ಪಾಂಡವಪುರ:
ಮಂಗಳವಾರ ಬೆಳಗ್ಗೆ ಗ್ರಾಮದ ಮನೋಜ್ ಎಂಬ ರೈತನ ಜಮೀನಿ ಬಳಿ ಇರುವ ಬಾವಿಯಲ್ಲಿ ಮೊಳಸೆ ಕಾಣಿಸಿಕೊಂಡಿದೆ. ಇದರಿಂದ ಭಯಭೀತರಾದ ಮನೋಜ್ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದ ವಲಯ ಅರಣ್ಯಾಧಿಕಾರಿ ಅನಿತಾ ಅವರ ನೇತೃತ್ವದಲ್ಲಿ ಕಾರ್ಯಾಚರಣೆಗೆ ಇಳಿದ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಮಂಗಳವಾರ ರಾತ್ರಿ ಇಡೀ ಬಾವಿಯಲ್ಲಿದ್ದ ನೀರನ್ನು ಮೋಟರ್ ಮೂಲಕ ಹೊರಹಾಕಿ ಬಳಿಕ ಮೊಸಳೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ವಿ.ಆರ್.ಧಮೇಂದ್ರ, ಎಂ.ಸಿ.ಯೋಗೇಶ್, ಸಿಬ್ಬಂದಿ ಯೋಗೇಶ್, ಕುಮಾರ್‌ಲಾಭಾಣಿ, ಬಸವರಾಜು, ಸರೋಜ, ಅಂತನಹಳ್ಳಿ ಆರ್.ಕುಮಾರ್, ಸ್ವಾಮಿ, ಅಂತನಹಳ್ಳಿ ಅಭಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಮಂಡ್ಯ: ಶ್ರೀವೀರಮಡಿವಾಳ ಮಾಚಿದೇವ ಸೌಹಾರ್ದ ಸಹಕಾರ ಸಂಘವು ಸಮಾಜದ ಒಳಿತಿಗೆ ಕೆಲಸ ಮಾಡುತ್ತಿದೆ ಎಂದು ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ನ ಅಧ್ಯಕ್ಷ ಎಂ.ವಿನಯ್‌ಕುಮಾರ್ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಗುರುರಾಜ್ ಮಾತನಾಡಿ, ಕಳೆದ ಆರು ವರ್ಷಗಳಿಂದ ಸಂಘ ಉತ್ತಮವಾಗಿ ನಡೆಯುತ್ತಿದೆ. ಇದೀಗ 587 ಸದಸ್ಯರನ್ನು ಹೊಂದಿದೆ. ಆರ್ಥಿಕವಾಗಿ ಸದಸ್ಯರಿಗೆ ಸಾಕಷ್ಟು ನೆರವಾಗಿ ಇತರೆ ಸಹಕಾರ ಸಂಘಗಳಿಗೆ ಸಮನಾಗಿ ಕೆಲಸ ಮಾಡುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಸಿಇಒ ಆಶಾ, ನಿರ್ದೇಶಕರಾದ ರಾಜು, ಮರಳಗಾಲ ಮಂಜುನಾಥ್, ನರಸಿಂಹಯ್ಯ, ಜಯಲಕ್ಷ್ಮಿ, ಮಂಜುನಾಥ್ ಇದ್ದರು.