ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬನಹಟ್ಟಿಯ ಸದಾಶಿವ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಹುತ್ವ ಭಾರತ ಫೌಂಡೇಶನ್ ಹನಗಂಡಿ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಕ್ಷಣೆ, ಸೈನ್ಯ, ವೈದ್ಯಕೀಯ, ಶಿಕ್ಷಣ, ಬಾಹ್ಯಾಕಾಶ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಮಹಿಳೆಯರು ಸೇವೆಯಲ್ಲಿದ್ದು, ಪುರುಷರಷ್ಟೇ ದಕ್ಷತೆ ಮತ್ತು ಶಕ್ತಿಯುತ ಕೆಲಸ ಮಾಡುವ ಮೂಲಕ ದೇಶ ಕಟ್ಟುವಲ್ಲಿ ಶ್ರಮಿಸುತ್ತಿದ್ದಾರೆ ಎಂದರು.
ಪಿ.ಬಿ.ಆಲಗೂರ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸುವತ್ತ ಪಾಲಕರು ಆದ್ಯತೆ ನೀಡಬೇಕು. ಇದರಿಂದ ಶಿಕ್ಷಿತ ಮಹಿಳೆ ಸಮಾಜದ ಆಸ್ತಿಯಾಗುವುದಲ್ಲದೇ ತಂದೆ-ತಾಯಿಯರಿಗೆ ಕೀರ್ತಿ ತರುತ್ತಾರೆ ಎಂದರು.ಚಿರಂಜೀವಿ ರೋಡಕರ ಮಾತನಾಡಿ, ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನದ ಅಡಿಯಲ್ಲಿ ಮಹಿಳೆಯರಿಗೂ ಎಲ್ಲ ಸ್ತರಗಳಲ್ಲಿ ಮನ್ನಣೆ ದೊರೆಯುತ್ತಿದೆ. ಕಾನೂನಿನಲ್ಲಿ ಸ್ತ್ರೀ ಸಮಾನತೆಗೆ ನೀಡಿದ ಪ್ರಾಶಸ್ತ್ಯದಿಂದ ಮಹಿಳೆಯರು ಇಂದು ಸುರಕ್ಷಿತರಾಗಿದ್ದಾರೆ ಎಂದರು.ಎನ್.ಎಂ.ಹುಣಶ್ಯಾಳ, ವಿ.ಬಿ.ಶಿಂಧೆ ಮಾತನಾಡಿದರು. ಎಸ್.ಎನ್.ಪೋಳ ಸ್ವಾಗತಿಸಿದರು. ವಿ.ಸಿ.ಕೋಷ್ಠಿ ನಿರೂಪಿಸಿದರು. ಶಾಲೆಯ ಎಲ್ಲ ಮಕ್ಕಳು ತಮ್ಮ ಕೈಗಳಿಗೆ ಗುಲಾಬಿ ರಿಬ್ಬನ್ ಕಟ್ಟಿಕೊಂಡು ಸಿಹಿ ಹಂಚಿ ಸಂಭ್ರಮಿಸಿದರು.