ಕನ್ನಡಪ್ರಭ ವಾರ್ತೆ ಪಾಂಡವಪುರ
ಗ್ರಾಮದ ಗೌಡೇಗೌಡರ ಕುಟುಂಬದ ಪರವಾಗಿ ಕಮಲಮ್ಮ-ಸ್ವಾಮಿಗೌಡ ಅವರು ತಮ್ಮ ಮೊಮ್ಮಗಳು ಬಿ.ಪಿ.ಚಾರ್ವಿಕ ಅವರ ಏಳಿಗೆ ಹಾಗೂ ಅಭಿವೃದ್ಧಿಗಾಗಿ ಮೊಮ್ಮಗಳ ಹೆಸರಿನಲ್ಲಿ ಶ್ರೀಮಹಾಲಿಂಗೇಶ್ವರನಿಗೆ ಪಂಚಲೋಹ ಕಂಚಿನ ಶಿವನ ಕೊಳಗವನ್ನು ಅರ್ಪಣೆ ಮಾಡಿದರು.
ಮುಂದಿನ ದಿನಗಳಲ್ಲಿ ಗ್ರಾಮ ದೇವತೆ ಶ್ರೀ ಲಕ್ಷ್ಮೀದೇವಿಗೆ ನಮ್ಮ ಕುಟುಂಬದಿಂದ ಚಿನ್ನದ ಕವಚವನ್ನು ಅರ್ಪಿಸಬೇಕೆಂಬ ಮಹಾದಾಸೆ ಹೊಂದಿರುವುದಾಗಿ ಕೆ.ಬೆಟ್ಟಹಳ್ಳಿ ಗ್ರಾಮದ ಮುಖಂಡರಾದ ಸ್ವಾಮಿಗೌಡ ಅವರು ತಿಳಿಸಿದರು.ಈ ವೇಳೆ ಗ್ರಾಮದ ಯಜಮಾನರಾದ ಪುಟ್ಟಸಿದ್ದೇಗೌಡ, ಕೃಷ್ಣೇಗೌಡ ಬಿ.ಟಿ.ಶಿವಣ್ಣ, ಮಹದೇವೇಗೌಡ, ದೇವಸ್ಥಾನದ ಅರ್ಚಕ ಸತ್ಯನಾರಾಯಣ, ಸೇವಾರ್ಥದಾರರಾದ ಕಮಲಮ್ಮ, ಸ್ವಾಮಿಗೌಡ ಹಲವರು ಹಾಜರಿದ್ದರು.
ಮಂಡ್ಯ: 66/11 ಕೆ.ವಿ. ಹಂಪಾಪುರ ಮತ್ತು ಬಸರಾಳು ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ಕಾರ್ಯನಿರ್ವಹಣೆ ಕೆಲಸ ಹಮ್ಮಿಕೊಂಡಿರುವುದರಿಂದ ಫೆ.18ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಫೆ.17ರಂದು ರೈತರ ಸಭೆ
ತಾಲೂಕಿನ ಮದ್ದೂರು ಕೆರೆ ವ್ಯಾಪ್ತಿಯಲ್ಲಿ ಬರುವ ಬೈರನ್, ವೈದ್ಯನಾಥಪುರ ಹಾಗೂ ಚಾಮನಹಳ್ಳಿ ನಾಲೆಗಳ ಆಧುನೀಕರಣ ಕಾಮಗಾರಿ ಕೈಗೊಳ್ಳುವ ಸಂಬಂಧ ಫೆ.17ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತರ ಸಭೆಯನ್ನು ಆಯೋಜಿಸಲಾಗಿದೆ ಎಂದು ಶಾಸಕ ಕೆ.ಎಂ. ಉದಯ್ ಹೇಳಿದರು. ಪ್ರವಾಸಿ ಮಂದಿರದಲ್ಲಿ ಮಧ್ಯಾಹ್ನ 2:30 ಗಂಟೆಗೆ ನಡೆಯುವ ಸಭೆಯಲ್ಲಿ ನಾಲಾ ವ್ಯಾಪ್ತಿಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಲಹೆ ಮತ್ತು ಅಭಿಪ್ರಾಯಗಳನ್ನು ತಿಳಿಸುವಂತೆ ಶಾಸಕರು ಮನವಿ ಮಾಡಿದ್ದಾರೆ.