ಹಣಕಾಸಿನ ವೈಷಮ್ಯ ಕೊಲೆಯಲ್ಲಿ ಅಂತ್ಯ

KannadaprabhaNewsNetwork |  
Published : Oct 21, 2024, 12:35 AM ISTUpdated : Oct 21, 2024, 12:36 AM IST
20ಕೆಆರ್ ಎಂಎನ್ 12,13.ಜೆಪಿಜಿ ಹಾರೋಹಳ್ಳಿ ತಾಲೂಕು ಮರಳವಾಡಿ ಸಮೀಪ ಕೊಲೆಯಾಗಿ ಬಿದ್ದಿರುವ ಲಿಖಿತ್  ಶವವಾಗಿ ಬಿದ್ದಿರುವ ಸ್ಥಳ. | Kannada Prabha

ಸಾರಾಂಶ

ಹಾರೋಹಳ್ಳಿ: ಹಣಕಾಸಿನ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಕೊಲೆಗೈದು ಶವವನ್ನು ಮರಳವಾಡಿ ಅನ್ನಪೂರ್ಣೇಶ್ವರಿ ಆಶ್ರಮದ ಸಮೀಪದ ರಾವತ್ತಿನಹಳ್ಳ ಏರಿಯ ಮೇಲೆ ಎಸೆದು ಹೋಗಿದ್ದಾರೆ.

ಹಾರೋಹಳ್ಳಿ: ಹಣಕಾಸಿನ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಕೊಲೆಗೈದು ಶವವನ್ನು ಮರಳವಾಡಿ ಅನ್ನಪೂರ್ಣೇಶ್ವರಿ ಆಶ್ರಮದ ಸಮೀಪದ ರಾವತ್ತಿನಹಳ್ಳ ಏರಿಯ ಮೇಲೆ ಎಸೆದು ಹೋಗಿದ್ದಾರೆ.

ಬೆಂಗಳೂರು ರಸ್ತೆ ಊದಿಪಾಳ್ಯ ಸಮೀಪದ ಲಕ್ಷ್ಮೀಪುರ ನಿವಾಸಿ ಜಿ.ಲಿಖಿತ್(30) ಕೊಲೆಯಾದ ಯುವಕ. ಲಿಖಿತ್ ಬಿಸ್ಲೆರಿ ವಾಟರ್ ವ್ಯಾಪಾರ ನಡೆಸುತ್ತಿದ್ದನು. ಈತನನ್ನು ಸ್ನೇಹಿತರಾದ ಹರೀಶ್, ವೆಂಕಟೇಶ್, ಕಿರಣ ಹಾಗೂ ಮತ್ತೊಬ್ಬ ಹರೀಶ ಎನ್ನುವವರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಮೃತನ ಪೋಷಕರು ಹಾರೋಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ನಾಲ್ವರು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಭಾನುವಾರ ಬೆಳಿಗ್ಗೆ ಮರಳವಾಡಿ ಆಶ್ರಮದ ರಾವತ್ತನಹಳ್ಳ ಏರಿಯ ಮೇಲೆ ಶನಿವಾರ ಮಧ್ಯರಾತ್ರಿ ಶವವನ್ನು ಕಂಡು ಗ್ರಾಮಸ್ಥರು ಹಾರೋಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶವದ ಕತ್ತು, ತಲೆ ಹಾಗೂ ಹಲವೆಡೆ ತೀವ್ರ ತರದ ಪೆಟ್ಟು ಬಿದ್ದಿರುವುದು ಕಂಡು ಬಂದಿದೆ. ಸ್ಥಳಕ್ಕೆ ಹಾರೋಹಳ್ಳಿ, ಕಗ್ಗಲಿಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ರಾಮನಗರ ಡಿವೈಎಸ್ಪಿ ದಿನಕರ್‌ಶೆಟ್ಟಿ, ಹಾರೋಹಳ್ಳಿ ಸರ್ಕಲ್ ಇನ್ಸ್‌ಪೆಕ್ಟರ್ ಅರ್ಜುನ್ ಭೇಟಿ ನೀಡಿದರು. ಪ್ರಕರಣ ದಾಖಲಿಸಿಕೊಂಡಿರುವ ಹಾರೋಹಳ್ಳಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

20ಕೆಆರ್ ಎಂಎನ್ 12,13.ಜೆಪಿಜಿ

ಹಾರೋಹಳ್ಳಿ ತಾಲೂಕು ಮರಳವಾಡಿ ಸಮೀಪ ಕೊಲೆಯಾಗಿ ಬಿದ್ದಿರುವ ಲಿಖಿತ್ ಶವವಾಗಿ ಬಿದ್ದಿರುವ ಸ್ಥಳ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದು 2028ರವರೆಗೂ ಸಿಎಂ, ಇಳಿಸಲು ಆಗೋಲ್ಲ: ಜಮೀರ್‌
ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