಸ್ಥಳೀಯ ಸಂಘ- ಸಂಸ್ಥೆಗಳು ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ಸುಸ್ಥಿರ ಮತ್ತು ಆರೋಗ್ಯಕರ ಪರಿಸರ ನಿರ್ಮಾಣ ಸಾಧ್ಯ. ವಾರಾಂತ್ಯಗಳಲ್ಲಿ ಸಮುದಾಯದ ಸದಸ್ಯರೆಲ್ಲರೂ ಸೇರಿ ರಸ್ತೆಗಳು, ಉದ್ಯಾನವನಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಶ್ರಮದಾನ ಆಯೋಜಿಸುವುದರಿಂದ ವೈಯಕ್ತಿಕ ನೈರ್ಮಲ್ಯದ ಬಗ್ಗೆ ಜನರಲ್ಲಿ ಜಾಗೃತಿ ಅರಿವು ಮೂಡಿಸಿದಂತಾಗುತ್ತದೆ. ವಿದ್ಯಾರ್ಥಿಗಳನ್ನು ಒಳಗೊಂಡ ಸ್ವಚ್ಛತಾ ಜಾಥಾಗಳ ಮೂಲಕ ಸಾರ್ವಜನಿಕರಲ್ಲಿ ಸಂದೇಶ ಸಾರುವುದು. ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಕೈಜೋಡಿಸಿ ತ್ಯಾಜ್ಯ ವಿಲೇವಾರಿ ಘಟಕಗಳ ಸಮರ್ಪಕ ಬಳಕೆಯನ್ನು ಖಚಿತಪಡಿಸಿಕೊಳ್ಳುವುದು. ಬಯಲು ಶೌಚ ಮುಕ್ತ ನಗರವನ್ನಾಗಿಸಲು ಸಮುದಾಯ ಶೌಚಾಲಯಗಳ ನಿರ್ವಹಣೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವುದು ತಿಳಿಸಲಾಗುತ್ತದೆ.ಮನೆಯ ಕಸವನ್ನು ಹಸಿ ಮತ್ತು ಒಣ ಕಸವನ್ನಾಗಿ ವಿಂಗಡಿಸಿ. ಎಲ್ಲೆಂದರಲ್ಲಿ ಕಸ ಬಿಸಾಡದಂತೆ ಜನರಲ್ಲಿ ಜಾಗೃತಿ ಮೂಡಿಸಿ ನಮ್ಮ ನಗರವನ್ನು ಸ್ವಚ್ಛ, ಸುಂದರವನ್ನಾಗಿಸಲು, ನಮ್ಮ ಸುತ್ತ-ಮುತ್ತಲ ಪರಿಸರದಲ್ಲಿನ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ, ನೆರೆ ಹೊರೆಯವರಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ, ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ನಗರವನ್ನಾಗಿ ರೂಪಿಸಲು ಈ ಎಲ್ಲಾ ಕ್ರಮಗಳನ್ನು ಪಾಲಿಸುವಂತೆ ಇತರರನ್ನು ಪ್ರೇರೇಪಿಸಲು ವಾರಾಂತ್ಯ ಉತ್ತಮವಾಗಿದೆ. ನಗರವನ್ನು ಸ್ವಚ್ಛ-ಸುಂದರ ಹಾಗೂ ಆರೋಗ್ಯವಂತವಾಗಿಸಲು, ಜವಾಬ್ದಾರಿಯುತ ನಾಗರಿಕ ಕರ್ತವ್ಯವಾಗಿದೆ ಎಂದರು.

ಎಲ್ಲರ ಸಹಭಾಗಿತ್ವದಲ್ಲಿ ಪಾಳು ಬಿದ್ದ ಉದ್ಯಾನವನ ಸ್ವಚ್ಚ ಉದ್ಯಾನವನವಾಗಿದೆ ಎಂದು ನೆನದರು.ಸ್ತ್ರೀರೋಗ ತಜ್ಞೆ ಡಾ.ಗಂಗಮ್ಮ, ಸಿ.ಆರ್.ಪಿ.ಮಾರುತಿ, ಮುಖ್ಯಗುರು ಜಯಲಕ್ಷ್ಮಿ, ಶಿಕ್ಷಕ ಹುಲೇಶ, ಕಲ್ಪವೃಕ್ಷ ಸೇವಾ ಸಂಘದ ಸದಸ್ಯರಾದ ಎಂ.ಸಿ.ಮಾರೇಶ, ನಾಣಾಪುರ ನೀಜಾಮ್ ವುದ್ದಿನ್ ನಗರಸಭೆ ಪೌರಕಾರ್ಮಿಕರು, ಸ್ಥಳೀಯರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುನೀತರಾಜಕುಮಾರ ಪುತ್ಥಳಿ ಅನಾವರಣ
ಬೆಂಗಳೂರು ನಗರದಲ್ಲಿ ಮತ್ತೊಂದು ಮೇಲ್ಸೇತುವೆ ನಿರ್ಮಾಣ