ಸ್ಪರ್ಧಾತ್ಮಕ ಪರೀಕ್ಷೆ ಅಭ್ಯರ್ಥಿಗೆ ಬದ್ಧತೆ ಇರಬೇಕು

KannadaprabhaNewsNetwork |  
Published : Aug 10, 2025, 01:30 AM IST
೯ಕೆಎಲ್‌ಆರ್-೨ಕೋಲಾರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಶ್ರೀ ದ್ಯಾವರಪ್ಪ ರತ್ನಮ್ಮ ಎಜುಕೇಷನ್ ಸೊಸೈಟಿ ಆಶ್ರಯದಲ್ಲಿ ಆಯೋಜಿಸಿದ್ದ ಉನ್ನತ ಸ್ವರ್ಧಾತ್ಮಕ ಪರೀಕ್ಷೆಯ ತರಭೇತಿ ಕಾರ್ಯಾಗಾರದಲ್ಲಿ ಐಎಎಸ್ ಪರೀಕ್ಷೆಯಲ್ಲಿ ೫೨೨ ರ್‍ಯಾಂಕ್ ಪಡೆದ ಮಧು, ಎಸ್‌ಐ ಹುದ್ದೆಗೆ ಆಯ್ಕೆಯಾದ ಜಯಸೂರ್ಯ, ಕಿರಣ್ ಹಾಗೂ ನಗರದ ಸರ್ಕಾರಿ ಕಿರಿಯರ ಬಾಲಕಿಯರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಅಧಿಕಾರ ಸಿಕ್ಕ ಮೇಲೆ ಅಹಂಕಾರದಿಂದ ವರ್ತಿಸುವುದು ಬೇಡ, ದುಡ್ಡು ಸಿಗುತ್ತದೆ ಎಂಬ ಉದ್ದೇಶದಿಂದ ಯುಪಿಎಸ್ಸಿ ಪರೀಕ್ಷೆ ಬರೆಯಬೇಡಿ, ಹಣಕ್ಕಾಗಿ ಸಾವಿರಾರು ಅವಕಾಶಗಳು ಇವೆ. ಭ್ರಮೆಗಳನ್ನು ಬಿಟ್ಟು ಪರೀಕ್ಷೆಗಳನ್ನು ಬರೆಯಿರಿ, ಯುವಜನಾಂಗ ಬದುಕು ರೂಪಿಸಿಕೊಳ್ಳುವಾಗ ದಾರಿತಪ್ಪಬೇಡಿ

ಕನ್ನಡಪ್ರಭ ವಾರ್ತೆ ಕೋಲಾರಕೇವಲ ಹಣ ಮಾಡುವ ಮನಸ್ಸಿರುವವರು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬರಬೇಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಬದ್ಧತೆಯಿಂದ ಬನ್ನಿ. ಕನಸುಗಳನ್ನು ಅಡವಿಟ್ಟು ಗೆಲ್ಲುವ ಸಂಕಲ್ಪದಿಂದ ಅಧ್ಯಯನ ಮಾಡಿ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಕಿವಿಮಾತು ಹೇಳಿದರು. ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಶ್ರೀ ದ್ಯಾವರಪ್ಪ ರತ್ನಮ್ಮ ಎಜುಕೇಷನ್ ಸೊಸೈಟಿ ಹಾಗೂ ಜಿಲ್ಲಾಡಳಿತ, ಡಿ.ಎಂ.ಆರ್. ಸ್ವರ್ಧಾತ್ಮಕ ಪರೀಕ್ಷಾ ತರಬೇತಿ ಸಂಸ್ಥೆಯಿಂದ ಉನ್ನತ ಸ್ವರ್ಧಾತ್ಮಕ ಪರೀಕ್ಷೆಯ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.ಕ್ರಿಯಾಯೋಜನೆ ಸಿದ್ಧಪಡಿಸಿ

