ಆಲೋಚನೆಗಳ ಆಳ, ಭಾವನೆಗಳ ಮೇಳ ಇದ್ದಾಗ ಉತ್ತಮ ಕವಿತೆ ಮೂಡಲು ಸಾಧ್ಯ: ಎಂ. ಪ್ರಕಾಶಮೂರ್ತಿ

KannadaprabhaNewsNetwork |  
Published : Aug 24, 2026, 02:15 AM IST
ಸಂಡೂರಿನಲ್ಲಿ ಭಾನುವಾರ ನಡೆದ ನೂತನ ದತ್ತಿ ಸ್ವೀಕಾರ ಕಾರ್ಯಕ್ರಮದಲ್ಲಿ ದತ್ತಿ ದಾನಿಗಳನ್ನು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಕವಿತೆಗೆ ದೊಡ್ಡ ಶಕ್ತಿ ಇದೆ. ಆಲೋಚನೆಗಳ ಆಳ ಹಾಗೂ ಭಾವನೆಗಳ ಮೇಳವಿದ್ದಾಗ ಮಾತ್ರ ಉತ್ತಮ ಕವಿತೆ ಮೂಡಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಎಂ. ಪ್ರಕಾಶಮೂರ್ತಿ ಅಭಿಪ್ರಾಯಪಟ್ಟರು.

ಸಂಡೂರು: ಕವಿತೆಗೆ ದೊಡ್ಡ ಶಕ್ತಿ ಇದೆ. ಆಲೋಚನೆಗಳ ಆಳ ಹಾಗೂ ಭಾವನೆಗಳ ಮೇಳವಿದ್ದಾಗ ಮಾತ್ರ ಉತ್ತಮ ಕವಿತೆ ಮೂಡಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಎಂ. ಪ್ರಕಾಶಮೂರ್ತಿ ಅಭಿಪ್ರಾಯಪಟ್ಟರು.

ಪಟ್ಟಣದ ಗುರುಭವನದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಹಾಗೂ ಬಿಕೆಜಿ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನೂತನ ದತ್ತಿ ಸ್ವೀಕಾರ ಹಾಗೂ ಜಿಲ್ಲಾ ಮಟ್ಟದ ಶ್ರಾವಣ ಕವಿಗೋಷ್ಠಿ ಉದ್ಘಾಟಿಸಿ, ಪ್ರೊ. ಎಸ್. ಚಂದ್ರಶೇಖರ್ ಅವರ ಬರೆದಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು.

ನಾಡಿನ ಕವಿ ಪರಂಪರೆ ಬಹಳ ದೊಡ್ಡದಿದೆ. ಓದುವ ಹವ್ಯಾಸ ರೂಢಿಸಿಕೊಂಡರೆ ಉತ್ತಮ ಕವಿಯಾಗಬಹುದು. ಕವಿತೆ ಈಗಿರುವ ಪ್ರಕ್ಷಬ್ಧ ಸಮಾಜವನ್ನು ಮರುನಿರ್ಮಾಣ ಮಾಡಬೇಕಿದೆ. ದ.ರಾ. ಬೇಂದ್ರೆಯವರು ಹೇಳಿದಂತೆ ಕವಿತೆ ಜನರಲ್ಲಿ ಪರಿವರ್ತನೆ ತರವಂತಿರಬೇಕು. ಅದು ಮುಂದಿನ ದಿಕ್ಸೂಚಿಯಾಗಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ ಅಖಂಡ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ನಿಷ್ಠಿ ರುದ್ರಪ್ಪ ಅವರು ಮಾತನಾಡಿ, ಜಿಲ್ಲೆಯಲ್ಲಿ 250 ಕನ್ನಡ ಸಾಹಿತ್ಯ ಪರಿಷತ್ ದತ್ತಿಗಳಿವೆ. ಸಂಡೂರಿನಲ್ಲಿಯೂ ₹1.62 ಕೋಟಿ ವೆಚ್ಚದಲ್ಲಿ ಕನ್ನಡ ಭವನ ನಿರ್ಮಾಣಗೊಳ್ಳುತ್ತಿದೆ ಎಂದು ತಿಳಿಸಿದರು.

ನೂತನ ದತ್ತಿ ಸ್ವೀಕಾರ

ಕನ್ನಡ ಸಾಹಿತ್ಯ ಪರಿಷತ್ತಿಗೆ ಪಟ್ಟಣದ ಬಿ.ಆರ್. ಮಸೂತಿ, ಎಚ್.ಎನ್. ಭೋಸ್ಲೆ, ಬಿ. ರುದ್ರೇಶ್ ಶೆಟ್ಟಿ, ಜಿ. ಸಾಂಬಣ್ಣ, ಬಿ. ಶಿವಕುಮಾರ್, ರಮೇಶ್ ಗಡಾದ್ ಹಾಗೂ ಡಾ. ತಿಪ್ಪೇರುದ್ರ ಸಂಡೂರು ಅವರು ತಮ್ಮ ತಂದೆ ತಾಯಿಗಳ ಹೆಸರಿನಲ್ಲಿ ನೀಡಿದ ದತ್ತಿಯನ್ನು ಸ್ವೀಕರಿಸಲಾಯಿತು. ಕಸಾಪ ವತಿಯಿಂದ ದತ್ತಿ ದಾನಿಗಳನ್ನು ಸನ್ಮಾನಿಸಲಾಯಿತು.

