ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಗಾಂಧಿ ಭವನದಲ್ಲಿ ಕರುನಾಡ ಸಿರಿ ಸಂಪದ ಸಾಹಿತ್ಯ ಸಾಂಸ್ಕೃತಿಕ ಟ್ರಸ್ಟ್‌ನ ನಾಲ್ಕನೇ ವಾರ್ಷಿಕೋತ್ಸವದ ಪ್ರಯುಕ್ತ ಕವಿ ಕಾವ್ಯ ಸಮ್ಮಿಲನ, ಗೀತ ಗಾಯನ, ಭರತ ನಾಟ್ಯ,ಸಾಧಕರಿಗೆ ಪುರಸ್ಕಾರ ಕಾರ್ಯಕ್ರಮದಲ್ಲಿ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
ಸಾಹಿತ್ಯವೆಂಬುದು ಸಮಕಾಲೀನ ಸಮಾಜದ ಪ್ರತಿಬಿಂಬವಿದ್ದಂತೆ. ಆದಿಕವಿ ಪಂಪ, ಕುಮಾರವ್ಯಾಸ ಮುಂತಾದವರು ಸಾಹಿತ್ಯಕ್ಕೆ ನೀಡಿರುವ ಕೊಡುಗೆಯನ್ನು ಇಂದಿಗೂ ಸ್ಮರಿಸುತ್ತೇವೆ ಎಂದರೆ ಅವರ ಸಾಹಿತ್ಯದ ಮಹತ್ವ ಇಂದಿನವರಿಗೆ ಅರಿವಾಗಬೇಕು. ಅವುಗಳಲ್ಲಿ ಮಾನವೀಯ ಮೌಲ್ಯಗಳ ದರ್ಶನವಾಗುವುದಲ್ಲದೆ, ಜಗತ್ತಿನ ಕಲ್ಯಾಣವನ್ನು ಬಯಸುತ್ತವೆ. ಇಲ್ಲಿ ನಾವು ಗಮನಿಸಬೇಕಾದ ಪ್ರಮುಖ ವಿಚಾರವೆಂದರೆ, ಈ ಭಾಷಾ ಸಾಹಿತ್ಯದ ಮೂಲಬೇರು ಜಾನಪದವಾಗಿದೆ. ಅದುವೇ ಶ್ರಮ ಸಂಸ್ಕೃತಿಯ ಪ್ರತೀಕವೂ ಹೌದು ಎಂದು ಬಣ್ಣಿಸಿದರು.ಇತ್ತೀಚೆಗೆ ನಮ್ಮನ್ನು ಆಳುವ ನಾಯಕರು ಇಂತಹ ಸಂಪದ್ಭರಿತ ಸಾಹಿತ್ಯ ಸಂಸ್ಕೃತಿಯನ್ನು ಅರಿಯದ ಪರಿಣಾಮ ಸದನದಲ್ಲಿ ಅವರು ಬಳಸುವ ಭಾಷೆಯೂ ಕೀಳುಮಟ್ಟಕ್ಕಿಳಿದಿದೆ. ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಕನ್ನಡ ಸಾಹಿತ್ಯಕ್ಕೆ ದೇಶದಲ್ಲಿ ತನ್ನದೇ ಆದ ಮಹತ್ವವಿದೆ. ಇದನ್ನು ನಾಯಕರೆನಿಸಿಕೊಂಡವರು ಅರಿತುಕೊಳ್ಳಬೇಕು ಎಂದರು.
ಕುವೆಂಪು ಅವರು ತಮ್ಮ ೨೦ನೇ ವಯಸ್ಸಿನಲ್ಲೇ ನಾಡಗೀತೆಯನ್ನು ರಚಿಸಿದ್ದಾರೆ. ಇಡೀ ಕರ್ನಾಟಕವನ್ನು ಆ ಒಂದು ಗೀತೆಯಲ್ಲೇ ಕಟ್ಟಿಕೊಟ್ಟಿರುವ ಅವರನ್ನು ದಾರ್ಶನಿಕರು ಎಂದೇ ಪರಿಗಣಿಸಬೇಕು. ಬೇರೆ ಯಾರಿಗೂ ಇಂತಹ ಸಾಹಿತ್ಯ ರಚಿಸಲು ಸಾಧ್ಯವಿಲ್ಲ ಎಂಬುದನ್ನು ನಾವು ಮನಗಾಣಬೇಕು. ಸಾಹಿತ್ಯ ಹಿನ್ನೆಲೆಗೆ ಸರಿದು ರಾಜಕೀಯ ಮುನ್ನೆಲೆಗೆ ಬಂದರೆ ನಾಡು ಛಿದ್ರವಾಗುತ್ತದೆಂದು ಎಚ್ಚರಿಸಿದರು.
ಕಲಾವಿದ ಕಟ್ಟೆ ಎಂ.ಎಎಸ್.ಕೃಷ್ಣಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ವಿ.ಧರಣೇಣೇಂದ್ರಯ್ಯ ಅಧ್ಯಕ್ಷತೆ ವಹಿಸಿದ್ದರು, ಲೋಕಪಾವನಿ ಬ್ಯಾಂಕ್ ಅಧ್ಯಕ್ಷೆ ಸುಜಾತ ಕೃಷ್ಣ, ಉದ್ಯಮಿ ಎಸ್.ಸಿ.ಬಸವರಾಜು, ಕರ್ನಾಟಕ ಅಹಿಂದ ವೇದಿಕೆ ರಾಜ್ಯಾಧ್ಯಕ್ಷ ಬಸವರಾಜು, ಕಾಯಕಯೋಗಿ ಫೌಂಡೇಷನ್ ಅಧ್ಯಕ್ಷ ಎಂ.ಶಿವಕುಮಾರ್, ಸಾಹಿತಿ ಕೊತ್ತತ್ತಿ ರಾಜು, ಕೆ ರಾಜಶ್ರೀ, ಶುಭಮಂಗಳ ಇತರರಿದ್ದರು.