- ಹತ್ತೇ ಸಚಿವರೊಂದಿಗೆ ಮುಖ್ಯಮಂತ್ರಿ ಆಡಳಿತ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಲೇವಡಿ - - -
ಕೇವಲ ಹತ್ತೇ ಹತ್ತು ಸಚಿವರೊಂದಿಗೆ ರಾಜ್ಯದ ಮುಖ್ಯಮಂತ್ರಿಗಳು ಆಡಳಿತ ನಡೆಸಿರುವುದನ್ನು ನೋಡಿದರೆ ಸ್ವತಃ ತಮ್ಮ ಸ್ಥಾನ ಕಳೆದುಕೊಳ್ಳುವ ಭೀತಿ ಕಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಿಎಂ ಡಿ.ಕೆ.ಶಿವಕುಮಾರ ಸಂಪುಟದ ಬಗ್ಗೆ ವ್ಯಂಗ್ಯವಾಡಿದರು.
ನಗರದ ಶ್ರೀನಿಧಿ ಕನ್ವೆನ್ಷನ್ ಹಾಲ್‌ನಲ್ಲಿ ಮಂಗಳವಾರ ಸಂಜೆ ಬಿಜೆಪಿ ಹಮ್ಮಿಕೊಂಡಿದ್ದ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಸಂಪುಟ ವಿಸ್ತರಣೆಗೆ ಕೈಹಾಕಿದರೆ ಮುಖ್ಯಮಂತ್ರಿ ಕುರ್ಚಿ ಭದ್ರವಾಗಿ ಇರುವುದಿಲ್ಲವೆಂಬುದು ಸ್ವತಃ ಸಿಎಂಗೂ ಗೊತ್ತಿದೆ ಎಂದರು.ಮೂರನೇ ಮುಖ್ಯಮಂತ್ರಿ:
ನಮ್ಮದೇ ಸ್ವಯಂಕೃತ ಅಪರಾಧ:
ಕೇಂದ್ರದ ಮಾಜಿ ಸಚಿವ ಡಾ. ಜಿ.ಎಂ. ಸಿದ್ದೇಶ್ವರ ಮಾತನಾಡಿ, ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ.ಎಂ.ಸುರೇಶ್ ಅವರನ್ನು ಗೆಲ್ಲಿಸಬೇಕು. ಈ ಹಿಂದೆ ಡಾ. ಎ.ಎಚ್. ಶಿವಯೋಗಿ ಸ್ವಾಮಿ ಸ್ಪರ್ಧಿಸಿದ್ದ ಚುನಾವಣೆಯಲ್ಲಿ 7-8 ಸಾವಿರ ಮತ ತಿರಸ್ಕೃತವಾಗಿದ್ದವು. ವಿದ್ಯಾವಂತರ ಮತವೇ ಹೀಗಾದರೆ ಹೇಗೆ? ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಮತದಾರರಿಗೆ ಬ್ಯಾಲೆಟ್ ಪತ್ರದ ನಮೂನೆ ನೀಡಿ, ನಿಯಮಾನುಸಾರ ಮತ ಚಲಾಯಿಸುವುದನ್ನು ತಿಳಿಸಿ ಕೊಡುವ ಕೆಲಸವಾಗಬೇಕು ಎಂದರು.
ಸಾಮಾನ್ಯ ಚುನಾವಣೆಗಳಲ್ಲಿ 300 ಬ್ಯಾಲೆಟ್ ಪೋಸ್ಟ್‌ನಲ್ಲೇ ಮತ ಹಾಕಿದ್ದರಲ್ಲೇ ನೂರಾರು ತಿರಸ್ಕೃತವಾಗುತ್ತವೆ. ಮತ ತಿರಸ್ಕೃತವಾದರೆ ಪದವೀಧರರ ಕ್ಷೇತ್ರದ ಮತದಾರರು ಪಡೆದ ಪದವಿಗೂ ಶೋಭೆ ತರುವುದಿಲ್ಲ. ಪದವೀಧರರು ಮತ್ತೊಬ್ಬರಿಗೆ ತಿಳಿ ಹೇಳಿ, ನಮ್ಮ ಅಭ್ಯರ್ಥಿ ಕೆ.ಎಂ.ಸುರೇಶ್‌ಗೆ ಮತ ಕೇಳಬೇಕು. ನಗರ, ಗ್ರಾಮೀಣ ಪ್ರದೇಶದಲ್ಲಿ ಕೆ.ಎಂ.ಸುರೇಶ ಮೊದಲ ಸುತ್ತಿನಲ್ಲೇ ಗೆಲ್ಲುವುದನ್ನು ದಾವಣಗೆರೆಯಿಂದಲೇ ಮಾಡಿ, ತೋರಿಸಬೇಕು. ಕೆ.ಎಂ.ಸುರೇಶಗೆ ಪ್ರಥಮ ಪ್ರಾಶಸ್ತ್ಯದ ಮತ ಕೊಡಿಸಿ, ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.
