ದಾವಣಗೆರೆ ಜಿಲ್ಲಾ ಕೋರ್ಟ್‌ ಸ್ಫೋಟಕ್ಕೆ ಇ-ಮೇಲ್‌ ಬಾಂಬ್!

KannadaprabhaNewsNetwork |  
Published : Feb 17, 2026, 01:30 AM IST
ಜೈಲು | Kannada Prabha

ಸಾರಾಂಶ

ದಾವಣಗೆರೆ ಜಿಲ್ಲಾ ನ್ಯಾಯಾಲಯಕ್ಕೆ ಸೋಮವಾರ ಆರ್‌ಡಿಎಕ್ಸ್ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಸಂದೇಶ ಬಂದ ಹಿನ್ನೆಲೆ ಮಧ್ಯಾಹ್ನದವರೆಗೆ ನ್ಯಾಯಾಲಯಗಳ ಕಲಾಪ ಸ್ಥಗಿತಗೊಳಿಸಿ, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ, ಶ್ವಾನದಳ, ಪೊಲೀಸ್ ಅಧಿಕಾರಿಗಳು ಬಾಂಬ್‌ಗಾಗಿ ತೀವ್ರ ಶೋಧ ಕಾರ್ಯ ಕೈಗೊಂಡ ಘಟನೆ ನಗರದಲ್ಲಿ ನಡೆದಿದೆ.

- ಅಧಿಕೃತ ಖಾತೆಗೆ ಇ-ಮೇಲ್‌ನಲ್ಲಿ ಬೆದರಿಕೆ ರವಾನೆ । ಸಂಪೂರ್ಣ ತಪಾಸಣೆ । ಹುಸಿ ಬಾಂಬ್‌: ಎಸ್‌ಪಿ ಹೇಳಿಕೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಜಿಲ್ಲಾ ನ್ಯಾಯಾಲಯಕ್ಕೆ ಸೋಮವಾರ ಆರ್‌ಡಿಎಕ್ಸ್ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಸಂದೇಶ ಬಂದ ಹಿನ್ನೆಲೆ ಮಧ್ಯಾಹ್ನದವರೆಗೆ ನ್ಯಾಯಾಲಯಗಳ ಕಲಾಪ ಸ್ಥಗಿತಗೊಳಿಸಿ, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ, ಶ್ವಾನದಳ, ಪೊಲೀಸ್ ಅಧಿಕಾರಿಗಳು ಬಾಂಬ್‌ಗಾಗಿ ತೀವ್ರ ಶೋಧ ಕಾರ್ಯ ಕೈಗೊಂಡ ಘಟನೆ ನಗರದಲ್ಲಿ ನಡೆದಿದೆ.

ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಆರ್‌ಡಿಎಕ್ಸ್ ಬಾಂಬ್ ಇಡಲಾಗಿದ್ದು, ಫೆ.16ರಂದು ಸೋಮವಾರ ಮಧ್ಯಾಹ್ನ 12.30ಕ್ಕೆ ಆರ್‌ಡಿಎಕ್ಸ್ ಬಾಂಬ್ ಸ್ಫೋಟವಾಗಲಿದೆ ಎಂಬ ಬಾಂಬ್ ಬೆದರಿಕೆಯ ಇ-ಮೇಲ್ ಅನಾಮಧೇಯ ವ್ಯಕ್ತಿಯಿಂದ ಜಿಲ್ಲಾ ನ್ಯಾಯಾಧೀಶರಿಗೆ ಬಂದಿದೆ. ಈ ಹಿನ್ನೆಲೆ ಎಲ್ಲ ನ್ಯಾಯಾಧೀಶರು, ವಕೀಲರು, ಕಕ್ಷಿದಾರರು, ಸಾರ್ವಜನಿಕರು ತೀವ್ರ ಆತಂಕಗೊಂಡರು.

ಬಾಂಬ್‌ ಬೆದರಿಕೆಯ ಇ-ಮೇಲ್‌ನ ವಿಚಾರ ತಕ್ಷಣವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೇಖರ್ ಡಿ. ಟೆಕ್ಕಣ್ಣನವರ್ ಗಮನಕ್ಕೆ ತರಲಾಯಿತು. ಬಳಿಕ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿ, ತಜ್ಞ ಸಿಬ್ಬಂದಿ, ಶ್ವಾನ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನಾ ಕಾರ್ಯ ಚುರುಕುಗೊಳಿಸಿದರು. ನ್ಯಾಯಾಲಯದ ಕಲಾಪಗಳ ಸ್ಥಗಿತಗೊಳಿಸಲಾಯಿತು. ಸಾರ್ವಜನಿಕರು, ವಕೀಲರು, ನ್ಯಾಯಾಧೀಶರನ್ನೆಲ್ಲಾ ಸುರಕ್ಷಿತ ಸ್ಥಳಗಳಿಗೆ ಕಳಿಸಿ, ಬಾಂಬ್ ಶೋಧ ಕಾರ್ಯದಲ್ಲಿ ತೊಡಗಿದರು.

