ಗೌರಿಬಿದನೂರಿನಲ್ಲಿ 4ರಿಂದ ಉದ್ಯಮಿ ಒಕ್ಕಲಿಗ ಸಮುದಾಯದ ಸಮಾವೇಶ

KannadaprabhaNewsNetwork |  
Published : Jan 02, 2025, 12:31 AM IST
ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಸಮಾವೇಶ ಸಭೆ  | Kannada Prabha

ಸಾರಾಂಶ

ಅರಮನೆ ಮೈದಾನದಲ್ಲಿ ನಡೆಯುವ ಸಮಾವೇಶಕ್ಕೆ ಹೆಚ್ಚಿನ ಉತ್ಸಾಹಿ ಯುವಕರು ಪಾಲ್ಗೊಂಡು, ತಮ್ಮ ಉದ್ಯಮವನ್ನು ವಿಸ್ತರಣೆ ಮಾಡಿಕೊಳ್ಳಬಹುದು. ಬೇರೆ ಸಮುದಾಯಗಳು ಒಗ್ಗಟ್ಟಾಗಿ ತಮ್ಮ ಉದ್ಯಮಗಳನ್ನು ದೇಶದಾದ್ಯಂತ ವಿಸ್ತರಣೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಒಕ್ಕಲಿಗ ಜನಾಂಗದವರು ಕೇವಲ ಉದ್ಯೋಗಿಯಲ್ಲದೇ ಸಮುದಾಯದವರ ಜೊತೆಗೂಡಿ ಉದ್ಯಮಶೀಲರಾಗಿ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂಥ ಪ್ರಮುಖ ಸಭೆ ಇದಾಗಿದೆ ಎಂದು ಸಂಘದ ಅಧ್ಯಕ್ಷ ರಾಮಚಂದ್ರರೆಡ್ಡಿ ತಿಳಿಸಿದರು.

ನಗರದ ನಿರೀಕ್ಷಣಾ ಮಂದಿರದಲ್ಲಿ ಒಕ್ಕಲಿಗ ಉದ್ಯಮಿ ಸಮಾವೇಶದ ಹಿನ್ನೆಲೆ ಸಂಘದ ವತಿಯಿಂದ ಪೂರ್ವಭಾವಿ ಸಭೆಯನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.

ಸಂಘದ ಅಧ್ಯಕ್ಷ ರಾಮಚಂದ್ರ ರೆಡ್ಡಿ ಮಾತನಾಡಿ, ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಜ.3, 4, 5 ರಂದು ತಾಲೂಕು ಮತ್ತು ಜಿಲ್ಲಾಮಟ್ಟದ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ, ಈ ಸಮಾವೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಉದ್ಯಮಿಗಳು ಭಾಗವಹಿಸಲಿದ್ದಾರೆ, ಸಮುದಾಯದ ರೈತರು ಮತ್ತು ಯುವಕರು, ಈ ಉದ್ಯಮಿ ಸಮಾವೇಶವನ್ನು ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಮುಂಚೂಣಿಗೆ ಬರಬೇಕು ಎಂದು ತಿಳಿಸಿದರು.

ಉದ್ಯಮಿ ಶ್ರವಣ ರೆಡ್ಡಿ ಮಾತನಾಡಿ, ಅರಮನೆ ಮೈದಾನದಲ್ಲಿ ನಡೆಯುವ ಸಮಾವೇಶಕ್ಕೆ ಹೆಚ್ಚಿನ ಉತ್ಸಾಹಿ ಯುವಕರು ಪಾಲ್ಗೊಂಡು, ತಮ್ಮ ಉದ್ಯಮವನ್ನು ವಿಸ್ತರಣೆ ಮಾಡಿಕೊಳ್ಳಬಹುದು. ಬೇರೆ ಸಮುದಾಯಗಳು ಒಗ್ಗಟ್ಟಾಗಿ ತಮ್ಮ ಉದ್ಯಮಗಳನ್ನು ದೇಶದಾದ್ಯಂತ ವಿಸ್ತರಣೆ ಮಾಡಿದ್ದಾರೆ, ರೈತರು ಮತ್ತು ಉದ್ಯಮಿಗಳು ಪರಸ್ಪರ ಸಹಾಯ ಮಾಡಿಕೊಳ್ಳುವುದರ ಮೂಲಕ ಉದ್ಯಮವನ್ನು ವಿಸ್ತರಣೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ಕಾರ್ಯದರ್ಶಿ ನರಸಿಂಹ ಗೌಡ ಮಾತನಾಡಿ, ಒಕ್ಕಲಿಗ ಯುವಕರನ್ನು ಉದ್ಯಮಕ್ಕೆ ತರಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಯುವಕರು ಸಮಾಜದಲ್ಲಿ ಮುಖ್ಯ ವಾಹಿನಿಗೆ ಬರಲು ಇಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕು, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿದ್ದು 1800 ಜನ ಉದ್ಯಮಿಗಳು ನೋಂದಣಿ ಮಾಡಿಕೊಂಡಿದ್ದು, ಇದು ಯುವ ಉದ್ಯಮಿಗಳಿಗೆ ದಾರಿ ದೀಪವಾಗಲಿದೆ ಎಂದು ತಿಳಿಸಿದರು.

ಉದ್ಯಮಿ ಒಕ್ಕಲಿಗ ಸಂಘದ ಅಧ್ಯಕ್ಷ ,ರಾಮಚಂದ್ರ ರೆಡ್ಡಿ ಉಪಾಧ್ಯಕ್ಷರು, ಶ್ರವಣ್ ರೆಡ್ಡಿ ಕಾರ್ಯದರ್ಶಿ, ನರಸಿಂಹ ಗೌಡ, ಆದಿ ಮೂರ್ತಿರೆಡ್ಡಿ, ಪ್ರಭಾಕರ್ ರೆಡ್ಡಿ, ಅಶ್ವತ್ಥ್ ರೆಡ್ಡಿ, ಸೂರ್ಯ ಪ್ರಕಾಶ್, ಅನಿಲ್ ಕುಮಾರ್, ಜಾಲಿ ರಾಮಕೃಷ್ಣ, ನಾಗಭೂಷಣ ರೆಡ್ಡಿ, ಬಾಲಚಂದ್ರರೆಡ್ಡಿ, ವಿನಯ್, ಪವನ್ ರೆಡ್ಡಿ,ಸುರೇಶ್ ರೆಡ್ಡಿ, ಶ್ರೀನಿವಾಸರೆಡ್ಡಿ,ಲಕ್ಷ್ಮೀನಾರಾಯಣ ರೆಡ್ಡಿ, ರವಿಕುಮಾರ್, ಲಕ್ಷ್ಮಣ್ ರೆಡ್ಡಿ ಮುಂತಾದವರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!