ನೆಮ್ಮದಿಯ ಬದುಕು ಕಟ್ಟಿಕೊಡುವ ಜನಪದ: ಸವಿತಕ್ಕ

KannadaprabhaNewsNetwork | Published : Dec 2, 2024 1:16 AM

ಸಾರಾಂಶ

ರಾಮನಗರ: ಜನಪದ ಕ್ಷೇತ್ರಕ್ಕೆ ವಿಶೇಷ ಶಕ್ತಿಯಿದ್ದು, ಎಲ್ಲರನ್ನೂ ತನ್ನತ್ತ ಸೆಳೆಯುವ ಮೂಲಕ ನೆಮ್ಮದಿಯ ಬದುಕನ್ನು ಕಟ್ಟಿಕೊಡುತ್ತದೆ ಎಂದು ಅಂತಾರಾಷ್ಟ್ರೀಯ ಜಾನಪದ ಕಲಾವಿದೆ ಸವಿತಕ್ಕ ಹೇಳಿದರು.

ರಾಮನಗರ: ಜನಪದ ಕ್ಷೇತ್ರಕ್ಕೆ ವಿಶೇಷ ಶಕ್ತಿಯಿದ್ದು, ಎಲ್ಲರನ್ನೂ ತನ್ನತ್ತ ಸೆಳೆಯುವ ಮೂಲಕ ನೆಮ್ಮದಿಯ ಬದುಕನ್ನು ಕಟ್ಟಿಕೊಡುತ್ತದೆ ಎಂದು ಅಂತಾರಾಷ್ಟ್ರೀಯ ಜಾನಪದ ಕಲಾವಿದೆ ಸವಿತಕ್ಕ ಹೇಳಿದರು.

ನಗರದ ನ್ಯೂ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಸಂಗೀತಕ್ಕೆ ಮೂಲ ಬೇರು ಜನಪದವಾಗಿದೆ. ಅದಕ್ಕೆ ವಿಶೇಷವಾದ ಶಕ್ತಿಯಿದೆ. ಹಾಗಾಗಿಯೇ ಎಲ್ಲರಲ್ಲೂ ಒಂದಲ್ಲಾ ಒಂದು ಪ್ರತಿಭೆ ಇರುತ್ತದೆ. ಆ ಪ್ರತಿಭೆ ಬೇರೇನೂ ಆಗದೆ ಮೂಲ ಜನಪದವಾಗಿರುತ್ತದೆ ಎಂದು ಹೇಳಿದರು.

ವರ್ಷದ ಎಲ್ಲ ದಿನಗಳು ಮನೆ ಮನಗಳಲ್ಲಿ ಕನ್ನಡ ನಿತ್ಯೋತ್ಸವ ಆಗಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಬೇರೆಡೆಗೆ ಗಮನ ಕೊಡದೆ ಓದಿಗೆ ಹೆಚ್ಚು ಆಸಕ್ತಿ ವಹಿಸಿ, ಓದಿನ ಜೊತೆಗೆ ಜೀವನದಲ್ಲಿ ಸೋಲಬಾರದು. ಸಾಧನೆಯ ಹಾದಿ ಸುಲಭವಾಗಿ ಸಿಗುವುದಿಲ್ಲ. ಶ್ರಮ, ತಾಳ್ಮೆ, ಪ್ರಯತ್ನದ ಜೊತೆಗೆ ಗುರಿ ತಲುಪುವ ಶಕ್ತಿ ಮತ್ತು ನಿರಂತರ ಪ್ರಯತ್ನ ಇರಬೇಕು. ಆಗ ಮಾತ್ರ ನಿಮ್ಮ ಗುರಿ ತಲುಪಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ತಂದೆ, ತಾಯಿ ಗುರುಗಳಿಗೆ ಹೆಸರು ತರುವ ರೀತಿಯಲ್ಲಿ ಬದುಕಬೇಕು. ಅದು ನಿಜವಾದ ಜೀವನ. ನಿಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣ ಮಾಡಿ ಜೀವನ ರೂಪಿಸಿಕೊಳ್ಳುವಾಗ ಜಾಗೃತೆ ವಹಿಸಿ ಎಂದು ಸವಿತಕ್ಕ ಕಿವಿ ಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲರಾದ ಡಾ.ಡಿ.ಆರ್.ರವಿಕುಮಾರ್, ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕದ ಅವಶ್ಯಕತೆಯಿದೆಯೋ ಹಾಗೆಯೇ ಪಠ್ಯೇತರ ಚಟುವಟಿಕೆಗಳ ಅವಶ್ಯಕತೆಯಿದೆ ಎಂಬುದನ್ನು ಇಂದಿನ ಕಾರ್ಯಕ್ರಮ ಸಾಕ್ಷಿಕರಿಸಿದೆ. ಮಕ್ಕಳಲ್ಲಿ ಉತ್ಸಾಹವಿದ್ದರೆ ನಿಮ್ಮ ಸಾಧನೆಗಳು ಸಹ ಯಶಸ್ವಿ ಯಾಗುತ್ತವೆ ಎಂದು ಸಂತಸ ವ್ಯಕ್ತಪಡಿಸಿದರು.

ಹಾಸ್ಯ ಕಲಾವಿದ ನಗೆಮಳೆರಾಜ (ಚಂದ್ರಾಜ್) ಜಾನಪದ ಒಗಟು ಬಿಡಿಸುವ ಮತ್ತು ಗೀತೆಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.

ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಶಿಲ್ಪಾ ಮಾತನಾಡಿದರು. ವೇದಿಕೆಯಲ್ಲಿ ಸರಿಗಮಪ ಗಾಯಕಿ ಕು.ವಿಶೃತ ಎ. ಶಾಖ್ಯ, ಉಪ ಪ್ರಾಂಶುಪಾಲರಾದ ಭುವನ ಶ್ರೀ, ಕಾಲೇಜು ಸಂಯೋಜಕ ಡಿ.ನಾಗರಾಜು, ಉಪನ್ಯಾಸಕರಾದ ಪಾತಿಮಾಖಾನ್, ಅಶೋಕ್, ಅರ್ಶಿಯಾ ಬಾನು ಮತ್ತಿತರರು ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಜನಪದ ಕಲಾತಂಡಗಳ ಪ್ರದರ್ಶನ ನಡೆಯಿತು.

30ಕೆಆರ್ ಎಂಎನ್ 5.ಜೆಪಿಜಿ

ರಾಮನಗರದ ನ್ಯೂ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ಜಾನಪದ ಕಲಾವಿದೆ ಸವಿತಕ್ಕ ಉದ್ಘಾಟಿಸಿದರು.

Share this article