ರಟ್ಟೀಹಳ್ಳಿ: ದುಶ್ಚಟಗಳಿಂದ ದೂರವಿದ್ದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣದ ಜೊತೆ ಆರ್ಥಿಕವಾಗಿ ಸದೃಢರಾಗಲು ಸಾಧ್ಯ, ಆ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನೇಕ ವರ್ಷಗಳಿಂದ ಶ್ರಮಿಸುತ್ತಿದೆ ಎಂದು ಧಾರವಾಡದ ಧ.ಗ್ರಾ. ಯೋ. ಪ್ರಾದೇಶಿಕ ನಿರ್ದೇಶಕರಾದ ದಯಾಶೀಲ ಅವರು ಹೇಳಿದರು.
ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮಾತನಾಡಿ, ಯಾವುದೇ ಒಬ್ಬ ಮನುಷ್ಯ ಜೀವನದಲ್ಲಿ ಯಶಸ್ವಿಯಾಗಬೇಕಾದರೆ ದುಶ್ಚಟಗಳಿಂದ ಮೊದಲು ದೂರವಿರಬೇಕು, ಅಂದಾಗ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ಜನ ಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷ ನಟರಾಜ ಬಾದಾಮಿ ಮಾತನಾಡಿ, ಧ.ಗ್ರಾ.ಯೋ.ಯಿಂದ ರಾಜ್ಯದಲ್ಲಿ ಒಂದು ಸಾವಿರ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ., ಬಡವರ ಪರವಾದ ಅನೇಕ ಕೆಲಸ ಮಾಡಲಾಗುತ್ತಿದೆ ಎಂದರು.ಪ್ರತಿಯೊಂದು ಮನೆಯಲ್ಲಿ ಹೆಣ್ಣು ಮಕ್ಕಳ ಪಾತ್ರ ಬಹು ಮುಖ್ಯವಾಗಿರುತ್ತದೆ. ಒಬ್ಬ ಪುರುಷನು ಯಶಸ್ವಿಯಾಗಬೇಕಾದರೆ ಹೆಣ್ಣು ಮಕ್ಕಳ ಪಾತ್ರವೂ ಇರುತ್ತದೆ. ಮಕ್ಕಳ ಚಟುವಟಿಕೆಯ ಬಗ್ಗೆ ಪಾಲಕರು ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಮಾಜಿ ಮುಖ್ಯ ಸಚೇತಕ ಡಿ.ಎಂ.ಸಾಲಿ, ಸಾಹಿತಿ ಡಾ. ನಿಂಗಪ್ಪ ಚಳಗೇರಿ, ಕರಬಸನಗೌಡ ಪಾಟೀಲ, ಅಧ್ಯಕ್ಷ ಶಿವಾನಂದಪ್ಪ ಕಲ್ಲವೀರಪ್ಪನವರ, ಮಂಜುನಾಥ ಸೊರಟೂರು, ಸುಭಾಷ ಹದಡೇರ, ರವೀಂದ್ರ ಮೇಲೆಬೆನ್ನೂರು, ಚಂದ್ರಶೇಖರ ಕೊಪ್ಪದ, ತಿಮ್ಮಯ್ಯ, ಮಾಲತೇಶ, ಯೋಜನಾಧಿಕಾರಿ ಸುಮಿತ್ರಾ ಜೈನ್, ರಾಜು ಕೊಪ್ಪದ, ಪಾರ್ವತಿ ಗಿರಿಧರ ಕೆ., ಸಂತೋಷ ಹಾಗೂ ವಿವಿಧ ಮುಖಂಡರು, ಯೋಜನೆಯ ಕಾರ್ಯಕರ್ತರು ಮತ್ತಿತರರು ಇದ್ದರು.