ತರೀಕೆರೆ: ಅಸಭ್ಯ ವರ್ತನೆ ತೋರಿದ ಪಟ್ಟಣದ ಚಿನ್ನದ ಅಂಗಡಿ ಮಾಲೀಕನಿಗೆ ಸಾರ್ವಜನಿಕರು ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ನಡೆದಿದೆ. ತರೀಕೆರೆ ಪಟ್ಟಣದ ಎಂ.ಜಿ.ರಸ್ತೆ ಚಿನ್ನದ ಅಂಗಡಿ ಮಾಲೀಕ ಅಪ್ರಾಪ್ತ ವಯಸ್ಸಿನ ಹುಡುಗಿಯೊಬ್ಬರು ಬಿಸ್ಕತ್ ತರಲು ಹೋಗಿದ್ದಾಗ ಹುಡುಗಿಯನ್ನು ಪುಸಲಾಯಿಸಿ ತನ್ನ ಅಂಗಡಿಗೆ ಬರಲು ಹೇಳಿ ಹುಡುಗಿಯ ಕೈ ಹಿಡಿದು ಎಳೆದು ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಹುಡುಗಿ ತಂದೆ ತಾಯಿಗಳ ಬಳಿ ತಿಳಿಸಿದ್ದು, ವಿಚಾರ ತಿಳಿದು ಸಾರ್ವಜನಿಕರು ಚಿನ್ನದ ಅಂಗಡಿ ಮಾಲಿಕನಿಗೆ ಧರ್ಮದೇಟು ನೀಡಿದ್ದಾರೆ. ಅಪ್ರಾಪ್ತೆಯ ತಂದೆ ಚಿನ್ನದ ಅಂಗಡಿ ಮಾಲಿಕನ ವರ್ತನೆ ಬಗ್ಗೆ ದೂರು ನೀಡಿದ್ದು ತರೀಕೆರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.