ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಪ್ರಖ್ಯಾತ ಪುರಾಣ ದೇವಾಲಯಗಳಲ್ಲಿ ಒಂದಾದ ಮಲೆ ಮಹದೇಶ್ವರ ಬೆಟ್ಟ ಎಳ್ಳು ಅಮಾವಾಸ್ಯೆ ಅಂಗವಾಗಿ ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರ ವತಿಯಿಂದ ಆಯೋಜಿಸಲಾಗಿದ್ದ ವಿವಿಧ ಪೂಜಾ ಕಾರ್ಯಕ್ರಮಗಳು ಧಾರ್ಮಿಕವಾಗಿ ನಡೆಯಿತು. ವಿವಿಧ ಸೇವೆಗಳು:
ಮಲೆ ಮಹದೇಶ್ವರನಿಗೆ ಹರಕೆ ಹೊತ್ತು ಭಕ್ತರಿಂದ ವಿವಿಧ ಪೂಜಾ ಕಾರ್ಯಕ್ರಮಗಳಾದ ಎಳ್ಳು ಅಮಾವಾಸ್ಯೆ ಅಂಗವಾಗಿ ಬೆಳಗಿನ ಜಾವ ನಾಲ್ಕು ಗಂಟೆವರೆಗೆ ಮಲೆ ಮಹದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ, ಅಭಿಷೇಕ, ಮಹಾರುದ್ರಾಭಿಷೇಕ, ಪಂಚಕಳಶ, ನವರತ್ನ ಕಿರೀಟಗಾರನೇ, ರುದ್ರಾಭಿಷೇಕ ಶಿವಅಷ್ಟೋತ್ತರ, ನೈವೇದ್ಯ ಸೇವೆ, ನಾಗಾಭಿಷೇಕ, ಅಂತರ ಗಂಗೋತ್ಸವ ಸೇವೆ, ಭಸ್ಮಸೇವೆ, ಪಂಚಕಜ್ಜಾಯ ಸೇವೆ, ಲಾಡುಸೇವೆ ಹಾಗೂ ಮಲೆ ಮಹದೇಶ್ವರನಿಗೆ ಉತ್ಸವ ಮೂರ್ತಿಗಳಿಗೆ ಹುಲಿವಾಹನ ಬಸವನ ರುದ್ರಾಕ್ಷಿ ಮಂಟಪೋತ್ಸವ ವಿವಿಧ ಉತ್ಸವಗಳು ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮಗಳು ನಡೆದವು. ನಂತರ ಬೆಳಗ್ಗೆ ಆರು ಗಂಟೆಗೆ ಮಹಾ ಮಂಗಳಾರತಿ ಯೊಂದಿಗೆ ಪೂಜಾ ಕಾರ್ಯಕ್ರಮಗಳು ಜರುಗಿತು.ಎಳ್ಳು ಅಮವಾಸ್ಯೆ ಭಕ್ತರ ದಂಡು:
ತುಂಬಿ ತುಳುಕಿದ ವಸತಿ ನಿಲಯಗಳು:
ವಿಶೇಷ ದಾಸೋಹ ವ್ಯವಸ್ಥೆ:
ನಾಗಮಲ್ಲೇಶ್ವರನಿಗೆ ವಿಶೇಷ ಪೂಜೆ:
ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದ 400 ಹೆಚ್ಚು ಮಾದಪ್ಪನ ಭಕ್ತಾದಿಗಳು ಪಾದಯಾತ್ರೆಯಲ್ಲಿ ಮಲೆ ಮಾದೇಶ್ವರ ಬೆಟ್ಟಕ್ಕೆ ಆಗಮಿಸುವ ಮೂಲಕ ತೆರೆದ ಟ್ರ್ಯಾಕ್ಟರ್ ವಾಹನದಲ್ಲಿ ಮಲೆ ಮಾದೇಶ್ವರ ವಿಗ್ರಹ ಮೂರ್ತಿಯನ್ನು ಮೆರವಣಿಗೆ ಮೂಲಕ ಮಾದೇಶ್ವರನ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿ ಮಾದೇಶ್ವರನಿಗೆ ತಮ್ಮ ಇಷ್ಟಾರ್ಥ ಸಿದ್ಧಿಸುವಂತೆ ಭಕ್ತರು ನಿವೇದನೆ ಮಾಡಿಕೊಂಡರು.
ಮಲೆ ಮಾದೇಶ್ವರ ಬೆಟ್ಟಕ್ಕೆ ಆಗಮಿಸುವ ಹಿರಿಯ ಭಕ್ತಾದಿಗಳಿಗೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿಶೇಷ ಕೌಂಟರ್‌ನಲ್ಲಿ ಟಿಕೆಟ್‌ಗಳನ್ನು ನೀಡುವ ಮೂಲಕ ವಿಶೇಷ ದರ್ಶನ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿತ್ತು ಮಾದೇಶ್ವರನ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಸಹ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿತ್ತು.
------19ಸಿಎಚ್ಎನ್16
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಎಳ್ಳು ಅಮಾವಾಸ್ಯೆ ಅಂಗವಾಗಿ ಜಮಾವಣೆಗೊಂಡಿದ್ದ ಭಕ್ತರು ಪೂಜೆ ಸಲ್ಲಿಸಿದರು.-----------
19ಸಿಎಚ್ಎನ್14ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದ ಮಾದಪ್ಪನ ಭಕ್ತಾದಿಗಳು ಟ್ಯಾಕ್ಟರ್ ನಲ್ಲಿ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮಾದಪ್ಪನ ಭಕ್ತರು.
-------------- 19ಸಿಎಚ್ಎನ್15ಹನೂರು ಮಲೆ ಮಹದೇಶ್ವರ ಬೆಟ್ಟ ಎಳ್ಳು ಅಮಾವಾಸ್ಯೆ ಪೂಜೆಗೆ ಬಂದಿದ್ದ ಹಿರಿಯ ನಾಗರಿಕರಿಗೆ ಪ್ರತ್ಯೇಕ ಟಿಕೆಟ್ ಕೌಂಟರ್ ವ್ಯವಸ್ಥೆ ಕಲ್ಪಿಸಲಾಗಿತ್ತು .
-----------