ಹುಬ್ಬಳ್ಳಿ:
ಇಲ್ಲಿನ ಅಕ್ಷಯ ಪಾರ್ಕ್ ಸಂತೆ ಬಯಲಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿಂದೂ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಸಂಸ್ಕೃತಿ ಮತ್ತು ದೇಶದ ಗೌರವ ವಿಶ್ವಮಾನ್ಯವಾಗುವಂತೆ ಮಾಡುವ ಸಂಘಟಿತ ಶಕ್ತಿಯ ನಿರ್ಮಾಣದ ಕಾರ್ಯದಲ್ಲಿ ಯಶಸ್ಸನ್ನು ಕಾಣುತ್ತಿದೆ. ಸಂಘ ಶತಾಬ್ದಿಯ ಈ ಸಂದರ್ಭದಲ್ಲಿ ದೇಶದ ಮೂಲೆ ಮೂಲೆಯಲ್ಲಿರುವ ಪ್ರತಿ ಗ್ರಾಮ, ನಗರ, ವಸತಿಗಳಲ್ಲಿಯೂ ಹಿಂದೂ ಜಾಗೃತಿ ಮತ್ತು ಸಂಘಟನೆಗಾಗಿ ವಿವಿಧ ಕಾರ್ಯ ಆಗಬೇಕಾಗಿದೆ. ಇಡೀ ಸಮಾಜದಲ್ಲಿ ನಾವೆಲ್ಲ ಹಿಂದೂ, ನಾವೆಲ್ಲ ಒಂದು, ನಾವೆಲ್ಲ ಬಂಧು ಎಂಬ ಶ್ರೇಷ್ಠವಾದ ಮತ್ತು ಬಲಿಷ್ಠವಾದ ಮನೋಬಲ ಸಿದ್ಧಿಸಬೇಕಾಗಿದೆ. ನಮ್ಮ ಸಂಸ್ಕೃತಿ ಮತ್ತು ದೇಶದ ಗೌರವ ಎತ್ತಿ ಹಿಡಿಯುವ ಪ್ರಯತ್ನದಲ್ಲಿ ದಾಪುಗಾಲು ಇಡಬೇಕಾಗಿದೆ. ಸಂಘಟಿತ ಹಿಂದೂ ಸಮಾಜ ನಿರ್ಮಿಸಬೇಕಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ತೇಜಸಾನಂದ ಶ್ರೀ, ಸಮಾಜದಲ್ಲಿ ನಾವೆಲ್ಲ ಜಾತಿ, ಮತ, ಪಂಥಗಳ ಸಂಕುಚತೆಯಿಂದ ಮೇಲೆದ್ದು ಹಿಂದೂವಾಗಿ ನಮ್ಮ ಸಂಸ್ಕೃತಿ ಮತ್ತು ಪರಂಪರೆ ಉಳಿಸಿ ಬೆಳೆಸಬೇಕಾಗಿದೆ ಎಂದು ತಿಳಿಸಿದರು.ಈ ವೇಳೆ ಅಧ್ಯಕ್ಷ ಪ್ರಕಾಶ ಜೋಶಿ, ಉಪಾಧ್ಯಕ್ಷ ಖಾನಾರಾಮ ಚೌಧರಿ, ಪ್ರಭು ಅಣ್ಣಿಗೇರಿ, ಪ್ರಧಾನ ಕಾರ್ಯದರ್ಶಿ ರವಿಚಂದ್ರ ಕೊಣ್ಣೂರ, ಕಾರ್ಯದರ್ಶಿ ಅನಿರುದ್ಧ ಜೋಶಿ, ವಿಕಾಸ ಬಸವಾ, ಖಜಾಂಚಿ ಶಿವಾನಂದ ಗರಗ ಸೇರಿದಂತೆ ಹಲವರಿದ್ದರು. ಗಂಗಾಧರ ಯಡವಣ್ಣನವರ ಸ್ವಾಗತಿಸಿದರು, ದೀಪಕ ಕೋಸಂದರ ವಂದಿಸಿದರು.