ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತೊಂದರೆ ಕೊಡಲು ಸುಳ್ಳು ಆರೋಪ: ಸಚಿವ ತಿಮ್ಮಾಪೂರ

KannadaprabhaNewsNetwork |  
Published : Sep 17, 2024, 12:56 AM ISTUpdated : Sep 17, 2024, 12:45 PM IST
ಸಚಿವ ತಿಮ್ಮಾಪುರ ಅವರ ಜನ್ಮದಿನಾಚರಣೆಯಲ್ಲಿ ಪಾರ್ಥನಳ್ಳಿ ಕುಟುಂಬದವರು ಸನ್ಮಾನಿಸಿದರು.  | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತೊಂದರೆ ಕೊಡುವ ಉದ್ದೇಶದಿಂದ ವಿರೋಧ ಪಕ್ಷಗಳು ಸುಳ್ಳು ಆರೋಪಗಳನ್ನು ಮಾಡುತ್ತಿವೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಆರೋಪಿಸಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ದೊರಕಿಸಿಕೊಡಲು ಸಿದ್ದರಾಮಯ್ಯನವರು ಶ್ರಮಿಸುತ್ತಿದ್ದಾರೆ ಎಂದೂ ಅವರು ಹೇಳಿದರು.

  ಜಮಖಂಡಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತೊಂದರೆ ಕೊಡುವ ಉದ್ದೇಶದಿಂದ ವಿರೋಧ ಪಕ್ಷಗಳು ಸುಳ್ಳು ಆರೋಪಗಳನ್ನು ಮಾಡುತ್ತಿವೆ ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಆರೋಪಿಸಿದರು.

ನಗರದ ತೌಫಿಕ್‌ ಪಾರ್ಥನಳ್ಳಿ ಅವರ ಮನೆಯಲ್ಲಿ ಅಭಿಮಾನಿಗಳ ಬಳಗದಿಂದ ಸಚಿವರ 62ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು. ಮಾಜಿ ಮುಖ್ಯಮಂತ್ರಿ ದೇವರಾಜ ಅರಸರಂತೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಸಿದ್ದರಾಮಯ್ಯ ಕೆಲಸ ಮಾಡುತ್ತಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ದೊರೆಯಬೇಕು. ಬಡವರ ಮಕ್ಕಳು ಅನ್ನಕ್ಕಾಗಿ ಯಾರ ಮುಂದೆಯೂ ಕೈ ಚಾಚಬಾರದು ಎಂಬ ಉದ್ದೇಶದಿಂದ ಉಚಿತ ಯೋಜನೆಗಳನ್ನು ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿದೆ ಎಂದರು.

ಜನರಿಂದ ಮತಗಳನ್ನು ಪಡೆದು ಆಯ್ಕೆಯಾದ ವ್ಯಕ್ತಿಗಳು, ಜನ ಸೇವಕರಾಗಬೇಕು. ಹಣ, ಹೆಂಡಕ್ಕೆ ಮತಗಳನ್ನು ಮಾರಿಕೊಂಡರೆ ಸಂವಿಧಾನದ ಆಶಯಕ್ಕೆ ದ್ರೋಹಬಗೆದಂತೆ. ಜಮಖಂಡಿಯು ಭಾವೈಕ್ಯತೆಗೆ ಹೆಸರು ವಾಸಿಯಾದ ನಗರವಾಗಿದೆ. ಇಲ್ಲಿಯ ನಾಯಕರು ಜನರ ಸೇವೆ, ಬಡವರಿಗೆ ಸಹಾಯ ಮಾಡುವ ಕೆಲಸ ಮಾಡಿರಿ ಎಂದು ಕರೆ ನೀಡಿದರು. ಪಾರ್ಥನಳ್ಳಿ ಕುಟುಂಬದವರು ತಮ್ಮನ್ನು ಗೌರವಿಸಿ ಜನ್ಮದಿನದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದನ್ನು ಶ್ಲಾಘಿಸಿದರು.

ಯುವ ಕಾಂಗ್ರೆಸ್‌ ಮುಖಂಡ ತೌಫಿಕ್‌ ಪಾರ್ಥನಳ್ಳಿ ಮಾತನಾಡಿ, ಸಚಿವ ತಿಮ್ಮಾಪೂರ ಅವರು ರಾಜ್ಯದ ಮುಖ್ಯಮಂತ್ರಿಗಳಾಗಲಿದ್ದಾರೆ. ಅವರ ಸರಳ ಸ್ವಭಾವಕ್ಕೆ ದೇವರು ಅವರಿಗೆ ಉನ್ನತ ಸ್ಥಾನ ನೀಡಲಿದ್ದಾನೆ ಎಂದರು.

ಸಚಿವರ ಆಶಯದಂತೆ ರಕ್ತದಾನ ಶಿಬಿರ, ಅನ್ನದಾನ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದೇವೆ. ಸಚಿವ ತಿಮ್ಮಾಪೂರ ಮತ್ತು ತಮ್ಮ ಕುಟುಂಬ ಮೊದಲಿನಿಂದಲೂ ಒಂದೇ ಮನೆಯವರಂತೆ ನಡೆದುಕೊಂಡು ಬಂದಿದ್ದೇವೆ. ಸಚಿವರು ಸಾಮಾನ್ಯ ಕುಟುಂಬದಿಂದ ಜನಾನುರಾಗಿ ನಾಯಕರಾಗಿ ಬೆಳೆದಿದ್ದಾರೆ. ಅವರ ಸರಳ ಸ್ವಭಾವಕ್ಕೆ ಜನ ಮನ್ನಣೆ ದೊರೆತಿದೆ ಎಂದು ಹೇಳಿದರು.

ಮಾಜಿ ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ಮಾಮೂನ ಪಾರ್ಥನಳ್ಳಿ, ಮುತ್ತಿನ ಕಂತಿ ಮಠದ ಶಿವಲಿಂಗ ಪಂಡಿತಾರಾಧ್ಯ ಸ್ವಾಮಿಗಳು, ಹಿರೇಪಡಸಲಗಿಯ ಮಲ್ಲಪ್ಪಮುತ್ಯಾ, ಸಹಜಾನಂದ ಸ್ವಾಮಿಗಳು, ಕೃಷ್ಣಾನಂದ ಸ್ವಾಮಿಗಳು, ಕಾಂಗ್ರೆಸ್‌ನ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರು, ಮುಖಂಡರಾದ ರಪೀಕ್‌ ಬಾರಿಗಡ್ಡಿ ಸುಶೀಲ ಕುಮಾರ ಬೆಳಗಲಿ ಮುಂತಾದವರು ವೇದಿಕೆಯಲ್ಲಿದ್ದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