ವೈದ್ಯರೆಂದರೆ ಪಕ್ತ್ಯಕ್ಷ ದೇವರು: ದೀಪಾ ದೇಸಾಯಿ

KannadaprabhaNewsNetwork |  
Published : Jul 02, 2024, 01:30 AM IST
ಸನ್ಮಾನ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ: ವೈದ್ಯರೆಂದರೆ ಪ್ರತ್ಯಕ್ಷ ದೇವರಿದ್ದಂತೆ. ಸಂಕಷ್ಟದ ಸಮಯದಲ್ಲಿ ತಕ್ಷಣ ನೆನಪಾಗುವವರಲ್ಲಿ ವೈದ್ಯರು ಅಗ್ರಗಣ್ಯರು. ವೈದ್ಯರಿಲ್ಲ ಲೋಕವನ್ನು ಊಹಿಸಲು ಸಾಧ್ಯವಿಲ್ಲ. ಇಂತಹ ವೈದ್ಯರಿಗೆ ಎಷ್ಟು ಕೃತಜ್ಞರಾಗಿದ್ದರೂ ಸಾಲದು. ಹಾಗಾಗಿ ವೈದ್ಯರಿಗೆ ವಿಶೇಷ ಗೌರವ ಸಲ್ಲಿಸಲು ಪ್ರತಿ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ ಎಂದು ಪಟ್ಟಣದ ಲಯನ್ಸ್ ಕ್ಲಬ್ ಅಧ್ಯಕ್ಷೆ ದೀಪಾ ದೇಸಾಯಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ:

ವೈದ್ಯರೆಂದರೆ ಪ್ರತ್ಯಕ್ಷ ದೇವರಿದ್ದಂತೆ. ಸಂಕಷ್ಟದ ಸಮಯದಲ್ಲಿ ತಕ್ಷಣ ನೆನಪಾಗುವವರಲ್ಲಿ ವೈದ್ಯರು ಅಗ್ರಗಣ್ಯರು. ವೈದ್ಯರಿಲ್ಲ ಲೋಕವನ್ನು ಊಹಿಸಲು ಸಾಧ್ಯವಿಲ್ಲ. ಇಂತಹ ವೈದ್ಯರಿಗೆ ಎಷ್ಟು ಕೃತಜ್ಞರಾಗಿದ್ದರೂ ಸಾಲದು. ಹಾಗಾಗಿ ವೈದ್ಯರಿಗೆ ವಿಶೇಷ ಗೌರವ ಸಲ್ಲಿಸಲು ಪ್ರತಿ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ ಎಂದು ಪಟ್ಟಣದ ಲಯನ್ಸ್ ಕ್ಲಬ್ ಅಧ್ಯಕ್ಷೆ ದೀಪಾ ದೇಸಾಯಿ ಹೇಳಿದರು.ಪಟ್ಟಣದ ಹಡಲಗೇರಿ ರಸ್ತೆ ಮಾರ್ಗದಲ್ಲಿರುವ ತಾಲೂಕ ಸರ್ಕಾರಿ ಆಸ್ಪತ್ರೆಯಲ್ಲಿ ವಿಶ್ವ ವೈದ್ಯರ ದಿನದ ಅಂಗವಾಗಿ ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಸಿಹಿ ತಿನಿಸಿ ಸನ್ಮಾನಿಸಿ ಗೌರವಿಸಿ ಮಾತನಾಡಿದರು. ವೈದ್ಯೋ ನಾರಾಯಣೋ ಹರಿಃ ಎಂದು ಭಾವಿಸಲಾಗುತ್ತದೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವವರು ಹಾಗೂ ಆರೋಗ್ಯ ರಕ್ಷಣೆ ಮಾಡುವವರು ವೈದ್ಯರು. ಕೋರೊನಾ ವೇಳೆಯಲ್ಲಿನ ವೈದ್ಯರ ಸೇವೆಯನ್ನು ಮರೆಯಲು ಸಾಧ್ಯವಿಲ್ಲ. ಅವರ ಕಾರ್ಯ ನಿಜಕ್ಕೂ ಶ್ಲಾಘನಿಯ ಎಂದರು. ತಾಲೂಕ ಆರೋಗ್ಯ ಅಧಿಕಾರಿ ಡಾ.ಸತೀಶ್ ತಿವಾರಿ, ತಾಲೂಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಅನಿಲಕುಮಾರ್ ಶೇಗುಣಶಿ, ತಜ್ಞ ವೈದ್ಯ ಡಾ. ಮಹಮ್ಮದ ಆಸ್ಪಕ್ ಡಾ.ಹಸನ್ ಬೀಳಗಿ, ಡಾ.ಬಸವರಾಜ್ ಆಲಗೂರ, ದಂತ ವೈದ್ಯೆ ರಿಪತಕೌಸರ್ ಇನಾಮದಾರ್ ಹಾಜರಿದ್ದರು. ಜೆಒಸಿಸಿ ಬ್ಯಾಂಕ್ ನಿರ್ದೇಶಕ ಆನಂದಗೌಡ ಬಿರಾದಾರ ಮಾತನಾಡಿ, ಶ್ರೇಷ್ಠ ವೈದ್ಯ ಬಿ.ಸಿ.ರಾಯ್ ಅವರ ವೈದ್ಯಕೀಯ ಸೇವೆಗೆ ನೀಡಿದ ಅವರ ಸ್ಮರಣಾರ್ಥ ಜುಲೈ 1ರಂದು ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಅನಾರೋಗ್ಯಕ್ಕೆ ತುತ್ತಾದ ಪ್ರತಿಯೊಬ್ಬ ರೋಗಿಯನ್ನು ಸರಿಯಾದ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಿ, ಅವನಿಗೆ ಪುನರ್ಜನ್ಮ ನೀಡುವುದು ಪ್ರತಿಯೊಬ್ಬ ವೈದ್ಯರ ಕಾಯಕವಾದರೆ. ಅವರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಗಣ್ಯರಾದ ವೆಂಕನಗೌಡ ಪಾಟೀಲ, ಆರೋಗ್ಯ ಇಲಾಖೆಯ ಟಿ.ಎಚ್.ಲಮಾಣಿ, ಬಸಮ್ಮ ಸಾರವಾಡ, ಎಂ.ಎಸ್.ಗೌಡರ, ಸಂಜಯ ಬೋಸ್ಲೆ ಎಂ.ಬಿ.ಭಾಗವಾನ, ಸಚಿನ್ ರಾಠೋಡ್, ವ್ಹಿ.ವ್ಹಿ.ಪವಾಡಶೆಟ್ಟಿ, ಯಲಗುರೇಶ ತೋನಶ್ಯಾಳ, ಚೇತನ್ ಕಲ್ಲುಡಿ, ವಿರೇಶ್.ಎಸ್.ಬಿ, ಎಸ್.ಎಸ್.ಸಜ್ಜನ ರಾಜೇಶ್ವರಿ ಅಳಗುಂಡಿ, ರಾಜೇಶ್ವರಿ ಹೊಕ್ರಾಣಿ, ಎಫ್.ಡಿ.ಕೊಡಗನೂರ, ಎಸ್.ಡಿ.ಸಗರಿ, ಮಂಜುಳಾ ಪಾಟೀಲ್ ಸೇರಿದಂತೆ ಸಿಬ್ಬಂದಿ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