ಹಿಂದೂ ಸಮಾಜ ವಿಭಜಿಸುವ ಷಡ್ಯಂತ್ರ ನಡೆಯುತ್ತಿದೆ: ಶ್ರೀಕಾಂತ್ ಶೆಟ್ಟಿ

KannadaprabhaNewsNetwork |  
Published : Oct 02, 2026, 01:15 AM IST
ಫೋಟೋ- ಹಿಂದು 1 ಮತ್ತು 2 | Kannada Prabha

ಸಾರಾಂಶ

ಹಿಂದೂ ಸಮಾಜ ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಕಾರ್ಕಳ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿಹಿಂದೂ ಸಮಾಜ ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಕಾರ್ಕಳ ಕಳವಳ ವ್ಯಕ್ತಪಡಿಸಿದರು.ನಗರದ ಕೋಟೆಯ ಮುಂಭಾಗದಲ್ಲಿ ಹಿಂದೂ ಮಹಾಗಣಪತಿ ಸಮಿತಿಯಿಂದ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿದ ಅವರು, ಸಮಾಜದ ಎಲ್ಲ ವರ್ಗಗಳು ಒಂದಾಗಿ ಕೆಲಸ ಮಾಡಿ ಹಿಂದು ಸಮಾಜ ವಿಭಜನೆಯ ಸಂಚು ಹತ್ತಿಕ್ಕಬೇಕಿದೆ ಎಂದು ಕರೆ ನೀಡಿದರು.ಆರ್‌ಎಸ್‌ಎಸ್‌, ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಆರ್ಯ ಸಮಾಜ ಸಹಿತ ಅನೇಕ ಮಹನೀಯರ ತ್ಯಾಗ, ಪ್ರಯತ್ನಗಳಿಂದ ಹಿಂದೂ ಸಮಾಜ ಬಲಿಷ್ಠವಾಗಿ ಬೆಳೆದು ನಿಂತಿದೆ. ಭಾರತದ ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆ ಬಲಿಷ್ಠವಾಗಿರಬೇಕು ಎಂಬುದು ಡಾ. ಅಂಬೇಡ್ಕರ್ ಅವರ ಆಶಯವಾಗಿತ್ತು. ಸಮಾಜದ ಏಕತೆ, ಅಖಂಡತೆ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಪ್ರೇರಣೆಯಾಗಿ ಸ್ವೀಕರಿಸಬೇಕಾಗಿದೆ ಎಂದರು.ಹೈದರಾಬಾದ್ ಸಂಸ್ಥಾನದ ಅವಧಿಯಲ್ಲಿ ಹಿಂದೂಗಳ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮೇಲೆ ಹಲವು ನಿರ್ಬಂಧಗಳಿದ್ದವು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದಿಟ್ಟ ನಾಯಕತ್ವ ಮತ್ತು ‘ಆಪರೇಷನ್ ಪೋಲೋ’ ಮೂಲಕ ಹೈದರಾಬಾದ್ ಸಂಸ್ಥಾನವು ಭಾರತದಲ್ಲಿ ವಿಲೀನಗೊಂಡ ಐತಿಹಾಸಿಕ ಘಟನೆ ಸ್ಮರಿಸಿದರು. ಇತಿಹಾಸದಿಂದ ಪಾಠ ಕಲಿಯುವ ಅಗತ್ಯವಿದೆ ಎಂದರು.ಸಮಿತಿಯ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಗಂಗಾ, ಅಧ್ಯಕ್ಷ ಶ್ರೀಮಂತ ರಾಜು ನವಲದಿ, ಮಾಜಿ ಸಂಸದ ಡಾ ಉಮೇಶ್ ಜಾಧವ್, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಅಂಬಾರಾಯ್ ಅಷ್ಟಗಿ, ಬಸವರಾಜ ಬೆಣ್ಣೂರ, ಉಮೇಶ್ ಪಾಟೀಲ್, ಅಶ್ವಿನ್ ಕುಮಾರ್, ಪ್ರಶಾಂತ ಗುಡ್ಡಾ, ಶಿವರಾಜ್ ಸಂಗೋಳಗಿ, ಶ್ರೀಶೈಲ ಮೂಲಗೆ, ಸುಮಂಗಲಾ ಚಕ್ರವರ್ತಿ, ಸಿದ್ದು ಸಾಕರೆ ಇದ್ದರು.

---ಕೋಟ್ಸ್-----

ಹೈದರಾಬಾದ್ ವಿಲೀನ ಹೋರಾಟವು ರಾಷ್ಟ್ರದ ಏಕತೆ ಮತ್ತು ಅಖಂಡತೆಗೆ ನಡೆದ ಐತಿಹಾಸಿಕ ಹೋರಾಟವಾಗಿದೆ. ಇತಿಹಾಸದ ಘಟನೆಗಳಿಂದ ಪಾಠ ಕಲಿತು ಸಮಾಜದ ಏಕತೆ, ಸಾಮಾಜಿಕ ಸುಧಾರಣೆ ಹಾಗೂ ರಾಷ್ಟ್ರಭಕ್ತಿಯನ್ನು ಬಲಪಡಿಸುವ ಕೆಲಸವನ್ನು ನಾವು ಮಾಡಬೇಕು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು ಸಮಾಜವನ್ನು ಬಲಿಷ್ಠಗೊಳಿಸುವ ದಾರಿದೀಪವಾಗಿವೆ.-ಶ್ರೀಕಾಂತ್ ಶೆಟ್ಟಿ ಕಾರ್ಕಳ, ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ

-----ಫೋಟೊ------ಫೋಟೋ- ಹಿಂದು 1 ಮತ್ತು 2

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಸೀಕೆರೆಯ ಶಾನುಭೋಗರ ಬೀದಿಯಲ್ಲಿ ಸಂಭ್ರಮದ ಗಣೇಶೋತ್ಸವ
ರೇಷನ್‌ ಅಕ್ಕಿ ಅಕ್ರಮ ಸಾಗಾಟ ಜಾಲ ಪತ್ತೆ