ದೊಡ್ಡಬಳ್ಳಾಪುರ: ತಾಲೂಕಿನ ಒಡೇರಹಳ್ಳಿ ಸಮೀಪದ ಜಾಲಿಕಟ್ಟೆಯಲ್ಲಿ ದನಗಳ ಮೈ ತೊಳೆಯುತ್ತಿದ್ದ ರೈತ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ರಾಮಪುರದ ಕುಮಾರ್ (44) ಮೃತ ರೈತ. ಒಡೇರಹಳ್ಳಿ ಸಮೀಪದ ಜಾಲಿಕಟ್ಟೆಯಲ್ಲಿ ದನಗಳ ಮೈ ತೊಳೆಯಲು ನೀರಿಗಿಳಿದಿದ್ದ ವೇಳೆ ಕಾಲು ಜಾರಿ ಬಿದ್ದು ಸಾವನಪ್ಪಿರಬಹುದು ಎಂದು ಶಂಕಿಸಲಾಗಿದೆ. ದನಗಳು ಮನೆಗೆ ಹಿಂದಿರುಗಿದರೂ, ಕುಮಾರ್ ಮನೆಗೆ ಬರದದ್ದರಿಂದ ಕುಟುಂಬಸ್ಥರು ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ದೊಡ್ಡಬೆಳವಂಗಲ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಬುಧವಾರ ಬೆಳಿಗ್ಗೆ ಶವವನ್ನು ಹೊರತೆಗಿದ್ದಾರೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.