ಗ್ರಾಮಾಂತರಕ್ಕೆತಾಲೂಕು ನೌಕರರ ಸಂಘದ ಚುನಾವಣೆ: ಐವರ ನಾಮಪತ್ರ ಹಿಂದಕ್ಕೆ

KannadaprabhaNewsNetwork |  
Published : Oct 22, 2024, 12:17 AM IST
58 | Kannada Prabha

ಸಾರಾಂಶ

ಚುನಾವಣೆ ನಡೆಯುವ 34 ನಿರ್ದೇಶಕರ ಸ್ಥಾನಗಳ ಪೈಕಿ 21 ಮಂದಿ ಅವಿರೋಧವಾಗಿ ಆಯ್ಕೆ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರತಾಲೂಕು ಸರ್ಕಾರಿ ನೌಕರರ ಸಂಘಕ್ಕೆ ಅ. 28 ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ 55 ಅಭ್ಯರ್ಥಿಗಳ ಪೈಕಿ 5 ಮಂದಿ ತಮ್ಮ ಉಮೇದುವಾರಿಕೆ ಹಿಂದಕ್ಕೆ ಪಡೆದುಕೊಂಡರು.ನಾಮಪತ್ರ ವಾಪಸಾತಿಗೆ ಕಡೆಯ ದಿನವಾದ ಸೋಮವಾರ ಆರ್.ಡಿ.ಪಿ.ಆರ್ ಇಲಾಖೆಯ ಕರೀಗೌಡ, ಎಸ್.ಎಸ್. ಸಂದೀಪ್, ಪದವಿ ಕಾಲೇಜಿನ ಪಿ. ಪ್ರಶಾಂತ್, ಉದ್ಯೋಗ ತರಬೇತಿ ಇಲಾಖೆಯ ಇ. ಪ್ರಸನ್ನ, ಕಂದಾಯ ಇಲಾಖೆಯ ಸಾಲಿಗ್ರಾಮ ತಾಲೂಕು ಕಚೇರಿಯ ಎಚ್.ಎಸ್. ಮಹೇಶ್ ನಾಮಪತ್ರ ಹಿಂಪಡೆದುಕೊಂಡರು.ಚುನಾವಣೆ ನಡೆಯುವ 34 ನಿರ್ದೇಶಕರ ಸ್ಥಾನಗಳ ಪೈಕಿ 21 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 13 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು 25 ಮಂದಿ ಸ್ಪರ್ಧಾ ಕಣದಲ್ಲಿ ಉಳಿದುಕೊಂಡಿದ್ದಾರೆ. ಅವಿರೋಧ ಆಯ್ಕೆಯಾದವರುತಾಲೂಕು ಆರೋಗ್ಯಾಧಿಕಾರಿ ಡಾ.ಡಿ. ನಟರಾಜು, ಆರೋಗ್ಯ ಇಲಾಖೆಯ ಕೆ.ವಿ. ರಮೇಶ್, ಎಸ್.ಎಂ. ಗಂಗಾಧರ, ಕೆ.ಎಸ್. ಪಾರ್ವತಿ, ಎನ್. ರವಿಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಿ.ಇ. ಉಮೇಶ್, ಪಂಚಾಯತ್ ರಾಜ್ ಇಲಾಖೆಯ ಆರ್. ಮಂಜುನಾಥ್, ಸಿಡಿಪಿಒ ಸಿ.ಎಂ. ಅಣ್ಣಯ್ಯ, ಕೃಷಿ ಇಲಾಖೆಯ ಎಸ್. ಹರೀಶ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಕೆ.ಎಂ. ಮುರುಳಿ, ಪಶುಸಂಗೋಪನಾ ಇಲಾಖೆಯ ಡಾ.ಎಚ್.ಪಿ. ಹರೀಶ್, ಖಜಾನೆ ಇಲಾಖೆ ಎಚ್.