2 ಲಕ್ಷದಷ್ಟು ಮತದಾರರ ನೋಂದಣಿ:
ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಆಗ್ನೇಯ ಪದವೀಧರರ ಕ್ಷೇತ್ರದ ಎನ್‌ಡಿಎಮೈತ್ರಿಕೂಟದ ಅಭ್ಯರ್ಥಿ ಕೆ.ಎಂ.ಸುರೇಶ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಕೇಶವಪ್ರಸಾದ, ಮೇಘರಾಜ, ಎಂ.ಬಸವರಾಜ ನಾಯ್ಕ, ಯಶವಂತರಾವ್ ಜಾಧವ್. ಅಣಬೇರು ಜೀವನಮೂರ್ತಿ, ಮಾಡಾಳ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ, ಅಣ್ಣೇಶ್, ರಾಜನಹಳ್ಳಿ ಶಿವಕುಮಾರ, ಆರ್.ಎಲ್. ಶಿವಪ್ರಕಾಶ, ದೊಗ್ಗಳ್ಳಿ ಬಾತಿ ವೀರೇಶ, ಕಡ್ಲೇಬಾಳು ಧನಂಜಯ, ಅನಿಲ ನಾಯ್ಕ, ಮಾಯಕೊಂಡ ಜಿ.ಎಸ್. ಶ್ಯಾಮ್, ಚಂದ್ರಶೇಖರ ಪೂಜಾರ, ಪ್ರವೀಣ ಜಾಧವ್ ಇತರರು ಇದ್ದರು.
(ಬಾಕ್ಸ್)
* ಎಸ್ಐಆರ್ ಅಕ್ರಮ ಸಹಿಸಲ್ಲ: ಸಿದ್ದೇಶ್ವರ ಎಸ್ಐಆರ್ ಪ್ರಕ್ರಿಯೆ ಬಗ್ಗೆ ಪತ್ರಿಕೆ, ಟಿವಿಗಳಲ್ಲಿ ನೋಡುತ್ತಿದ್ದೇವೆ. ಶಾದಿ ಮಹಲ್, ಕಲ್ಯಾಣ ಮಂಟಪ ಎಲ್ಲೋ ಕುಳಿತು, ಒಂದೇ ಸಮುದಾಯದವನ್ನು ಎಸ್ಐಆರ್ ಮಾಡುತ್ತಿರುವುದನ್ನು ನೋಡಿದ್ದೇವೆ. ದಾವಣಗೆರೆ ಉತ್ತರ, ದಕ್ಷಿಣಗಳೂ ನಮಗೆ ಅತಿ ಮುಖ್ಯ. ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಎಸ್ಐಆರ್ ಬಗ್ಗೆ ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಎಲ್ಲಾದರೂ ಸಾಮೂಹಿಕವಾಗಿ ಒಂದೇ ಕಡೆ ಎಸ್ಐಆರ್ ಪ್ರಕ್ರಿಯೆ ನಡೆಸಿದ್ದರೆ ತಕ್ಷಣವೇ ನಮ್ಮ ಗಮನಕ್ಕೆ, ಜಿಲ್ಲಾಧ್ಯಕ್ಷರು, ನಮ್ಮೆಲ್ಲಾ ಮುಖಂಡರ ಗಮನಕ್ಕೆ ತಂದರೆ ಸೂಕ್ತ ಕ್ರಮಕ್ಕೆ ಒತ್ತಡ ಹೇರುತ್ತೇವೆ.- ಡಾ. ಜಿ.ಎಂ.ಸಿದ್ದೇಶ್ವರ, ಬಿಜೆಪಿ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ.
- - --7ಕೆಡಿವಿಜಿ4, 5: ದಾವಣಗೆರೆಯಲ್ಲಿ ಮಂಗಳವಾರ ಬಿಜೆಪಿ ಹಮ್ಮಿಕೊಂಡಿದ್ದ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯ ಪೂರ್ವಭಾವಿ ಸಭೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಎಸ್.ಎ.ರವೀಂದ್ರನಾಥ, ಡಾ.ಎ.ಎಚ್.ಶಿವಯೋಗಿಸ್ವಾಮಿ ಉದ್ಘಾಟಿಸಿದರು. -7ಕೆಡಿವಿಜಿ6: ದಾವಣಗೆರೆಯಲ್ಲಿ ಮಂಗಳವಾರ ಬಿಜೆಪಿ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಭಾರತ ಮಾತೆ, ಬಿಜೆಪಿ ಸಂಸ್ಥಾಪಕರ ಭಾವಚಿತ್ರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಎಸ್.ಎ.ರವೀಂದ್ರನಾಥ, ಡಾ.ಎ.ಎಚ್.ಶಿವಯೋಗಿಸ್ವಾಮಿ, ಕೆ.ಎಂ.ಸುರೇಶ ಪುಷ್ಪಾರ್ಚನೆ ಮಾಡಿದರು.