ಚಿಕ್ಕಮಗಳೂರು: ಸ್ವದೇಶಿ ವರವನ್ನು ವಿದೇಶಿ ವಧು ವರಿಸಿಕೊಳ್ಳುವ ಅಪರೂಪದ ಚಿತ್ರಣ ನಗರದ ಜಿಲ್ಲಾ ಒಕ್ಕಲಿಗರ ಕಲ್ಯಾಣ ಮಂಪಟದಲ್ಲಿ ನಡೆದ ಮದುವೆ ಕಾರ್ಯಕ್ರಮ ಪೂರ್ಣಗೊಂಡಿದ್ದು, ಇದು ಭಾರತ ಮತ್ತು ಚೀನಾ ನಿವಾಸಿಗಳ ಬಾಂಧವ್ಯವನ್ನು ಇನ್ನಷ್ಟು ದೃಢಗೊಳಿಸಿದೆ.ನಗರದ ಹೌಸಿಂಗ್ ಬೋರ್ಡ್ ಬಡಾವಣೆ ನಿವಾಸಿ ಕಸ್ತೂರಿ ಮತ್ತು ಕೆ.ಎನ್.ಶ್ರೀನಿವಾಸ್ ಅವರ ಪುತ್ರ ರೂಪಕ್ ಮತ್ತು ಚೀನಾ ದೇಶದ ಪ್ರಜೆ ಜೇಡ್ ಅವರ ಪ್ರೇಮಾಂಕುರ ಆಸ್ಟ್ರೇಲಿಯಾದ ವೃತ್ತಿಯಲ್ಲಿ ಆರಂಭಗೊಂಡಿತು. ಬಳಿಕ ಎರಡು ಕುಟುಂಬಗಳು ಒಪ್ಪಿಗೆ ಮೇರೆಗೆ ಶುಕ್ರವಾರ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದಾರೆ.ಯುವಕ ರೂಪಕ್ ಅವರು ಕಳೆದ 13 ವರ್ಷಗಳಿಂದ ಆಸ್ಟ್ರೇಲಿಯಾ ದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜೇಡ್ ಪರಸ್ಪರ ಪರಿಚಯ, ಸ್ನೇಹ ಹಾಗೂ ಪ್ರೀತಿ ತಿರುಗಿ ಮದುವೆ ಮಂಟಪಕ್ಕೆ ಕರೆತಂದಿದೆ ಎನ್ನಲಾಗಿದೆ.