ಕನ್ನಡಪ್ರಭ ವಾರ್ತೆ ಭಟ್ಕಳ
ಭಾನುವಾರ ಶ್ರೀ ಧನ್ವಂತರಿ ಶ್ರೀ ಧನ್ವಂತರಿ ಭವನದ ಲೋಕಾರ್ಪಣೆಗೊಳಿಸಲಾಯಿತು.
ಭಾನುವಾರ 1 ಲಕ್ಷಕ್ಕೂ ಹೆಚ್ಚು ಗಿಮೂಲಿಕಾ ಸಮಿತ್ತುಗಳಿಂದ ಆರಂಭಗೊಂಡ ಕೃತಕೋಟಿ ಶ್ರೀಧನ್ವಂತರಿ ಹವನಕ್ಕೆ ಸೋಮವಾರ ಮಧ್ಯಾಹ್ನ ಮಹಾಪೂರ್ಣಾಹುತಿ ನೀಡಲಾಯಿತು. ಆ ಪ್ರಯುಕ್ತ ಬೆಳಗ್ಗೆಯಿಂದಲೇ ಧನ್ವಂತರಿ ಮಹಾ ವಿಷ್ಣುವಿಗೆ ವಿಶೇಷ ಅಭಿಷೇಕ, ಪೂಜೆ ನಡೆಯಿತು. ಮಧ್ಯಾಹ್ನ ತೀರ್ಥ ಪ್ರಸಾದ ವಿತರಣೆ ಬಳಿಕ ಸಾವಿರಕ್ಕೂ ಅಧಿಕ ಜನರು ಪ್ರಸಾದ ಸ್ವೀಕರಿಸಿದರು.ಸೋಮವಾರ ಬೆಳಗ್ಗೆಯಿಂದ ದೇವಸ್ಥಾನದ ಆವರಣದಲ್ಲಿ ಉದ್ಯಾವರ ಎಸ್ ಡಿ ಎಂ ಆಯುರ್ವೇದಿಕ ಕೇಂದ್ರದ ವತಿಯಿಂದ ಏರ್ಪಡಿಸಲಾದ ಉಚಿತ ಆಯುರ್ವೇದಿಕ ತಪಾಸಣಾ ಶಿಬಿರದಲ್ಲಿ ನೂರಾರು ಜನರು ಪಾಲ್ಗೊಂಡು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರಿಂದ ಸಲಹೆ ಪಡೆದರು.ಮಧ್ಯಾಹ್ನ ಸಿದ್ದಾಪುರ ಶಿರಳಗಿಯ ಶ್ರೀಚೈತನ್ಯ ರಾಜರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಆಗಮಿಸಿ ದೇವರ ದರ್ಶನ ಪಡೆದು ತಮ್ಮ ಆಶೀರ್ವಚನ ನೀಡಿದರು. ಇದೇ ಸಂದರ್ಭ ಕುಂದಾಪುರದ ನಾಯ್ಕನಕಟ್ಟೆಯ ಆಯುರ್ವೇದ ವೈದ್ಯ ಡಾ. ಬಾಲಚಂದ್ರ ಭಟ್ಟ ಆಯುರ್ವೇದದಲ್ಲಿ ಆರೋಗ್ಯದ ಕುರಿತು ಉಪನ್ಯಾಸ ನೀಡಿದರು. ಸಂಜೆ ಸರಸ್ವತಿ ಮಹಿಳಾ ಭಜನಾ ಮಂಡಳಿ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಗಮನ ಸೆಳೆಯಿತು. ರಾತ್ರಿ 8ರಿಂದ ಆರಂಭಗೊಂಡ ಶಿವಧೂತ ಗುಳಿಗ ನಾಟಕವನ್ನು ಸಾವಿರಾರು ಜನರು ವೀಕ್ಷಿಸಿ ಆನಂದ ಪಟ್ಟರು. ಮಂಗಳವಾರವಾದ ಇಂದೂ ಸಹ ವರ್ಧಂತ್ಯುತ್ಸವದ ಧಾರ್ಮಿಕ ಕಾರ್ಯಕ್ರಮ, ಸಾಮೂಹಿಕ ಧನ್ವಂತರಿ ಹವನ, ತುಳಸಿ ಅರ್ಚನಾಪೂರ್ವಕ ಕಲ್ಪೋಕ್ತ ಮಹಾಪೂಜೆ,ತೀರ್ಥ ಪ್ರಸಾದ ವಿತರಣೆ, ಪ್ರಸಾದ ಭೋಜನ, ಸಂಜೆ ರಂಗಪೂಜೆ, ಅಷ್ಠಾವಧಾನ ಸೇವೆ, ಆಶೀರ್ಗಹಣ, ಪ್ರಸಾದ ಭೋಜನೆ ನಡೆಯಲಿದೆ. ಸಂಜೆ 6 ಗಂಟೆಯಿಂದ ಪರಮೇಶ್ವರ ಹೆಗಡೆ, ರಾಘವೇಂದ್ರ ಹೆಗಡೆ, ಶಂಭು ಭಟ್ಟ ಕೋಟಾ ಹಾಗೂ ಮಹೇಶ ಮಹಾಲೆ ಸಂಗಡಿಗರಿಂದ ಸಂಗೀತ ಸಂಜೆ ನಡೆಯಲಿದೆ.