ಶ್ರಾವಣ ಕವಿಗೋಷ್ಠಿ

ಶ್ರಾವಣ ಕವಿಗೋಷ್ಠಿಯಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ ಕವಿಗಳಾದ ಡಾ. ಬಡಿಗೇರ ಮೌನೇಶ್, ಕೊಟ್ಟಿಗೆ ಕರಿಬಸಮ್ಮ, ನಾಗರಾಜ ಸೂರಮ್ಮನಹಳ್ಳಿ, ಶೆಕ್ಷಾವಲಿ ಅಯ್ಯಯನಳ್ಳಿ, ಸಮತಿ ಕೃಷ್ಣಮೂರ್ತಿ, ಅಂಕಲಿ ಬಸಮ್ಮ, ಗಿರಿಯಪ್ಪ ಕೆ. ಬೈಲೂರು, ಟಿ. ಲೀಲಾವತಿ, ಬೇರ್ಗಿ ಜಯಶ್ರೀ, ವೆಂಕಟೇಶ್ ಬಡಿಗೇರ, ಡಾ. ವೀರೇಶ್ ಕುಮಾರ್ ಎಸ್., ಕಾರ್ತಿಕ್ ಆಚಾರ್ಯ, ಸುಭಾಷ್ ಬಿ.ಎಂ., ಕುರುವಳ್ಳಿ ತಿಮ್ಮಯ್ಯ, ಹರೀಶ್, ಮದುಸೂಧನ್ ಕೆ.ಎಂ., ಜಿ. ಯರಿಸ್ವಾಮಿ, ಎಂ. ಉಮಾಮಹೇಶ್ವರ, ಕ್ಯಾದಿಗೆಹಾಳು ಉದೇದಪ್ಪ, ಸೋದಾ ವಿರೂಪಾಕ್ಷಗೌಡ, ಕರಿಬಸವರಾಜ, ಕೆ.ಜಿ. ಪೂರ್ಣಿಮಾ, ಮುಮ್ತಾಜ್ ಬೇಗಂ, ಕೆ.ಎನ್. ರೇಣುಕಾ ಪೂಜಾರ್, ಶಶಿಕಲಾ ಚಂದ್ರಶೇಖರಪ್ಪ, ಪೂಜಾ, ಎಚ್.ಪಿ. ಚಂದ್ರಪ್ಪ, ಟಿ.ಎಚ್.ಎಂ. ಅಕ್ಕನಾಗಮ್ಮ, ಮಹೇಶ್ ಎಂ.ಎಸ್., ಬಸವರಾಜ್ ಬಣಕಾರ್ ಅವರು ಪ್ರಸ್ತುತ ಪಡಿಸಿದ ಕವಿತೆಗಳು ಸಮಕಾಲೀನ ಸಮಸ್ಯೆಗಳಿಗೆ, ಸನ್ನಿವೇಶಗಳಿಗೆ ಕನ್ನಡಿ ಹಿಡಿದವು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ, ಬಿಕೆಜಿ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕರಾದ ರಾಜಶೇಖರ ಬೆಲ್ಲದ್, ಸಿರುಗುಪ್ಪದ ಸಾಹಿತಿ ದಮ್ಮೂರು ಮಲ್ಲಿಕಾರ್ಜುನ, ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಕವಯಿತ್ರಿ ಎನ್.ಡಿ. ವೆಂಕಮ್ಮ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ತಾಲೂಕು ಘಟಕದ ಅಧ್ಯಕ್ಷ ಬಿ. ನಾಗನಗೌಡ ವಹಿಸಿದ್ದರು. ಡಾ. ಮೌನೇಶ್ ಬಡಿಗೇರ ಪ್ರಾರ್ಥಿಸಿದರು. ಎಚ್.ಎನ್. ಭೋಸ್ಲೆ ಸ್ವಾಗತಿದರು. ಡಾ. ತಿಪ್ಪೇರುದ್ರ ಸಂಡೂರು ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನಾಡೋಜ ಡಾ. ವಿ.ಟಿ. ಕಾಳೆ, ಮುಖಂಡರಾದ ಡಾ. ರಾಧಾಕೃಷ್ಣ, ಕೆ.ವಿ. ಮೋಹನ್ ರಾವ್, ಬಪ್ಪಕಾನ್ ಕುಮಾರಸ್ವಾಮಿ, ಸಿ.ಆರ್. ಗೋಪಾಲ್, ಹಗರಿ ಬಸವರಾಜಪ್ಪ, ಟಿ.ಎಂ. ಶಿವಕುಮಾರ್ ನಾಗೇಂದ್ರ ಕಾವೂರ್, ಜಿ. ವೀರೇಶ, ಎಂ.ಟಿ. ರಾಥೋಡ್, ಷಣ್ಮುಖರಾವ್, ಶಿವಮುರ್ತಿಸ್ವಾಮಿ ಸೋವೇನಹಳ್ಳಿ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಣಜಿಗ ಸಮಾಜ ಸ್ವಾವಲಂಬನೆಯಿಂದ ಸಂಘಟಿತವಾಗಬೇಕು
ದೇವಸ್ಥಾನದಲ್ಲಿ ಮೂತ್ರ ವಿಸರ್ಜನೆ ಪ್ರಕರಣ, ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿ ಗಡಿಪಾರು ಮಾಡಿ