- ಪರಿಷತ್ ಉಪ ಚುನಾವಣೆಯಲ್ಲಿ ಶಾಸಕರ ಅಡ್ಡ ಮತದಾನ ಪ್ರಕರಣ - - -
ವಿಧಾನ ಪರಿಷತ್ ಚುನಾವಣೆಯಲ್ಲಿ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಂತಹ ಷಡ್ಯಂತ್ರಗಳು ವ್ಯವಸ್ಥಿತವಾಗಿ ನಡೆದವು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೇಸರ ತೋಡಿಕೊಂಡರು.
ನಗರದ ಶ್ರೀನಿಧಿ ಕನ್ವೆನ್ಷನ್ ಹಾಲ್‌ನಲ್ಲಿ ಮಂಗಳವಾರ ಸಂಜೆ ಬಿಜೆಪಿ ಹಮ್ಮಿಕೊಂಡಿದ್ದ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಕೆಲ ಶಾಸಕರಿಂದ ಅಡ್ಡ ಮತದಾನವಾಗಿದ್ದಕ್ಕೆ ಮಾಧ್ಯಮಗಳಲ್ಲಿ, ಕಾರ್ಯಕರ್ತರಲ್ಲೂ ಇದೇ ವಿಚಾರ ಚರ್ಚೆಯಾಯಿತು ಎಂದರು.ಒಂದು ರೀತಿ ನನ್ನನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಷಡ್ಯಂತ್ರ ನಡೆದಿತ್ತು. ಯಡಿಯೂರಪ್ಪ, ಸಿದ್ದರಾಮಯ್ಯ ಅಡ್ಜಸ್ಟ್‌ಮೆಂಟ್ ರಾಜಕಾರಣ ಅಂತೆಲ್ಲಾ ಹರಡಿದರು. ಇದನ್ಯಾರೂ ಹೊರಗಿನವರು ಮಾತನಾಡಲಿಲ್ಲ. ನಮ್ಮವರೇ ಮಾತನಾಡಿದ್ದರು. ನಗರಕ್ಕೆ ಸೀಮಿತವಾಗಿದ್ದ ಬಿಜೆಪಿಯನ್ನು ಯಡಿಯೂರಪ್ಪ, ಅನಂತಕುಮಾರ ರಾಜ್ಯಾದ್ಯಂತ ಸುತ್ತಾಡಿ, ಅಧಿಕಾರಕ್ಕೆ ತಂದರು. ಅಂತಾ ಯಡಿಯೂರಪ್ಪ ಬಗ್ಗೆಯೇ ಅನುಮಾನ ಹುಟ್ಟಿಸುವ ಕೆಲಸವನ್ನು ನಮ್ಮವರೆ ಮಾಡುತ್ತಿದ್ದಾರೆ ಎಂದು ಅವರು ವಿಷಾದಿಸಿದರು.
ನಮ್ಮ ಆಂತರಿಕ ಕಚ್ಚಾಟಕ್ಕೆ ಪಕ್ಷವನ್ನೇ ಬಲಿ ಕೊಡುವ ಕೆಲಸ ವೇದಿಕೆಗಳ ಮೇಲೆ ಕುಳಿತವರು ಮಾಡುತ್ತಿದ್ದೇವೆ. ವ್ಯಕ್ತಿಗಿಂತಲೂ ಪಕ್ಷ ಮುಖ್ಯ. ಪಕ್ಷಕ್ಕಿಂತಲೂ ದೇಶ ಮುಖ್ಯವೆಂಬುದು ನಮ್ಮ ಕಾರ್ಯಕರ್ತರಿಗಷ್ಟೇ ಸೀಮಿತವೆಂಬ ಭಾವನೆ ಮುಖಂಡರಲ್ಲಿ ಬಂದಂತಿದೆ. ಈ ಭಾವನೆಯನ್ನು ತೊಡೆದು ಹಾಕುವವರೆಗೂ ನಾವು ಉದ್ಧಾರ ಆಗುವುದಕ್ಕೆ ಸಾಧ್ಯವೇ ಇಲ್ಲ ಎಂದು ಅವರು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
-7ಕೆಡಿವಿಜಿ7: ದಾವಣಗೆರೆಯಲ್ಲಿ ಮಂಗಳವಾರ ಸಂಜೆ ಬಿಜೆಪಿ ಹಮ್ಮಿಕೊಂಡಿದ್ದ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಬಿ.ವೈ.ವಿಜಯೇಂದ್ರ, ಜಿ.ಎಂ.ಸಿದ್ದೇಶ್ವರ, ಎಂ.ಪಿ.ರೇಣುಕಾಚಾರ್ಯ ಇತರರು ಜೈಕಾರ ಹಾಕಿ ಕಾರ್ಯಕರ್ತರನ್ನು ಹುರಿದುಂಬಿಸಿದರು.