ಡಿಸಿಪಿ ದೇವರಾಜ್ ತಮ್ಮ ಊರು, ಯುವಕರಿಗಾಗಿ ಏನಾದರು ಮಾಡಬೇಕು ಎಂದು ಸಂಸ್ಥೆ ಕಟ್ಟಿ ಆದರ್ಶಪ್ರಾಯರಾಗಿದ್ದಾರೆ, ಐಎಎಸ್, ಐಪಿಎಸ್ ಅಧಿಕಾರಿ ಆದರೆ ಏನೋ ಮಾಡಬಹುದೆಂಬ ಭ್ರಮೆ ಬೇಡ. ಆಸಕ್ತಿ ಈಡೇರಿಸಿಕೊಳ್ಳಲು ಕ್ರಿಯಾಯೋಜನೆ ತಯಾರಿಸಿಕೊಳ್ಳಬೇಕು. ಆಸಕ್ತಿ ಜತೆಗೆ ಇಚ್ಛಾಶಕ್ತಿಯಿರಬೇಕು, ಕೌಶಲ್ಯ, ಗುಣಮಟ್ಟವು ತಯಾರಿಗೆ ಆಸಕ್ತಿ ತೋರುತ್ತದೆ. ಇಂತಹ ಪರೀಕ್ಷೆಗಳನ್ನು ಬರೆಯುವಾಗ ಹಿಂಜರಿಕೆಬೇಕಿಲ್ಲ ಎಂದು ಹೇಳಿದರು.

ಅಧಿಕಾರ ಸಿಕ್ಕ ಮೇಲೆ ಅಹಂಕಾರದಿಂದ ವರ್ತಿಸುವುದು ಬೇಡ, ದುಡ್ಡು ಸಿಗುತ್ತದೆ ಎಂಬ ಉದ್ದೇಶದಿಂದ ಯುಪಿಎಸ್ಸಿ ಪರೀಕ್ಷೆ ಬರೆಯಬೇಡಿ, ಹಣಕ್ಕಾಗಿ ಸಾವಿರಾರು ಅವಕಾಶಗಳು ಇವೆ. ಭ್ರಮೆಗಳನ್ನು ಬಿಟ್ಟು ಪರೀಕ್ಷೆಗಳನ್ನು ಬರೆಯಿರಿ, ಯುವಜನಾಂಗ ಬದುಕು ರೂಪಿಸಿಕೊಳ್ಳುವಾಗ ಎಡವುತ್ತಿದ್ದಾರೆ ಎಂದು ವಿಷಾದಿಸಿದರು.ಧನಾತ್ಮಕ ಚಿಂತನೆ ಅಗತ್ಯ:ಡಿಸಿಪಿಬೆಂಗಳೂರಿನ ಪೂರ್ವ ವಲಯ ಡಿಸಿಪಿ ಡಿ.ದೇವರಾಜ್ ಮಾತನಾಡಿ, ಟೀಕೆ ಟಿಪ್ಪಣಿಗಳಿಗೆ ಕಿವಿಗೊಡದೇ ಧನಾತ್ಮಕ ಚಿಂತನೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ. ಬಡತನದಿಂದಾಗಿ ಉನ್ನತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಡೆಯಲು ಅನೇಕ ಪ್ರತಿಭೆಗಳಗೆ ಅತಿಕಡಿಮೆ ವೆಚ್ಚದಲ್ಲಿ ಡಿಎಂಆರ್ ಎಜುಕೇಷನ್ ಫೌಂಡೇಷನ್ ಕೋಲಾರದಲ್ಲಿ ತರಬೇತಿ ನೀಡುತ್ತಿರುವುದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಮ್ಮ ಸಂಸ್ಥೆಯಲ್ಲಿ ತರಭೇತಿ ಪಡೆದವರು ಕೆ.ಎ.ಎಸ್. ಐ.ಆರ್.ಎಸ್. ಪರೀಕ್ಷೆಗಳನ್ನು ಬರೆದು ಡಿ.ಸಿ. ಎ.ಸಿ. ತಹಸೀಲ್ದಾರ್ ಸೇರಿದಂತೆ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಪೊಲೀಸ್ ಇಲಾಖೆಯ ಎಸ್.ಐ.ಗೆ ಆಯ್ಕೆಯಾಗಿದ್ದಾರೆ. ನಮ್ಮ ಸಂಸ್ಥೆಯಲ್ಲಿ ಉತ್ತಮ ಗುಣಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತಿದೆ ಎಂದರು.ಅನುಭವಮಂಟಪ:

ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್.ಬಿ ಮಾತನಾಡಿ, ಡಿಎಂಆರ್ ಸಂಸ್ಥೆ ಜಿಲ್ಲೆಯ ಯುವಕರ ಪಾಲಿಗೆ ಅನುಭವಮಂಟಪದಂತಾಗಲಿ, ಸಮಾಜವನ್ನು ಹೊಸ ದಿಕ್ಕಿಗೆ ಕರೆದೊಯ್ಯುವ ಡಿಸಿಪಿ ದೇವರಾಜ್‌ರ ಪ್ರಯತ್ನಕ್ಕೆ ಕೈಜೋಡಿಸಿ, ಸ್ಪರ್ಧಾತ್ಮಕ ಪರೀಕ್ಷೆ ಗೆದ್ದು ಬನ್ನಿ. ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡು ಗುರಿ ಸಾಧನೆಗೆ ಮುಂದಾಗಬೇಕು. ಪ್ರತಿ ದಿನ ೮ ರಿಂದ ೧೦ ತಾಸು ಓದಿದಬೇಕು ಎಂದು ಹೇಳಿದರು.

ಸಂಪಾದಕೀಯ ಓದಿ

ಪರೀಕ್ಷೆಯ ಹಿಂದಿನ ರಾತ್ರಿ ಓದಿದ ಮಾತ್ರಕ್ಕೆ ಸೂಪರ್ ಸ್ಟಾರ್ ಆಗಲು ಸಾಧ್ಯವಿಲ್ಲ. ದಿನ ಪತ್ರಿಕೆ ಯಲ್ಲಿ ಸಿಗುವ ಜ್ಞಾನ ಯಾವುದೇ ಪುಸ್ತಕದಲ್ಲಿ ಸಿಗಲು ಸಾಧ್ಯವಿಲ್ಲ. ವಿದೇಶ, ದೇಶ ವಾಣಿಜ್ಯ, ಕ್ರೀಡೆ,ಹೀಗೆ ಹಲವು ವಿಚಾರಗಳ ಜ್ಞಾನ ಸಿಗುತ್ತದೆ. ಸಂಪಾದಕೀಯ ಓದುವುದರಿಂದ ಸಿಗುವ ಜ್ಞಾನ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ರಾವ್‌, ಹಿರಿಯ ವಕೀಲ ಕೆ.ವಿ.ಶಂಕರಪ್ಪ, ರಾಜ್ಯ ಪತ್ರಕರ್ತರ ಕಾರ್ಯಕಾರಿ ಸಮಿತಿ ಸದಸ್ಯ ವಿ.ಮುನಿರಾಜು, ಸಹ್ಯಾದ್ರಿ ಕಾಲೇಜು ಅಧ್ಯಕ್ಷ ಉದಯ ಕುಮಾರ್, ರವಿ ಕಾಲೇಜಿನ ಸಂಸ್ಥಾಪಕ ಮೂರಂಡಹಳ್ಳಿ ಡಾ.ಇ. ಗೋಪಾಲಪ್ಪ, ಡಾ.ಅರವಿಂದ್, ಡಾ. ಶಂಕರ್, ಡಾ.ಬೀರೇಗೌಡ, ಆರ್.ವಿ. ಕಾಲೇಜಿನ ವೇದಾ, ಕೃಷಿ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪರಮೇಶ್ವರ್, ಡಾ.ಅರಿವು ಶಿವಪ್ಪ, ಪಂಡಿತ್ ಮುನಿವೆಂಕಟಪ್ಪ ಇದ್ದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್