ಇಡೀ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣವನ್ನು ಶ್ವಾನ ದಳ, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಅಧಿಕಾರಿ, ಸಿಬ್ಬಂದಿ ಸಂಪೂರ್ಣ ಪರಿಶೀಲಿಸಿದರು. ಪ್ರತಿ ಕೊಠಡಿಯಲ್ಲೂ ಇಂಚಿಂಚೂ ಬಿಡದೇ ಜಾಲಾಡಲಾಯಿತು. ಆದರೆ, ಇಡೀ ನ್ಯಾಯಾಲಯಗಳ ಸಂಕೀರ್ಣದಲ್ಲಿ ಎಲ್ಲಿಯೂ, ಯಾವುದೇ ರೀತಿಯ ಅನುಮಾನಾಸ್ಪದ ವಸ್ತುವಾಗಲೀ, ಸ್ಫೋಟಕ ವಸ್ತುವಾಗಲೀ, ಬಾಂಬ್‌ಗಳಾಗಲೀ ಪತ್ತೆಯಾಗಿಲ್ಲ. ಈ ಹಿನ್ನೆಲೆ ಇದೊಂದು ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ ಎಂಬ ನಿರ್ಧಾರಕ್ಕೆ ಪೊಲೀಸರು ಬಂದು, ಎಸ್‌ಪಿ ಗಮನಕ್ಕೆ ತಂದರು.

ಇಡೀ ನ್ಯಾಯಾಲಯ ಸಂಕೀರ್ಣ ಸುರಕ್ಷಿತವಾಗಿದೆ. ಯಾವುದೇ ಬಾಂಬ್‌ ಅಥವಾ ಅನುಮಾನಾಸ್ಪದ ವಸ್ತುಗಳಾಗಲೀ ಕಂಡುಬಂದಿಲ್ಲ. ಈ ಹಿನ್ನೆಲೆ ಮಧ್ಯಾಹ್ನದ ನಂತರ ನ್ಯಾಯ ಕಲಾಪ ಮುಂದುವರಿಸಲು ಪೊಲೀಸ್ ಅಧಿಕಾರಿಗಳು ನ್ಯಾಯಾಧೀಶರಿಗೆ ಮನವಿ ಮಾಡಿದರು. ಆನಂತರ ಪ್ರತಿಯೊಂದು ಜಿಲ್ಲಾ ನ್ಯಾಯಾಲಯದ ವಿವಿಧ ಶ್ರೇಣಿಯ ನ್ಯಾಯಾಲಯಗಳು, ನ್ಯಾ ಯಾಲಯದ ಪ್ರವೇಶ ದ್ವಾರದಲ್ಲಿ ವಕೀಲರು ಹಾಗೂ ಕಕ್ಷಿದಾರರನ್ನು ತಪಾಸಣೆ ಮಾಡಿ, ಮೆಟಲ್ ಡಿಟೆಕ್ಟರ್ ಮೂಲಕ ತಪಾಸಣೆ ಮಾಡಿದ ನಂತರವಷ್ಟೇ ಒಳಗೆ ಬಿಡಲಾಯಿತು. ಬಳಿಕ ಕೋರ್ಟ್‌ ಕಲಾಪಗಳು ಎಂದಿನಂತೆ ಮುಂದುವರಿದವು.

ದಾವಣಗೆರೆ ಜಿಲ್ಲಾ ನ್ಯಾಯಾಲಯವನ್ನು ಸ್ಪೋಟಿಸುವುದಾಗಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರ ಅಧಿಕೃತ ಖಾತೆಗೆ ಇ-ಮೇಲ್‌ನಲ್ಲಿ ಆರ್‌ಡಿಎಕ್ಸ್ ಬಾಂಬ್ ಇಟ್ಟು, ದಾವಣಗೆರೆ ಜಿಲ್ಲಾ ನ್ಯಾಯಾಲಯವನ್ನು ಫೆ.16ರಂದು ಸೋಮವಾರ ಮಧ್ಯಾಹ್ನ 12.30ಕ್ಕೆ ಸ್ಪೋಟಿಸುವುದಾಗಿ ಬೆದರಿಕೆ ಹಾಕಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾ ಬಾಂಬ್ ನಿಷ್ಕ್ರಿಯ ದಳ,ಶ್ವಾನದಳ ಸ್ಥಳಕ್ಕೆ ದೌಡಾಯಿಸಿ, ಶೋಧ ನಡೆಸಿದಾಗ ಅದೊಂದು ಹುಸಿ ಬಾಂಬ್‌ ಬೆದರಿಕೆಯಷ್ಟೇ ಎಂಬುದಾಗಿ ಸ್ಪಷ್ಟವಾಗುತ್ತಿದ್ದಂತೆಯೇ ಎಲ್ಲರೂ ನಿರಮ್ಮಳರಾದರು.