ಜೆ. ಜಯಲಕ್ಷ್ಮೀ, ಲೋಕೋಪಯೋಗಿ ಇಲಾಖೆ ದೊರೆಸ್ವಾಮಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಡಿ.ಆರ್. ಕುಮಾರ್, ಅಬಕಾರಿ ಇಲಾಖೆಯ ಕೆ.ಪಿ. ಶಿವಕುಮಾರ್, ಶಿಕ್ಷಣ ಇಲಾಖೆಯ ಎಂ.ಎಸ್. ಲೋಕೇಶ್, ಆರ್.ಡಿ.ಪಿ.ಆರ್ ಇಲಾಖೆ ಕೆ.ಎಸ್. ಸತೀಶ್ ಕುಮಾರ್, ಜಿ.ಟಿ. ಸಂತೋಷ್, ಪದವಿ ಶಿಕ್ಷಣ ಇಲಾಖೆಯ ಎಂ.ವಿ. ರಾಘವೇಂದ್ರ, ತಾಂತ್ರಿಕ ಶಿಕ್ಷಣ ಇಲಾಖೆಯ ಬಿ. ರಘು, ಕಂದಾಯ ಇಲಾಖೆಯ ಎಸ್.ಆರ್. ಯಶವಂತ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಸ್ಪರ್ಧಾಕಣದಲ್ಲಿರುವವರುಉಳಿದಂತೆ ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ನಾಲ್ಕು ಮಂದಿ ನಿರ್ದೇಶಕ ಸ್ಥಾನಕ್ಕೆ ಎಂ. ನಾಗರಾಜು, ಎಚ್.ಟಿ. ಪಾಂಡು, ಪೂರ್ಣಿಮಾ, ಕೆ.ಎಲ್. ಮಂಜುನಾಥ್, ಬಿ.ಎಲ್. ಮಹದೇವ್, ರಾಜಶೇಖರ, ರಾಜೇಶ್ವರಿ ಮತ್ತು ಶಂಕರೇಗೌಡ ಕಣದಲ್ಲಿದ್ದಾರೆ.ಪ್ರೌಢಶಾಲಾ ಶಿಕ್ಷಣ ಇಲಾಖೆ ವತಿಯಿಂದ ಒಂದು ನಿರ್ದೇಶಕ ಸ್ಥಾನಕ್ಕೆ ಎಸ್.ಎನ್. ಮಂಜು, ಕೆ. ಮಧುಕುಮಾರ್, ಮೋಹನ್, ಲೋಕೇಶ್, ಕಂದಾಯ ಇಲಾಖೆಯ ಒಂದು ಸ್ಥಾನಕ್ಕೆ ಟಿ.ಎನ್. ರವೀಂದ್ರರಾವ್, ಎಸ್. ಶಶಿಕಾಂತ್, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಒಂದು ಸ್ಥಾನಕ್ಕೆ ಎಚ್.ಎಸ್. ರಾಘವೇಂದ್ರ, ಜಿ.ಜೆ. ಶಂಕರ್, ಎಚ್.ಪಿ. ಶಶಿಧರ್ ಸ್ಪರ್ಧೆಯಲ್ಲಿದ್ದಾರೆ.ನ್ಯಾಯಾಂಗ ಇಲಾಖೆಯ ಒಂದು ಸ್ಥಾನಕ್ಕೆ ಎಚ್.ಎಲ್. ಪವನ್ ಕುಮಾರ್, ಎನ್.ವಿ. ತುಳಸಿ, ಅರಣ್ಯ ಇಲಾಖೆಯ ಒಂದು ಸ್ಥಾನಕ್ಕೆ ಕೆ.ಎಸ್. ಮಂಜುನಾಥ್, ಎಂ.ಎಸ್. ಮಹದೇವ್, ಹಿಂದುಳಿದ ವರ್ಗದ ಒಂದು ಸ್ಥಾನಕ್ಕೆ ಎಸ್. ಮಧುಸೂದನ್, ಜಿ.ಜೆ. ಮಹೇಶ್ ಕಣದಲ್ಲಿದ್ದಾರೆ ಎಂದು ಚುನಾವಣಾಧಿಕಾರಿ ವೆಂಕಟೇಶ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೆರಿಯಶಾಂತಿ, ಅಡ್ಡಹೊಳೆಯಲ್ಲಿ ಆನೆ ದಾಟು ಕಾಮಗಾರಿ ಪೂರ್ಣ
ಶಿರೋಮಣಿ ಪ್ರಶಸ್ತಿಯಿಂದ ಸಿದ್ದಕಟ್ಟೆ ಸಹಕಾರ ಸಂಘದ ಹೆಸರು ರಾಜ್ಯಾದ್ಯಂತ ಪಸರಿಸಿದೆ: ಸಂದೇಶ್ ಶೆಟ್ಟಿ