ಧಾರವಾಡ:
ಅವರು ಸಾಂಸ್ಕೃತಿಕ ಲೋಕ ಆರ್ಟ್ ಮತ್ತು ಕಲ್ಚರಲ್ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕೋರ್ಟ್ ಸರ್ಕಲ್ ಹತ್ತಿರದ ಎಸ್. ಲೋಕ ಭವನದಲ್ಲಿ ಹಮ್ಮಿಕೊಂಡ ಜಾನಪದ ವೈವಿಧ್ಯಮಯ ಕಾರ್ಯಕ್ರಮದ ಅಡಿಯಲ್ಲಿ ಭರತನಾಟ್ಯ, ಜಾನಪದ ನೃತ್ಯ, ಡೊಳ್ಳು ಕುಣಿತ, ಸಂಗೀತ, ವೀರಗಾಸೆ, ಕಂಸಾಳೆ, ಪ್ರಶಸ್ತಿ ಪ್ರಧಾನದಂತಹ ವೈವಿಧ್ಯಮಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಾನಪದ ಕಲೆ, ಸಾಹಿತ್ಯ, ಸಂಗೀತ ಮತ್ತು ನೃತ್ಯಗಳ ಸೊಗಡನ್ನು ಒಟ್ಟಾಗಿ ಕಾಣುವ ಅವಕಾಶ ದೊರಕಿತು ಹಾಗೂ ಜಾನಪದ ಗೀತೆ, ಜನಪದ ನೃತ್ಯ, ಕಂಸಾಳೆ, ವೀರಗಾಸೆ, ಲಾವಣಿ ಹಾಗೂ ಕಥನಗಳು ಎಲ್ಲರ ಮನಸ್ಸನ್ನು ಗೆದ್ದಿವೆ ಎಂದು ಹೇಳಿದರು.ನಿವೃತ್ತ ಅಭಿಯಂತರ ಎಂ.ಎಸ್. ಫರಾಸ್, ಖ್ಯಾತ ಜನಪದ ಕಲಾವಿದ ಶಿವಾನಂದ ಅಮರಶೆಟ್ಟಿ, ಶಿಕ್ಷಕ ಸಂತೋಷ ಪೂರ್ವಿಮಠ, ಶಿವುಕುಮಾರ ಎನ್, ಮುಖಂಡರಾದ ಶ್ರೀಶೈಲಗೌಡ ಕಮತರ, ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಲ್ಲಮ್ಮ ಗೌಡರ ಇದ್ದರು. ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಆಯಿಷ ಅತ್ತಾರ, ಕಾರ್ತಿಕ ಗೋಸಾವಿ, ಪ್ರೀತಿ ಗೌಡರ ಅವರನ್ನು ಸನ್ಮಾನಿಸಲಾಯಿತು.
ಅಕಾಡೆಮಿ ಅಧ್ಯಕ್ಷ ಸೈಯದ್ ಎ.ಎಂ. ನಿರೂಪಿಸಿದರು. ಕಲಾವಿದ ವಿದ್ಯಾರ್ಥಿನಿ ಮಂಜುನಾಥ ಪ್ರಾರ್ಥಿಸಿದರು. ವೆಂಕಟೇಶ ಸ್ವಾಗತಿಸಿದರು. ಅಪರ್ಣಾ ಗೌಡರ ವಂದಿಸಿದರು.ನಂತರ ನಡೆದ ಜಾನಪದ ಗೀತೆ, ಜನಪದ ನೃತ್ಯ, ಕಂಸಾಳೆ, ವೀರಗಾಸೆ, ಲಾವಣಿ ಹಾಗೂ ಕಥನಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಗ್ರಾಮೀಣ ಬದುಕಿನ ನೋವು-ನಲಿವು, ಸಂಸ್ಕೃತಿ ಹಾಗೂ ಪರಂಪರೆ ಪ್ರತಿಬಿಂಬಿಸುವ ಪ್ರದರ್ಶನಗಳು ಎಲ್ಲರ ಮನಸೂರೆಗೊಂಡವು.