- - -

(ಟಾಪ್‌ ಕೋಟ್‌)

ದಾವಣಗೆರ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಕ್ಕೆ ಬಾಂಬ್ ಇಟ್ಟು, ಸ್ಪೋಟಿಸುವುದಾಗಿ ಜಿಲ್ಲಾ ಪ್ರಧಾನ ನ್ಯಾಯಾಧೀಶರ ಅಧಿಕೃತ ಖಾತೆಗೆ ಇ-ಮೇಲ್ ಬಂದಿದ್ದರಿಂದ ಇಡೀ ನ್ಯಾಯಾಲಯ ಸಂಕೀರ್ಣವನ್ನು ತಪಾಸಣೆ ಮಾಡಿದ್ದು, ಯಾವುದೇ ಬಾಂಬ್ ಪತ್ತೆಯಾಗಿಲ್ಲ.

- ಡಾ.ಶೇಖರ್ ಎಚ್. ಟೆಕ್ಕಣ್ಣನವರ್, ಜಿಲ್ಲಾ ಎಸ್ಪಿ.

- - -

ಮಧ್ಯಾಹ್ನದಿಂದ ಮುಂದುವರಿದ ಕಲಾಪಗಳುಕನ್ನಡಪ್ರಭ ವಾರ್ತೆ, ದಾವಣಗೆರೆ, ಫೆ.16ತಮಿಳುನಾಡಿನಿಂದ ನ್ಯಾಯಾಧೀಶರಿಗೆ ಬಾಂಬ್ ಇಟ್ಟಿರುವ ಬಗ್ಗೆ ಬೆದರಿಕೆಯ ಇ-ಮೇಲ್ ಬಂದಿದ್ದರಿಂದ ನ್ಯಾಯ ಕಲಾಪಗಳನ್ನು ಸ್ಥಗಿತಗೊಳಿಸಿ, ಪೊಲೀಸರಿಗೆ ಮಾಹಿತಿ ನೀಡಿ, ಬಾಂಬ್ ಪತ್ತೆಗೆ ಮನವಿ ಮಾಡಲಾಗಿತ್ತು ಎಂದು ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಬಿ.ಶ್ರೀನಿವಾಸ ತಿಳಿಸಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ, ಶ್ವಾನ ದಳ ಪರಿಶೀಲಿಸಿದಾಗ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 1.30ರಿಂದ ನ್ಯಾಯ ಕಲಾಪದಲ್ಲಿ ನ್ಯಾಯಾಧೀಶರು, ವಕೀಲರು, ಕಕ್ಷಿದಾರರು, ನಮ್ಮ ಸಿಬ್ಬಂದಿ ತೊಡಗಿದ್ದಾರೆ ಎಂದರು. ಪೊಲೀಸ್ ಇಲಾಖೆ ಇದೊಂದು ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ ಎಂಬ ಶಂಕೆ ವ್ಯಕ್ತಪಡಿಸಿದೆ. ಸಂಪೂರ್ಣ ತನಿಖೆ ನಂತರವಷ್ಟೇ ಸ್ಪಷ್ಟನೆ ಸಿಗಲಿದೆ. ಮಧ್ಯಾಹ್ನ 1.15ರವರೆಗೆ ಶೋಧಕೈಗೊಂಡರೂ ಯಾವುದೇ ಅನುಮಾನಾಸ್ಪದ, ಸ್ಪೋಟಕ ವಸ್ತುಗಳು ಸಿಗಲಿಲ್ಲ. ಹಾಗಿ ಅದೊಂದು ಹುಸಿ ಬಾಂಬ್ ಬೆಗರಿಕೆ ಕರೆ ಇರಬಹುದೆಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. .........................(ಫೋಟೋ ಬರಲಿವೆ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಲಾ ಹಂತದಲ್ಲೇ ಮಕ್ಕಳನ್ನು ದಂಡಿಸದಿದ್ದರೆ ಅಪಾಯ: ನಿಶ್ಚಲಾನಂದನಾಥ ಸ್ವಾಮೀಜಿ
ಜಾತ್ರೆ: ಎಸ್‌ಪಿ ನೇತೃತ್ವದಲ್ಲಿ ಜನಜಾಗೃತಿ ಪಥ ಸಂಚಲನ