ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಹೋಬಳಿಯ ಸಾಸಲು ಗ್ರಾಮದಲ್ಲಿ ಶಿವರಾತ್ರಿಯಂದು ಶ್ರೀ ಕ್ಷೇತ್ರ ಸಾಸಲು ಗ್ರಾಮಾಭಿವೃದ್ಧಿ ಟ್ರಸ್ಟ್ ಹಮ್ಮಿಕೊಂಡಿದ್ದ ಮಹಾ ಶಿವರಾತ್ರಿ ಉತ್ಸವ, ರುದ್ರಾಕ್ಷಿ ದೀಕ್ಷಾ ಕಾರ್ಯಕ್ರಮ ಹಾಗೂ ಜಾಗರಣೆ, ಶಾಲಾ ಮಕ್ಕಳ ಶ್ರೀ ಶಿವಕುಮಾರಸ್ವಾಮಿ ಚರಿತೆ ನಾಟಕ ಸಮಾರಂಭದಲ್ಲಿ ಮಾತನಾಡಿದರು.
ಹಿಂದೂಗಳ ಪವಿತ್ರ ಹಬ್ಬದಲ್ಲಿ ಶಿವರಾತ್ರಿಯೂ ಒಂದಾಗಿದೆ. ಮಹಾಶರಣ ಭೈರವ ಮಹಾರಾಜರು ತಪೋಗೈದು ಇದೇ ಕ್ಷೇತ್ರದಿಂದ ಅವರು ಕೈಲಾಸಕ್ಕೆ ಪಯಣಿಸಿದ ದೈವಿಕ ಭೂಮಿ ಇದಾಗಿದೆ. ದಾಸೋಹಿ ಶರಣ ಭೈರವರಾಜರ ಪರಂಪರೆಯಾದ ಅನ್ನದಾಸೋಹವನ್ನು ಗ್ರಾಮಸ್ಥರು ಮುಂದುವರೆಸಿಕೊಂಡು ಹೋಗುತ್ತಿರುವುದು ಕ್ಷೇತ್ರದ ಮಹಾಸತ್ಕಾರ್ಯವಾಗಿದೆ. ಕ್ಷೇತ್ರದ ಕುರಿತು ಪಿಎಚ್‌ಡಿ ಅಧ್ಯಯನ ಮಾಡುವ ಆಶಯ ತಮ್ಮದಾಗಿದೆ ಎಂದರು.ಶಿವರಾತ್ರಿ ಶಿವ ಪಾರ್ವತಿ ವಿವಾಹದ ಶುಭದಿನವಾಗಿದೆ. ಬ್ರಹ್ಮ, ವಿಷ್ಣು ನಡುವೆ ಶ್ರೇಷ್ಠತೆ ಪ್ರಶ್ನೆ ಉದ್ಭವಿಸಿದಾಗ ಲಿಂಗರೂಪಿಯಾಗಿ ಶಿವ ಕಂಗೊಳಿಸಿದ ದಿನ ಕೂಡ ಆಗಿದೆ. ಸಮುದ್ರ ಮಂಥನದ ವೇಳೆ ವಿಷಾಪಾನ ಮಾಡಿದ ಶಿವನ ಕಂಠ ಹಿಡಿದು ಪಾರ್ವತಿ ಜಾಗರಣೆಗೈದ ರಾತ್ರಿ ಈ ಶಿವರಾತ್ರಿಯಾಗಿದೆ ಎಂದು ಶ್ರೀಗಳು ನುಡಿದರು.
ಮಕ್ಕಳಿಂದ ಜರುಗಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಶಿವಭಕ್ತರ ಮನಸೂರೆಗೊಳಿಸಿತು.